ಪ್ರಪ್ರಥಮ ಬಾರಿಗೆ ಸಿಸ್ಟರ್ ಸಿಮೋನಾ ಬ್ರಂಬಿಲ್ಲಾ ಅವರನ್ನು ವ್ಯಾಟಿಕನ್ ಪೀಠದ ಪ್ರಿಫೆಕ್ಟ್ ಆಗಿ ನೇಮಿಸಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಇತಿಹಾಸದಲ್ಲೇ ಪ್ರಥಮ ಬಾರಿಗೆ ವ್ಯಾಟಿಕನ್ನಿನ ಅಭ್ಯಂಗಿತ ವ್ಯಕ್ತಿಗಳು ಹಾಗೂ ಪ್ರೇಷಿತ ಜೀವನದ ಸಮುದಾಯಗಳ ಪೀಠಕ್ಕೆ ಮಹಿಳೆಯೊಬ್ಬರನ್ನು ಫ್ರಿಫೆಕ್ಟ್ ಆಗಿ ನೇಮಿಸಿದ್ದಾರೆ. ಈ ಹುದ್ದೆಗೆ ಕೊನ್ಸೊಲಾತ ಮಿಷನರೀಸ್ ಧಾರ್ಮಿಕ ಸಭೆಯ ಸಿಸ್ಟರ್ ಸಿಮೋನಾ ಬ್ರಂಬಿಲ್ಲಾ, ಎಂ. ಸಿ. ಅವರು ನೇಮಕಗೊಂಡಿದ್ದಾರೆ. ಇದೇ ಪೀಠಕ್ಕೆ ಕಾರ್ಡಿನಲ್ ಎಂಜೆಲ್ ಫರ್ಬಾಂಡಿಸ್ ಅರ್ತಿಮೆ ಅವರು ಪ್ರೋ-ಫ್ರೀಫೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಾರ್ಚ್ 27 ರಂದು ಸಿಸ್ಟರ್ ಸಿಮೋನಾ ಬ್ರಂಬಿಲ್ಲಾ, ಎಂ. ಸಿ. ಅವರು ಅರವತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮುಂಚಿತವಾಗಿ ಇವರು ಕೊನ್ಸುಲಾತ ಮಿಷನರೀಸ್ ಧಾರ್ಮಿಕ ಸಭೆಯ ಸುಪೀರಿಯರ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು.
2023 ರಿಂದ ಸಿಸ್ಟರ್ ಸಿಮೋನಾ ಬ್ರಂಬಿಲ್ಲಾ, ಎಂ. ಸಿ. ಅವರು ಇದೇ ಪೀಠದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2023 ರಲ್ಲಿ ಕಾರ್ಡಿನಲ್ ಪದವಿಗೇರಿದ ಕಾರ್ಡಿನಲ್ ಎಂಜೆಲ್ ಫರ್ಬಾಂಡಿಸ್ ಅರ್ತಿಮೆ ಅವರು ಇದೇ ಪೀಠದ ಪ್ರೋ-ಫ್ರೀಫೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.