ಹುಡುಕಿ

ಹೊಸ ಎಲೆಕ್ಟ್ರಿಕ್ ಪೋಪ್-ಮೊಬೈಲ್ ವಾಹನವನ್ನು ಪೋಪ್ ಫ್ರಾನ್ಸಿಸ್ ಅವರಿಗೆ ಉಡುಗೊರೆಯಾಗಿ ನೀಡಿದ ಮರ್ಸಿಡೀಸ್ ಬೆನ್ಜ್

ಮರ್ಸಿಡೀಸ್ ಬೆನ್ಜ್ ಕಂಪನಿಯು ಪೋಪ್ ಫ್ರಾನ್ಸಿಸ್ ಅವರಿಗೆ ಹೊಸ ಎಲೆಕ್ಟ್ರಿಕ್ ಪೋಪ್-ಮೊಬೈಲ್ ವಾಹನವನ್ನು ಉಡುಗೊರೆಯಾಗಿ ನೀಡಿದೆ. ಜ್ಯೂಬಿಲಿ 2025 ರ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರಿಗೆ ಈ ಉಡುಗೊರೆಯನ್ನು ನೀಡಲಾಗಿದೆ.

ವರದಿ: ಕೀಲ್ಚೆ ಗುಸ್ಸೀ, ಅಜಯ್ ಕುಮಾರ್

ಮರ್ಸಿಡೀಸ್ ಬೆನ್ಜ್ ಕಂಪನಿಯು ಪೋಪ್ ಫ್ರಾನ್ಸಿಸ್ ಅವರಿಗೆ ಹೊಸ ಎಲೆಕ್ಟ್ರಿಕ್ ಪೋಪ್-ಮೊಬೈಲ್ ವಾಹನವನ್ನು ಉಡುಗೊರೆಯಾಗಿ ನೀಡಿದೆ. ಜ್ಯೂಬಿಲಿ 2025 ರ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರಿಗೆ ಈ ಉಡುಗೊರೆಯನ್ನು ನೀಡಲಾಗಿದೆ.

ಮರ್ಸಿಡೀಸ್ ಬೆನ್ಜ್ ಕಂಪನಿಯ ಸಿಇಓ ಓಲಾ ಕಲ್ಲೇನಿಯುಸ್ ಹಾಗೂ ಅವರ ಕಂಪನಿಯ ಇತರೆ ಸದಸ್ಯರು ಪೋಪ್ ಫ್ರಾನ್ಸಿಸ್ ಅವರಿಗೆ ಹೊಸ ಎಲೆಕ್ಟ್ರಿಕ್ ಪೋಪ್ ಮೊಬೈಲ್ ವಾಹನವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಿಇಓ ಓಲಾ ಕಲೇನಿಯುಸ್ ಅವರು "ಪವಿತ್ರ ತಂದೆ ಪೋಪ್ ಫ್ರಾನ್ಸಿಸ್ ಅವರು ಎಲ್ಲಾ ಅವಶ್ಯಕತೆಗಳಿಗಾಗಿ ನಾವು ಪೋಪ್ ಮೊಬೈಲ್ ವಾಹನವನ್ನು ನೀಡಿರುವುದು ನಮಗೆ ಹೆಮ್ಮೆಯನ್ನು ತಂದಿದೆ" ಎಂದು ಹೇಳಿದ್ದಾರೆ.

ಮುಂದಿನ ಪೋಪರ ಕಾರ್ಯಕ್ರಮವನ್ನು ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ ಅವರು ಇದೇ ಪೋಪ್ ಮೊಬೈಲ್ ವಾಹನದೊಂದಿಗೆ ಆರಂಭಿಸುತ್ತಾರೆ. ವ್ಯಾಟಿಕನ್ನಿನ ಸಂತ ಪೇತ್ರರ ಚೌಕಕ್ಕೆ ಪೋಪ್ ಫ್ರಾನ್ಸಿಸ್ ಅವರು ಈ ವಾಹನದಲ್ಲಿ ಆಗಮಿಸಲಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಮನವಿಯಂತೆ, ಇದನ್ನು ತಯಾರಿಸಿದ ಎಲ್ಲಾ ಸದಸ್ಯರು ಈ ವೇಳೆ ಅಲ್ಲಿದ್ದರು.

ಸುಮಾರು ನೂರು ವರ್ಷಗಳಿಂದ ಪೋಪ್ ಫ್ರಾನ್ಸಿಸ್ ಅವರ ಅಧಿಕೃತ ವ್ಯಾಟಿಕನ್ ವಾಹನವಾದ ಪೋಪ್ ಮೊಬೈಲ್ ಅನ್ನು ವ್ಯಾಟಿಕನ್ ಸಹಯೋಗದೊಂದಿಗೆ ಮರ್ಸಿಡೀಸ್ ಬೆನ್ಜ್ ಸಂಸ್ಥೆಯು ನೀಡುತ್ತಿದೆ. ಮೊಟ್ಟ ಮೊದಲ ಬಾರಿಗೆ 1930 ರಲ್ಲಿ ಪೋಪ್ ಹನ್ನೊಂದನೇ ಭಕ್ತಿನಾಥರಿಗೆ ಮರ್ಸಿಡೀಸ್ ಬೆನ್ಜ್ ಪೋಪ್ ಮೊಬೈಲ್ ವಾಹನವನ್ನು ನೀಡಿತ್ತು. 

 

05 December 2024, 16:41