ಹುಡುಕಿ

ಪೋಪ್ ಫ್ರಾನ್ಸಿಸ್: ಯಾತ್ರೆಯಲ್ಲಿ ನಕ್ಷತ್ರವು ಕ್ರಿಸ್ತರನ್ನು ನೋಡುವಂತೆ ಪ್ರೇರೇಪಿಸುತ್ತದೆ

ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ನಿನ ಸಂತ ಪೇತ್ರರ ಮಹಾದೇವಾಲಯದಲ್ಲಿ ಪ್ರಭುವಿನ ದೈವದರ್ಶನದ ಮಹೋತ್ಸವದ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಈ ವೇಳೆ ಮೂರು ರಾಯರಿಗೆ ದಾರಿ ತೋರಿದ ನಕ್ಷತ್ರದ ಕುರಿತು ಮಾತನಾಡಿರುವ ಅವರು, ಈ ನಕ್ಷತ್ರವು ಪ್ರಭುವನ್ನು ಎಲ್ಲಾ ವಸ್ತುಗಳಲ್ಲಿಯೂ ಕಾಣಲು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್

"ಈ ಜಗತ್ತಿನ ಎಲ್ಲಾ ಮಾನವರು ತಮ್ಮ ವೈವಿಧ್ಯತೆಯೊಂದಿಗೆ ಒಂದಾಗಿ ಶಾಂತಿ ಹಾಗೂ ಸಾಮರಸ್ಯದಿಂದ ಜೀವಸಲಿ ಎಂಬ ದೇವರ ಕನಸನ್ನು ಈ ನಕ್ಷತ್ರವು ಪ್ರತಿಬಿಂಬಿಸುತ್ತದೆ" ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರಬೋಧನೆಯಲ್ಲಿ ಹೇಳಿದ್ದಾರೆ. ಮೂರು ರಾಯರನ್ನು ಯೇಸುವಿನ ಬಳಿಗೆ ಕರೆ ತಂದ ನಕ್ಷತ್ರದ ಮೂರು ವೈಶಿಷ್ಟ್ಯಗಳ ಕುರಿತು ಪೋಪ್ ಫ್ರಾನ್ಸಿಸ್ ಅವರು ಮಾತನಾಡಿದರು.

"ನಕ್ಷತ್ರದ ಪ್ರಕಾಶಮಾನತೆಯ ಕುರಿತು ಮಾತನಾಡಿದ ಅವರು "ನಕ್ಷತ್ರವು ಪ್ರಕಾಶಮಾನವಾಗಿರುವಂತೆ ಹಳೆಯ ಕಾಲದ ರಾಜರುಗಳು ತಮ್ಮನ್ನು ಸೂರ್ಯನ ಪ್ರಖರತೆ ಅಥವಾ ಪ್ರಕಾಶಮಾನಕ್ಕೆ ಹೋಲಿಸಿಕೊಂಡರು. ಆದರೆ ಈ ನಕ್ಷತ್ರವು ತನ್ನ ಪ್ರಕಾಶಮಾನತೆಯ ಕುರಿತು ಹೇಳಿಕೊಳ್ಳದೆ, ಮತ್ತೊಬ್ಬರಿಗೆ ಬೆಳಕನ್ನು ನೀಡುತ್ತಾ, ನಿಜ ಬೆಳಕಾದ ಕ್ರಿಸ್ತರ ಬಳಿಗೆ ಮೂರು ರಾಯರನ್ನು ಕರೆತಂದಿತು" ಎಂದು ಹೇಳಿದ್ದಾರೆ.

ಈ ನಕ್ಷತ್ರವು ಎಲ್ಲರಿಗೂ ಕಾಣಿಸುವ ನಕ್ಷತ್ರವಾಗಿದ್ದು, ಎಲ್ಲರೂ ಸಹ ಕ್ರಿಸ್ತರ ಬಳಿಗೆ ಬರುವಂತೆ ಇದು ಪ್ರೇರೇಪಿಸುತ್ತಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. ಶುಧ್ಧ ಹಾಗೂ ಪ್ರಾಮಾಣಿಕ ಹೃದಯದಿಂದ ಕ್ರಿಸ್ತರನ್ನು ಹುಡುಕುತ್ತಿರುವವರಿಗೆ ಕ್ರಿಸ್ತರು ಸಿಗುತ್ತಾರೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು "ನಾವೆಲ್ಲರೂ ಯಾತ್ರಿಕರಾಗಿದ್ದೇವೆ. ಈ ವರ್ಷ ವಿಶೇಷವಾಗಿ ಭರವಸೆಯ ಯಾತ್ರಿಕರಾಗಿದ್ದೇವೆ. ಯೇಸು ಕ್ರಿಸ್ತರು ನಮ್ಮ ಭರವಸೆ ಎಂದು ಅರಿತುಕೊಂಡು, ಅವರ ಮಾರ್ಗದಲ್ಲಿ ಮುನ್ನಡೆಯೋಣ" ಎಂದು ಅವರು ಹೇಳಿದ್ದಾರೆ.     

06 January 2025, 16:02