ಹುಡುಕಿ

ರಷ್ಯಾದ ಪ್ರೇಷಿತ ರಾಯಭಾರಿಗೆ ಪೋಪ್: ಯುದ್ಧ ಎಂಬುದು ಮಾನವ ಕುಟುಂಬದ ಮೇಲೆ ಮಾಡಲಾದ ಗಾಯ

ಉಕ್ರೇನ್ ದೇಶದಲ್ಲಿನ ಯುದ್ಧಕ್ಕೆ ಸಾವಿರ ದಿನಗಳಾದ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ರಷ್ಯಾದಲ್ಲಿನ ಪ್ರೇಷಿತ ರಾಯಭಾರಿಗೆ ಪತ್ರವನ್ನು ಬರೆದಿದ್ದಾರೆ. ಹೇಗೆ ಯುದ್ಧ ಎಂಬುದು ಮುಗ್ಧ ಮಾನವರ ಮೇಲಿನ ದಾಳಿಯಾಗಿದೆ ಹಾಗೂ ಸಾಕಷ್ಟು ನೋವುಗಳನ್ನು ಉಂಟುಮಾಡುತ್ತಿದೆ ಎಂದು ಹೇಳಿರುವ ಅವರು ರಾಜತಾಂತ್ರಿಕ ವಿಧದಲ್ಲಿ ಯುದ್ಧವನ್ನು ನಿಲ್ಲಿಸುವ ಪ್ರಯತ್ನಗಳನ್ನು ಇನ್ನೂ ಹೆಚ್ಚಾಗಿ ಮಾಡಬೇಕೆಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ವರದಿ: ಸಾಲ್ವತೋರೆ ಚೆರ್ನೂಝಿಯೋ, ಅಜಯ್ ಕುಮಾರ್

ಉಕ್ರೇನ್ ದೇಶದಲ್ಲಿನ ಯುದ್ಧಕ್ಕೆ ಸಾವಿರ ದಿನಗಳಾದ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ರಷ್ಯಾದಲ್ಲಿನ ಪ್ರೇಷಿತ ರಾಯಭಾರಿಗೆ ಪತ್ರವನ್ನು ಬರೆದಿದ್ದಾರೆ. ಹೇಗೆ ಯುದ್ಧ ಎಂಬುದು ಮುಗ್ಧ ಮಾನವರ ಮೇಲಿನ ದಾಳಿಯಾಗಿದೆ ಹಾಗೂ ಸಾಕಷ್ಟು ನೋವುಗಳನ್ನು ಉಂಟುಮಾಡುತ್ತಿದೆ ಎಂದು ಹೇಳಿರುವ ಅವರು ರಾಜತಾಂತ್ರಿಕ ವಿಧದಲ್ಲಿ ಯುದ್ಧವನ್ನು ನಿಲ್ಲಿಸುವ ಪ್ರಯತ್ನಗಳನ್ನು ಇನ್ನೂ ಹೆಚ್ಚಾಗಿ ಮಾಡಬೇಕೆಂದು ಹೇಳಿದ್ದಾರೆ ಎಂದು ವರದಿಯಾಗಿದೆ.  

ಉಕ್ರೇನ್ ದೇಶದಲ್ಲಿ ಯುದ್ಧವು ಇನ್ನೂ ಮುಂದುವರೆದಿರುವುದರ ಕುರಿತು ತಮ್ಮ ನೋವನ್ನು ವ್ಯಕ್ತಪಡಿಸಿರುವ ಪೋಪ್ ಫ್ರಾನ್ಸಿಸ್ ಅವರು "ಯುದ್ಧ ಎಂಬುದು ಅನಾವಶ್ಯಕ ಹಿಂಸೆಯಾಗಿದ್ದು, ಇದರಲ್ಲಿ ತಮ್ಮ ಯಾವುದೇ ತಪ್ಪಿಲ್ಲದ ಮುಗ್ಧ ಜನರು, ವಿಶೇಷವಾಗಿ ಮಕ್ಕಳು ಸಾಯುತ್ತಿದ್ದಾರೆ" ಎಂದು ಹೇಳಿದ್ದಾರೆ. ಈ ಯುದ್ಧ ಆರಂಭವಾಗದಾಗಿನಿಂದ ಈವರೆಗೂ ಸಹ ಪೋಪ್ ಫ್ರಾನ್ಸಿಸ್ ಅವರು ಯುದ್ಧವನ್ನು ನಿಲ್ಲಿಸಿ, ಇಲ್ಲಿನ ಶಾಂತಿಯನ್ನು ಸ್ಥಾಪಿಸುವ ಕುರಿತಾಗಿ ಸದಾ ಮನವಿಯನ್ನು ಮಾಡುತ್ತಲೇ ಇದ್ದಾರೆ.

ತಮ್ಮ ಪತ್ರದಲ್ಲಿ ಪೋಪ್ ಫ್ರಾನ್ಸಿಸ್ ಅವರು ಮಾನವ ವೇದನೆ ಹಾಗೂ ಯಾತನೆಯ ಕುರಿತು ಮಾತನಾಡಿದ್ದು, ತಮ್ಮ ನೆಚ್ಚಿನ ಲೇಖಕ ಫ್ಯೊದೋರ್ ದಾಸ್ತೋವ್ಸ್ಕಿ ಅವರನ್ನು ಹಾಗೂ ಅವರ "ದಿ ಬ್ರದರ್ಸ್ ಕರಮಜೋವ್" ಪುಸ್ತಕವನ್ನು ಉಲ್ಲೇಖಿಸಿದ್ದಾರೆ.

ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು ಜಗತ್ತಿನಲ್ಲಿ ಶಾಂತಿ ನೆಲೆಸಿ, ಆ ಮೂಲಕ ಯುದ್ಧಗಳಿಂದ ಆಗುತ್ತಿರುವ ಅನಾಹುತಗಳು, ಸಂಕಷ್ಟಗಳು, ಯಾತನೆ, ವೇದನೆ, ಭಾದೆಗಳು ಕೊನೆಯಾಗಲಿ ಎಂದು ಹೇಳಿದ್ದಾರೆ. ಮುಗ್ಧ ಜನರ ವಿಶೇಷವಾಗಿ ಮಕ್ಕಳ ಜೀವಗಳು ಉಳಿಯಲಿ ಎಂದು ಹೇಳಿರುವ ಅವರು ಈ ಹಿನ್ನೆಲೆಯಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಸಲುವಾಗಿ ಹೆಚ್ಚಿನ ರಾಜತಾಂತ್ರಿಕ ಶ್ರಮವನ್ನು ವ್ಯಯಿಸಬೇಕು ಎಂದು ಹೇಳಿದ್ದಾರೆ.        

14 December 2024, 16:31