ಹುಡುಕಿ

ಪೋಪ್ ಫ್ರಾನ್ಸಿಸರ ಜನವರಿ ತಿಂಗಳ ಪ್ರಾರ್ಥನಾ ಕೋರಿಕೆ: ಶಿಕ್ಷಣದ ಹಕ್ಕಿಗಾಗಿ

ಜನವರಿ 2025 ರ ತಿಂಗಳಿಗಾಗಿ ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರಾರ್ಥನಾ ಕೋರಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಎಲ್ಲರೂ "ಶಿಕ್ಷಣದ ಹಕ್ಕಿಗಾಗಿ" ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್

ಜನವರಿ 2025 ರ ತಿಂಗಳಿಗಾಗಿ ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರಾರ್ಥನಾ ಕೋರಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಎಲ್ಲರೂ "ಶಿಕ್ಷಣದ ಹಕ್ಕಿಗಾಗಿ" ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ. 

ಪೋಪ್ ವಿಡಿಯೋ ಮುಖಾಂತರ ಮಾತಾನಡಿರುವ ಪೋಪ್ ಫ್ರಾನ್ಸಿಸ್ ಅವರು "ಇಂದು ನಾವು ವಿಶ್ವದಾದ್ಯಂತ ಶಿಕ್ಷಣದ ವಿಕೋಪವನ್ನು ಎದುರಿಸುತ್ತಿದ್ದೇವೆ" ಎಂದು ಹೇಳಿದ್ದಾರೆ. ಆದುದರಿಂದ ಇಡೀ ವಿಶ್ವದ ಎಲ್ಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಅವರೆಲ್ಲರೂ ಶಿಕ್ಷಣದ ಹಕ್ಕನ್ನು ಪಡೆಯುವಂತೆ ಪ್ರಾರ್ಥಿಸಲು ಕರೆ ನೀಡಿದ್ದಾರೆ.

ಯುದ್ಧ, ವಲಸೆ ಹಾಗೂ ಬಡತನದ ಕಾರಣ ವಿಶ್ವದಲ್ಲಿ ಸುಮಾರು 250 ಮಿಲಿಯನ್ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಆಯೋಗವೊಂದು ವರದಿ ನೀಡಿದೆ. "ಎಲ್ಲಾ ಮಕ್ಕಳು ಹಾಗೂ ಯುವ ಜನತೆಗೆ ಶಾಲೆಗೆ ಹೋಗುವ ಹಕ್ಕಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

"ಶಿಕ್ಷಣವು ಸಮಗ್ರತೆಯ ಸಾಧನವಾಗಿದ್ದು, ಇದು ಎಲ್ಲರಿಗೂ ಅತ್ಯವಶ್ಯಕವಾಗಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ವಿಡಿಯೋದಲ್ಲಿ ನುಡಿದಿದ್ದಾರೆ.

02 January 2025, 16:47