ಮಾನವೀಯ ಕಾನೂನನ್ನು ಗೌರವಿಸುವಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ ಪೋಪ್ ಫ್ರಾನ್ಸಿಸ್
ವರದಿ: ಕ್ರಿಸ್ಟೋಫರ್ ವೆಲ್ಸ್
ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ತಮ್ಮ ತ್ರಿಕಾಲ ಪ್ರಾರ್ಥನೆಯ ನಂತರ ಜಗತ್ತಿನಲ್ಲಿ ಹಿಂಸೆ ತಲೆದೋರಿರುವ ಪ್ರದೇಶಗಳಲ್ಲಿ ಮಾನವೀಯ ಕಾನೂನಿಗೆ ಗೌರವ ನೀಡುವಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ಆಗ್ರಹಿಸಿದ್ದಾರೆ. ಇದೇ ವೇಳೆ ಜಗತ್ತಿನಲ್ಲಿ ಯುದ್ಧಗಳು ನಿಂತು ಶಾಂತಿ ಮರುಸ್ಥಾಪನೆಯಾಗಲಿ ಎಂದು ಹೇಳಿದ್ದಾರೆ.
"ಇನ್ನು ಮುಂದೆ ನಾಗರೀಕರನ್ನು ಹತ್ಯೆ ಮಾಡಬಾರದು. ಶಾಲೆಗಳು ಹಾಗೂ ಆಸ್ಪತ್ರೆಗಳ ಮೇಲೆ ದಾಳಿ ಮಾಡಬಾರದು. ಕೆಲಸದ ಕಚೇರಿಗಳ ಮೇಲೆ ದಾಳಿ ನಡೆಸಬಾರದು" ಎಂದು ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ತ್ರಿಕಾಲ ಪ್ರಾರ್ಥನೆಯ ನಂತರ ಹೇಳಿದ್ದಾರೆ.
ವರ್ಷದ ಮೊದಲ ಭಾನುವಾರದಂದು ತ್ರಿಕಾಲ ಪ್ರಾರ್ಥನೆಯ ನಂತರ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಅಂತರಾಷ್ಟ್ರೀಯ ಸಮುದಾಯವು ಮಾನವೀಯ ಕಾನೂನುಗಳನ್ನು ಗೌರವಿಸಬೇಕು ಎಂದು ಅವರು ಹೇಳಿದ್ದಾರೆ.
"ಯುದ್ಧ ಎಂದಿಗೂ ಸೋಲು" ಎಂಬುದನ್ನು ಪೋಪ್ ಫ್ರಾನ್ಸಿಸ್ ಅವರು ಮತ್ತೆ ಪುನರುಚ್ಛರಿಸಿದರು. "ಇಡೀ ಜಗತ್ತಿನಲ್ಲಿ ಎಲ್ಲಾ ರೀತಿಯ ಯುದ್ಧಗಳು ಹಾಗೂ ಹಿಂಸೆಗಳು ಕೊನೆಗೊಳ್ಳಲಿ. ಈ ಜಗತ್ತಿನಲ್ಲಿ ಶಾಂತಿ ಮರುಸ್ಥಾಪನೆಯಾಗಲಿ" ಎಂದು ಹೇಳುವ ಮೂಲಕ ಪೋಪ್ ಫ್ರಾನ್ಸಿಸ್ ಅವರು ಶಾಂತಿಯ ಕುರಿತ ತಮ್ಮ ಮನವಿಯನ್ನು ಪುನರುಚ್ಛರಿಸಿದ್ದಾರೆ.