ತೈಝೆ ಯುವಕರಿಗೆ ಪೋಪ್: ದೇವರು ನಮಗೆ ಅರ್ಥ ಹಾಗೂ ಭರವಸೆಯನ್ನು ನೀಡುತ್ತಾರೆ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್
ವಾರ್ಷಿಕ ತೈಝೆ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿರುವ ಯುವ ಸಮೂಹಕ್ಕೆ ಪೋಪ್ ಫ್ರಾನ್ಸಿಸ್ ಅವರು ಸಂದೇಶವನ್ನು ಕಳುಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸದಾ ಕ್ರಿಸ್ತ ಕಂದನಿಗೆ ಹತ್ತಿರವಿರುವಂತೆ ಅವರಿಗೆ ಕರೆ ನೀಡಿದ್ದಾರೆ. ಪರಿಶುದ್ಧತೆಯಲ್ಲಿ ಹಾಗೂ ವಿಶ್ವಾಸದಲ್ಲಿ ಬೆಳೆಯುವುದನ್ನು ಅವರ ಬದುಕನ್ನು ಪರಿಪೂರ್ಣವಾಗಿಸುತ್ತದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
"ದೇವರು ನಮ್ಮ ಬದುಕಿಗೆ ಅರ್ಥ ಹಾಗೂ ಭರವಸೆಯನ್ನು ನೀಡುತ್ತಾರೆ" ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಈ ಸಂದೇಶಕ್ಕೆ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಸಹಿ ಹಾಕಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು ಲಿಥುಯೇನಿಯಾ, ಈಸ್ಟೋನಿಯಾ ಹಾಗೂ ಇನ್ನಿತರ ದೇಶಗಳಿಗೆ ತಾವು ಭೇಟಿ ನೀಡಿದ ಕುರಿತು ನೆನಪಿಸಿಕೊಂಡಿದ್ದು, ಅಂದು ಲೂಥರನ್ ದೇವಾಲಯವೊಂದರಲ್ಲಿ ನೆರೆದಿದ್ದ ಯುವ ಸಮೂಹ ಹಾಗೂ ಅಲ್ಲಿನ ಅಂತರ್ಧರ್ಮೀಯ ಸಂವಾದದ ಕುರಿತು ಹರ್ಷವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ "ಯೇಸು ಕ್ರಿಸ್ತರನ್ನು ನಂಬುವ ಹಾಗೂ ವಿಶ್ವಾಸಿಸುವ ನಾವೆಲ್ಲರೂ ಒಂದಾಗಿರುವುದು ಎಷ್ಟು ಚೆನ್ನಾಗಿದೆ" ಎಂದು ಹೇಳಿದ್ದಾರೆ.
ಅಂತಿಮವಾಗಿ ತೈಝೆ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ಸದಸ್ಯರ ಮೇಲೆ ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಂದೇಶದಲ್ಲಿ ಪ್ರೇಷಿತ ಆಶೀರ್ವಾದವನ್ನು ಕೋರಿದ್ದಾರೆ.