ಹುಡುಕಿ

ಪೋಪ್ ಫ್ರಾನ್ಸಿಸ್: ದಾನಶೀಲತೆಯ ಹಾದಿಯಲ್ಲಿ ಯೇಸು ನಿಮ್ಮ ಜೊತೆಗಿರುತ್ತಾರೆ

ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ನೈಟ್ಸ್ ಆಫ್ ಮಾಲ್ಟಾ ಸಂಸ್ಥೆಯ ಪ್ರತಿನಿಧಿಗಳ ನಿಯೋಗವನ್ನು ಇಂದು ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಸೇವೆ ಸಲ್ಲಿಸುವ, ಸದಾ ಜೊತೆಗೆ ನಡೆಯುವ ಕುರಿತು ಮಾತನಾಡಿದ್ದು, ಪ್ರಭುಕ್ರಿಸ್ತರು ಸದಾ ನಮ್ಮೊಂದಿಗೆ ನಡೆಯುತ್ತಾರೆ ಎಂದು ಹೇಳಿದ್ದಾರೆ.

ವರದಿ: ಫ್ರಾಂಚೆಸ್ಕೋ ಮೆರ್ಲೋ

ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ನೈಟ್ಸ್ ಆಫ್ ಮಾಲ್ಟಾ ಸಂಸ್ಥೆಯ ಪ್ರತಿನಿಧಿಗಳ ನಿಯೋಗವನ್ನು ಇಂದು ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಸೇವೆ ಸಲ್ಲಿಸುವ, ಸದಾ ಜೊತೆಗೆ ನಡೆಯುವ ಕುರಿತು ಮಾತನಾಡಿದ್ದು, ಪ್ರಭುಕ್ರಿಸ್ತರು ಸದಾ ನಮ್ಮೊಂದಿಗೆ ನಡೆಯುತ್ತಾರೆ ಎಂದು ಹೇಳಿದ್ದಾರೆ.

"ನಾವು ಇತ್ತೀಚೆಗಷ್ಟೇ ದೇವಮಾತೆ ಮರಿಯಮ್ಮನವರ ಮಹೋತ್ಸವವನ್ನು ಆಚರಿಸಿದ್ದೇವೆ. ಮಾತೆ ಮರಿಯಮ್ಮನವರು ನಿಮ್ಮ ಸಮುದಾಯದ ಪಾಲಕಿ ಹಾಗೂ ಮಾರ್ಗದರ್ಶಕಿಯಾಗಿದ್ದಾರೆ. ಅವರು ಪ್ರಭುವಿನ ಹಾದಿಯಲ್ಲಿ ನಿಮ್ಮನ್ನು ಮುನ್ನಡೆಸುತ್ತಾರೆ" ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ಮತ್ತೊಮ್ಮೆ ಸೇವೆ, ಜೊತೆಯಾಗಿ ನಡೆಯುವುದರ ಕುರಿತು ಮಾತನಾಡಿದರು. ನಿಮ್ಮ ಸಮುದಾಯದ ಮೂಲಕ ಸಮಾಜದಲ್ಲಿ ಅವಶ್ಯಕತೆ ಇರುವವರಿಗೆ ನೀವು ನೆರವಾಗುವ ಮೂಲಕ ಶುಭಸಂದೇಶವನ್ನು ಸಾರಬೇಕು ಎಂದು ಅವರು ಹೇಳಿದರು.

"ಪರಮಪ್ರಸಾದದಿಂದ ನೀವೆಲ್ಲರೂ ನಿಮಗೆ ಬೇಕಾದ ಆಧ್ಯಾತ್ಮಿಕ ಶಕ್ತಿಯನ್ನು ಪಡೆದುಕೊಳ್ಳಬೇಕು" ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು"ಪರಮಪ್ರಸಾದವೇ ನಮ್ಮೆಲ್ಲರ ಎಲ್ಲಾ ಶಕ್ತಿಯ ಮೂಲವಾಗಿದೆ" ಎಂದು ಹೇಳಿದ್ದಾರೆ.

ಅಂತಿಮವಾಗಿ ಅವರ ಸೇವೆಗೆ ಧನ್ಯವಾದಗಳನ್ನು ತಿಳಿಸಿರುವ ಪೋಪ್ ಫ್ರಾನ್ಸಿಸ್ ಅವರು "ಪ್ರಭು ಸದಾ ನಿಮ್ಮೊಂದಿಗಿರುತ್ತಾರೆ" ಎಂದು ಹೇಳಿದ್ದಾರೆ.  

03 January 2025, 14:24