ಬೆತ್ಲೆಹೇಮ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಪೋಪ್: ನಿಮ್ಮ ಅಮೂಲ್ಯ ವಿಶ್ವಾಸವನ್ನು ಕಾಪಿಟ್ಟುಕೊಳ್ಳಿ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್
ಪೋಪ್ ಫ್ರಾನ್ಸಿಸ್ ಅವರು ಕ್ರಿಸ್ಮಸ್ ಹಬ್ಬದ ಹಿನ್ನೆಲೆ ಬೆತ್ಲೆಹೇಂ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಸಂದೇಶವನ್ನು ಕಳುಹಿಸಿದ್ದಾರೆ. ಈ ಸಂದೇಶದಲ್ಲಿ ಅವರು ಸದಾ ಯೇಸುಕ್ರಿಸ್ತರಲ್ಲಿ ನಂಬಿಕೆಯನ್ನಿಡಿ ಹಾಗೂ ನಿಮ್ಮ ಅಮೂಲ್ಯ ವಿಶ್ವಾಸವನ್ನು ಕಾಪಿಟ್ಟುಕೊಳ್ಳಿರಿ ಎಂದು ಹೇಳಿದ್ದಾರೆ.
ಬೆತ್ಲೆಹೇಮ್ ಯೂನಿವರ್ಸಿಟಿಯ ಉಪ ಕುಲಪತಿಯಾಗಿರುವ ಬ್ರದರ್ ಹೆಕ್ಟರ್ ಹರ್ನಾನ್ ಸಾಂಟೋಸ್ ಗೊನ್ಸಾಲೆಸ್, ಎಫ್.ಎಸ್.ಸಿ ಅವರಿಗೆ ಕಳುಹಿಸಿರುವ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು ವಿದ್ಯಾರ್ಥಿಗಳು ಸದಾ ಯೇಸು ಕ್ರಿಸ್ತರಲ್ಲಿ ನಂಬಿಕೆ ಹಾಗೂ ವಿಶ್ವಾಸವನ್ನಿಡಬೇಕು ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಜ್ಯೂಬಿಲಿ ವರ್ಷದಲ್ಲಿ ನೀವೆಲ್ಲರೂ ಆಧ್ಯಾತ್ಮಿಕ ನವೀಕರಣವನ್ನು ಹೊಂದಿ, ನಿಮ್ಮ ಕೌಶಲ್ಯಗಳಿಗನುಗುಣವಾಗಿ ಪ್ರಭುವಿನ ಶುಭ ಸಂದೇಶವನ್ನು ಸಾರುವಂತಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಯುವ ಸಮೂಹವು ತನ್ನ ವಿಶ್ವಾಸವನ್ನು ಎಂದಿಗೂ ಕಾಪಿಟ್ಟುಕೊಳ್ಳಬೇಕು ಎಂದು ನಾನು ಮತ್ತೆ ಮತ್ತೆ ಹೇಳುತ್ತೇನೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಇದೇ ವೇಳೆ ಅವರು ಎಲ್ಲರಿಗೂ "ಪ್ರಭುವಿನ ಶಾಂತಿ ಹಾಗೂ ಸಂತೋಷ ನಿಮ್ಮೆಲ್ಲರಲ್ಲಿರಲಿ" ಎಂದು ಹೇಳುತ್ತಾ, ಅವರಿಗೆ ಶುಭವನ್ನು ಕೋರಿದ್ದಾರೆ.