ಪೋಪ್ ಫ್ರಾನ್ಸಿಸ್: ಜಗತ್ತಿನಲ್ಲಿ ಯುದ್ಧ ಹಾಗೂ ಹಿಂಸೆ ನಿಲ್ಲಬೇಕು

ಸಂತ ಪೇತ್ರರ ಚೌಕದಲ್ಲಿರುವ ಕ್ರಿಸ್ತ ಜಯಂತಿ ಗೋದಲಿ ಹಾಗೂ ಕ್ರಿಸ್ಮಸ್ ಟ್ರೀ ಯ ಪ್ರಾಯೋಜಕರನ್ನು ಭೇಟಿ ಮಾಡಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಈ ಜಗತ್ತಿನಲ್ಲಿ ಯುದ್ಧಗಳು ನಿಂತು, ಶಾಂತಿ ಮೂಡುವಂತೆ ಪ್ರಾರ್ಥಿಸಬೇಕೆಂದು ಕೋರಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಸಂತ ಪೇತ್ರರ ಚೌಕದಲ್ಲಿರುವ ಕ್ರಿಸ್ತ ಜಯಂತಿ ಗೋದಲಿ ಹಾಗೂ ಕ್ರಿಸ್ಮಸ್ ಟ್ರೀ ಯ ಪ್ರಾಯೋಜಕರನ್ನು ಭೇಟಿ ಮಾಡಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಈ ಜಗತ್ತಿನಲ್ಲಿ ಯುದ್ಧಗಳು ನಿಂತು, ಶಾಂತಿ ಮೂಡುವಂತೆ ಪ್ರಾರ್ಥಿಸಬೇಕೆಂದು ಕೋರಿದ್ದಾರೆ.  

ಕ್ರಿಸ್ತ ಜಯಂತಿ ಎಂಬುದು ದೀನತೆ ಹಾಗೂ ಸಂತೋಷವನ್ನು ಸಾರುವ ಸುದಿನವಾಗಿದೆ ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು "ಮರ ಎಂಬುದು ಧರ್ಮಸಭೆಯ ರೂಪಕವಾಗಿದೆ" ಎಂದು ಹೇಳಿದರು. 

"ಯುದ್ಧ ಎಂಬುದು ಮಾನವರ ಸೋಲಾಗಿದ್ದು, ಅದು ಯಾವ ಸಮಸ್ಯೆಗಳನ್ನೂ ಬಗೆಹರಿಸುವುದಿಲ್ಲ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

ವಿಶ್ವದಾದ್ಯಂತ ನಡೆಯುತ್ತಿರುವ ಯುದ್ಧಗಳನ್ನು ನೆನಪಿಸಿಕೊಂಡ ಪೋಪ್ ಫ್ರಾನ್ಸಿಸರು "ರಕ್ತಸಾಕ್ಷಿಯಾಗಿರುಗುವ ಉಕ್ರೇನ್, ಪ್ಯಾಲೆಸ್ತೇನ್, ಮ್ಯಾನ್ಮಾರ್" ದೇಶಗಳಲ್ಲಿ ಶಾಂತಿ ನೆಲೆಸುವಂತೆ ವಿಶೇಷವಾಗಿ ಪ್ರಾರ್ಥಿಸಿದರು. ಈ ದೇಶಗಳಲ್ಲಿ ಯುದ್ಧದ ಕಾರಣದಿಂದಾಗಿ ಮಡಿದ ಮುಗ್ಧ ಮಕ್ಕಳಿಗಾಗಿ ಪೋಪ್ ಫ್ರಾನ್ಸಿಸ್ ಕಂಬನಿ ಮಿಡಿದರು.

ಶಾಂತಿಗಾಗಿ ತಮ್ಮ ಮನವಿಯನ್ನು ಮತ್ತೆ ನವೀಕರಿಸಿದ ಪೋಪ್ ಫ್ರಾನ್ಸಿಸ್ ಅವರು "ಈ ಜಗದಲ್ಲಿ ಮತ್ತೆ ಶಾಂತಿ ನೆಲೆಸಲಿ ಎಂದು ಎಲ್ಲರೂ ಪ್ರಾರ್ಥಿಸೋಣ" ಎಂದು ಹೇಳಿದರು. ಧರ್ಮಸಭೆಯಲ್ಲಿ ಎಲ್ಲರಿಗೂ ಸ್ಥಳವಿದೆ. ಹಾಗಾಗಿ ಯಾರು ಬೇಕಾದರೂ ಇಲ್ಲಿಗೆ ಬರಬಹುದು. ನೆಮ್ಮದಿ, ಶಾಂತಿ ಹಾಗೂ ಸಂತೋಷವನ್ನು ಹರಸಿಕೊಂಡು ಬರಬಹುದು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.   

07 December 2024, 16:03