ಪೋಪ್ ಫ್ರಾನ್ಸಿಸ್: ಭರವಸೆ ಮತ್ತು ಕರುಣೆ ಪ್ರಪಂಚವನ್ನು ಹೆಚ್ಚು ಸುಂದರವಾಗಿಸುತ್ತವೆ
ವರದಿ: ಕ್ರಿಸ್ಟೋಫರ್ ವೆಲ್ಸ್
ಪ್ರಖ್ಯಾತ ಸಂವಹನ ಮಾಧ್ಯಮವಾದ ಬಿಬಿಸಿ ತನ್ನ "ದಿನದ ಸುಭಾಷಿತ" ದ ಅಡಿಯಲ್ಲಿ ಪೋಪ್ ಫ್ರಾನ್ಸಿಸ್ ಅವರ ಆಡಿಯೋ ಸಂದೇಶವನ್ನು ಪ್ರಸಾರ ಮಾಡಿದೆ. ಈ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು ಭವಿಷ್ಯವನ್ನು ನಕಾರಾತ್ಮಕತೆಯಿಂದಲ್ಲ ಬದಲಿಗೆ ಸಕಾರಾತ್ಮಕತೆ, ಭರವಸೆ ಹಾಗೂ ಕರುಣೆಯಿಂದ ನೋಡುವಂತೆ ಜನತೆಗೆ ಕರೆ ನೀಡಿದ್ದಾರೆ.
"ಜ್ಯೂಬಿಲಿ ವರ್ಷದಲ್ಲಿ ನಾವೆಲ್ಲರೂ ಕರುಣೆಯನ್ನು ಇತರರೊಂದಿಗೆ ಸಂವಹಿಸುವಾಗ ಹಾಗೂ ಅವರ ಜೊತೆ ಬೆರೆಯುವ ಸಾಧನವನ್ನಾಗಿ ಬಳಸುತ್ತೇವೆ ಎಂಬ ಕುರಿತು ನಾನು ಭರವಸೆಯನ್ನು ಇಡುತ್ತಿದ್ದೇನೆ" ಎಂದು ಪೋಪ್ ಫ್ರಾನ್ಸಿಸ್ ಅವರು ಈ ಸಂದೇಶದಲ್ಲಿ ಹೇಳಿದ್ದಾರೆ.
"ಈ ಜಗತ್ತಿನಲ್ಲಿ ಹೆಚ್ಚು ಭರವಸೆ, ಕರುಣೆ ಹಾಗೂ ಪ್ರೀತಿ ಇದ್ದರೆ ಅಂತಹ ಸಮಾಜ ಹಾಗೂ ಸಮುದಾಯವು ಮತ್ತಷ್ಟು ಸುಂದರವಾಗುತ್ತದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಈ ಆಡಿಯೋ ಸಂದೇಶದಲ್ಲಿ ನುಡಿದಿದ್ದಾರೆ.
ಪ್ರಖ್ಯಾತ ಬ್ರಿಟಿಷ್ ಲೇಖಲ ಜಿ ಕೆ ಚೆಸ್ಟರ್ಸನ್ ಅವರ ನುಡಿಗಳನ್ನು ನೆನಪಿಸಿಕೊಳ್ಳುವ ಪೋಪ್ ಫ್ರಾನ್ಸಿಸ್ ಅವರು ನಮ್ಮ ಭವಿಷ್ಯವನ್ನು ಧನ್ಯತೆಯಿಂದ ನಾವು ಎದುರುನೋಡಬೇಕು. ನಮ್ಮ ಬದುಕಿನಲ್ಲಿ ಧನ್ಯತಾಭಾವ ಎಂದಿಗೂ ಜೀವಂತವಿರಬೇಕು ಎಂದು ಹೇಳಿದರು.