ಶಾಲಾ ಸುವಾರ್ತಾ ಪ್ರಸಾರಕರಿಗೆ ಪೋಪ್: ಸಂವಾದ ಹಾಗೂ ಆಧ್ಯಾತ್ಮಿಕ ಆನಂದವನ್ನು ಬಿತ್ತಿರಿ
ವರದಿ: ಲೀಸಾ ಝೆಂಗಾರಿನಿ
ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದಲ್ಲಿ ಶಾಲಾ ಸುವಾರ್ತಾ ಪ್ರಸಾರ ಸೇವೆಯನ್ನು ತಮ್ಮ ಸೇವಾಕಾರ್ಯವನ್ನಾಗಿಸಿಕೊಂಡಿರುವ ಸಂತ ಕ್ಯಾಥರೀನ್ ಡೊಮಿನಿಕನ್ ಸಿಸ್ಟರ್ಸ್ ಸಭೆಯ ಭಗಿನಿಯರನ್ನು ಇಂದು ಭೇಟಿ ಮಾಡಿದರು. ಈ ಭಗಿನಿಯರು ತಮ್ಮ ಧಾರ್ಮಿಕ ಸಭೆಯ ವಾರ್ಷಿಕ ಕೂಟಕ್ಕಾಗಿ ರೋಮ್ ನಗರದಲ್ಲಿ ಸೇರಿದ್ದಾರೆ. ಈ ವೇಳೆ ಅವರನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಸಂವಾದ ಹಾಗೂ ಆಧ್ಯಾತ್ಮಿಕ ಆನಂದವನ್ನು ಬಿತ್ತಿರಿ" ಎಂದು ಹೇಳಿದ್ದಾರೆ.
ಘನಹೊಂದಿದ ಲೂಯಿಜಿಯಾ ಟಿಂಕಾನಿ ಹಾಗೂ ಫಾದರ್ ಲೊಡೊವಿಕೋ ಫಿನ್ಫಾನಿ, ಓ.ಪಿ. ಅವರು 1924 ರಲ್ಲಿ ಈ ಧಾರ್ಮಿಕ ಸಭೆಯನ್ನು ಸ್ಥಾಪಿಸಿದರು. ಕ್ರೈಸ್ತ ಮಾನವೀಯ ತತ್ವಗಳ ಮೂಲಕ ಅಕ್ರೈಸ್ತರ ನಡುವೆಯೂ ವಿಶ್ವಾಸವನ್ನು ಮೂಡಿಸುವುದು ಈ ಧಾರ್ಮಿಕ ಸಭೆಯ ಉದ್ದೇಶವಾಗಿದೆ.
"ಪ್ರಸ್ತುತವನ್ನು ಅರ್ಥಮಾಡಿಕೊಂಡು, ಸಭೆಯ ಉನ್ನತಿಗಾಗಿ ಧರ್ಮಸಭೆಯೊಂದಿಗೆ ಪಯಣಿಸುವುದು" ಎಂಬ ಧ್ಯೇಯವಾಕ್ಯದೊಂದಿಗೆ ಧಾರ್ಮಿಕ ಕೂಟಕ್ಕೆ ಆಗಮಿಸಿರುವ ಈ ಭಗಿನಿಯರನ್ನು ಉದ್ದೇಶಿಸಿ ಪೋಪ್ ಫ್ರಾನ್ಸಿಸ್ ಅವರು ಮಾತನಾಡಿದ್ದಾರೆ. ಭಗಿನಿಯರ ಈ ಧ್ಯೇಯವು ಈಡೇರಬೇಕಾದರೆ ಪರಿಶುದ್ಧತೆ ಹಾಗೂ ಸಿದ್ಧತೆಯ ಅವಶ್ಯಕತೆ ಇದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
"ಪರಿಶುದ್ಧತೆ ಎಂಬುದು ಪರಮ ಸಂತೋಷವಾಗಿದ್ದು ಸದಾ ಅದನ್ನು ಅಪ್ಪಿಕೊಳ್ಳಲು ನೀವು ಬಯಸಬೇಕು. ಇದರೊಂದಿಗೆ ಸಿದ್ಧತೆಯ ಹಂತದಲ್ಲಿ ನಿಮ್ಮ ಹಾಗೂ ಹೊರಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಂವಾದವನ್ನು ಮಾಡಬೇಕು. ಸಂವಾದ ಹಾಗೂ ಶಾಂತಿ ನಿಮ್ಮ ಗುರಿಯಾಗಿರಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.