ಪ್ರಾರ್ಥನೆಯಲ್ಲಿ ಸುವಾರ್ತಾ ಪ್ರಸಾರಕರಾಗಲು ಮಕ್ಕಳಿಗೆ ಕರೆ ನೀಡಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಸುವಾರ್ತಾ ಪ್ರಸಾರ ಬಾಲ್ಯದ ದಿನದ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ಮಕ್ಕಳಿಗೆ ಸದಾ ಪ್ರಾರ್ಥಿಸುವಂತೆ ಹಾಗೂ ಕ್ರೈಸ್ತ ಸುವಾರ್ತಾ ಪ್ರಸಾರ ಸೇವೆಗೆ ಆ ಮೂಲಕ ನೆರವಾಗುವಂತೆ ಕಿವಿಮಾತನ್ನು ಹೇಳಿದ್ದಾರೆ.
ಪ್ರಭುವಿನ ದೈವದರ್ಶನದ ಹಬ್ಬದ ದಿನ ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಮಾತನಾಡುತ್ತಾ ಈ ಮಾತನ್ನು ಹೇಳಿದ್ದಾರೆ. ಸುವಾರ್ತಾ ಪ್ರಸಾರ ಬಾಲ್ಯದ ದಿನವನ್ನು 1950 ರಲ್ಲಿ ಅಂದಿನ ವಿಶ್ವಗುರು ಹನ್ನೆರಡನೇ ಭಕ್ತಿನಾಥರು ಸ್ಥಾಪಿಸಿದ್ದರು.
ಸುವಾರ್ತಾ ಪ್ರಸಾರ ಬಾಲ್ಯದ ದಿನದ ಈ ವರ್ಷದ ಶೀರ್ಷಿಕೆ "ಹೋಗಿ, ಎಲ್ಲರನ್ನೂ ಔತಣಕ್ಕೆ ಕರೆಯಿರಿ" ಎಂಬುದಾಗಿತ್ತು.
ಪೋಪ್ ಫ್ರಾನ್ಸಿಸ್ ಅವರು ಮಕ್ಕಳಿಗೆ ಸದಾ ಪ್ರಾರ್ಥಿಸುವಂತೆ ಹಾಗೂ ಕ್ರೈಸ್ತ ಸುವಾರ್ತಾ ಪ್ರಸಾರ ಸೇವೆಗೆ ಆ ಮೂಲಕ ನೆರವಾಗುವಂತೆ ಕಿವಿಮಾತನ್ನು ಹೇಳಿದ್ದಾರೆ.
ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು "ಈಸ್ಟರ್ನ್ ಧರ್ಮಸಭೆಯ ಭಕ್ತಾಧಿಗಳು ಕ್ರಿಸ್ತ ಜಯಂತಿಯನ್ನು ಜ್ಯೂಲಿಯನ್ ಕ್ಯಾಲೆಂಡರ್ ಪ್ರಕಾರ ಜನವರಿ 7 ರಂದು ಆಚರಿಸುತ್ತಾರೆ. ಅವರೆಲ್ಲರಿಗೂ ಶುಭಾಶಯಗಳು ಎಂದು ಹೇಳಿದ್ದಾರೆ.