ಪೋಪ್ ಫ್ರಾನ್ಸಿಸ್: ಎಂದಿಗೂ ನಿಲ್ಲಬೇಡಿ, ಸದಾ ಮುಂದುವರೆಯಿರಿ
ವರದಿ: ಜೋಸೆಫ್ ಟಲ್ಲೋಚ್
ಪೋಪ್ ಫ್ರಾನ್ಸಿಸ್ ಅವರು ಇಂದು ಇಟಲಿಯ ಕುರುಡರು ಹಾಗೂ ದೃಷ್ಟಿಹೀನರ ಒಕ್ಕೂಟದ ಸದಸ್ಯರನ್ನು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ್ದಾರೆ. ಈ ಕುರಿತು ಯಾತ್ರೆಯ ಅರ್ಥದ ಕುರಿತು ಮಾತನಾಡಿರುವ ಅವರು "ಸದಾ ಮುಂದುವರೆಯಿರಿ, ಚಲಿಸುತ್ತಲೇ ಇರಿ" ಎಂದು ಅವರಿಗೆ ಕರೆ ನೀಡಿದ್ದಾರೆ.
"ಭರವಸೆಯ ಯಾತ್ರಿಕರು" ಎಂಬುದು ಜ್ಯೂಬಿಲಿ ವರ್ಷದ ಶೀರ್ಷಿಕೆಯಾಗಿದ್ದು, ನಾವು ಸದಾ ಪಯಣಿಸಲು ಇದು ನಮಗೆ ಕರೆ ನೀಡುತ್ತದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. "ನಾನು ಸಹ ನಿಮಗೆ ಇದನ್ನೇ ಹೇಳುತ್ತೇನೆ. ಎಲ್ಲೂ ನಿಲ್ಲದೆ ಸದಾ ಪಯಣಿಸಿರಿ" ಎಂದು ಅವರು ನುಡಿದಿದ್ದಾರೆ.
ಈ ಜ್ಯೂಬಿಲಿ ವರ್ಷದಲ್ಲಿ ನಿಮ್ಮ ನಿಲುಗಡೆ ಪವಿತ್ರ ದ್ವಾರದಲ್ಲಿರಬೇಕು ಎಂದು ಹೇಳಿರುವ ಅವರು ನೀವು ಕೇವಲ ಪಯಣಿಸುವುದು ಮಾತ್ರವಲ್ಲ, ಬದಲಿಗೆ ಭರವಸೆಯ ಯಾತ್ರಿಕರಾಗಿರಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
"ಯೇಸುವನ್ನು ಭೇಟಿ ಮಾಡಲು, ಅವರ ವಾಕ್ಯಗಳನ್ನು ಕೇಳಲು ನೀವು ಸದಾ ಉತ್ಸುಕರಾಗಿರಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.