2024 ರಲ್ಲಿ ಪೋಪ್ ಫ್ರಾನ್ಸಿಸ್: ಶಾಂತಿಯ ಅವಿರತ ಹರಿಕಾರ
2024 ರಾದ್ಯಂತ ಪೋಪ್ ಫ್ರಾನ್ಸಿಸ್ ಅವರು ಎಡೆಬಿಡದೆ ಶಾಂತಿ ಪ್ರಾರ್ಥನೆಯನ್ನು ಜಪಿಸಿದ್ದಾರೆ. ವಿವಿಧ ದೇಶಗಳ ನಡುವೆ ಉಂಟಾದ ಯುದ್ಧಗಳೂ ಸೇರಿದಂತೆ, ಹಲವಾರು ರೀತಿಯ ಹಿಂಸೆಗಳು ಈ ಜಗತ್ತಿನಲ್ಲಿ ನಿಲ್ಲಬೇಕೆಂದು ಪದೇ ಪದೇ ತಮ್ಮ ತ್ರಿಕಾಲ ಪ್ರಾರ್ಥನೆಗಳು, ಸಾರ್ವಜನಿಕ ಭೇಟಿಗಳು, ಪ್ರೇಷಿತ ಪ್ರಯಾಣಗಳೂ ಸೇರಿದಂತೆ ತಮ್ಮ ಮಾತು ಹಾಗೂ ಬರಹಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಶಾಂತಿಯನ್ನು ಮರುಸ್ಥಾಪಿಸುವಂತೆ ವಿಶ್ವ ನಾಯಕರುಗಳಿಗೆ ಮನವಿ ಮಾಡಿದ್ದಾರೆ ಮಾತ್ರವಲ್ಲದೆ, ವಿವಿಧ ದೇಶಗಳಿಗೆ ತಮ್ಮ ರಾಯಭಾರಿಗಳನ್ನು ಕಳುಹಿಸಿ ಶಾಂತಿ ಹಾಗೂ ಸಂಧಾನವನ್ನು ಮೂಡಿಸುವ ನಿಟ್ಟಿನಲ್ಲಿ ಅವಿರತ ಪ್ರಯತ್ನವನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮೇಲಿನ ವಿಡಿಯೋ ಅವರು ಶಾಂತಿಯ ಕುರಿತಂತೆ ಮಾಡಿದ ಪ್ರಯತ್ನಗಳನ್ನು ಭಕ್ತಾಧಿಗಳಿಗೆ ತೋರಿಸುವ ಪ್ರಯತ್ನವಾಗಿದೆ.
01 January 2025, 12:16