ಪವಿತ್ರ ಪೀಠ ಸೇವೆಯು ಜೆನೀವಾದಲ್ಲಿ ಪ್ರಾರ್ಥನಾ ಸಭೆಯನ್ನು ಹಮ್ಮಿಕೊಳ್ಳುವ ಮೂಲಕ ವಿಶ್ವ ಶಾಂತಿ ದಿನವನ್ನು ಆಚರಿಸಿದೆ
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ಈ ವರ್ಷ 57ನೇ ವಿಶ್ವ ಶಾಂತಿ ದಿನದ ಆಚರಣೆಯಂದು, ಆ ದಿನಕ್ಕೆ ವಿಶ್ವಗುರು ಫ್ರಾನ್ಸಿಸ್ ಅವರ ಸಂದೇಶವನ್ನು ಧ್ಯಾನಿಸುತ್ತಾ, ಕಾರ್ಡಿನಲ್ ಮಿಗುಯೇಲ್ ಎಂಜಲ್ ಅಯುಸೊ ಗಿಕ್ಷೊಟ್ ಅವರು ಶಾಂತಿ ಸಂಸ್ಕೃತಿಯನ್ನು ಸ್ರಜಿಸಲು ಹಾಗೂ ಉತ್ತಮ ಜಗತ್ತನ್ನು ನಿರ್ಮಿಸಲು ತಂತ್ರಜ್ಞಾನದ ಬೆಳವಣಿಗೆಯು ನೈತಿಕ ಪರಿಧಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳುತ್ತಾರೆ.
ಹದಿನೈದನೇ ವರ್ಷದಲ್ಲಿರುವ ಈ ವಾರ್ಷಿಕ ಪ್ರಾರ್ಥನೆಯನ್ನು ವಿಶ್ವಸಂಸ್ಥೆಗೆ ಪವಿತ್ರ ಪೀಠದ ಶಾಶ್ವತ ಸೇವೆ ಹಾಗೂ ಜೆನೀವಾದ ಅಂತರಾಷ್ಟ್ರೀಯ ಸಂಸ್ಥೆಗಳು ಹಮ್ಮಿಕೊಂಡಿದ್ದವು ಮಾತ್ರವಲ್ಲದೆ, ಈ ಪ್ರಾರ್ಥನಾ ಕೂಟಕ್ಕೆ ಹಲವಾರು ರಾಯಭಾರಿಗಳನ್ನು, ಅಂತರಾಷ್ಟ್ರೀಯ ಸಂಸ್ಥೆಗಳ ನಾಯಕರನ್ನು ಹಾಗೂ ವಿವಿಧ ಧರ್ಮಗಳ ಪ್ರತಿನಿಧಿಗಳನ್ನು ಕರೆತಂದಿದ್ದರು.
ಯೆಹೂದಿಗಳು, ಬೌದ್ಧರು, ಸೂಫಿ ಮುಸಲ್ಮಾನರು, ಮತ್ತು ಪ್ರೊಟೆಸ್ಟೆಂಟ್ ಹಾಗೂ ಗ್ರೀಕ್ ಆರ್ಥೊಡಕ್ಸ್ ಕ್ರೈಸ್ತರು ಸೇರಿದಂತೆ ವಿವಿಧ ಧಾರ್ಮಿಕ ಸಮುದಾಯಗಳ ಪ್ರತಿನಿಧಿಗಳ ಪುಟ್ಟ ಚಿಂತನೆಯನ್ನು ನೆರೆದಿದ್ದ ಅತಿಥಿಗಳು ಆಲಿಸಿದರು.
ಈ ಚಿಂತನೆಗಳು ನೆರೆದಿದ್ದವರ ನಡುವೆ ಅರೇಬಿಕ್, ಚೈನೀಸ್, ಫ್ರೆಂಚ್, ಇಂಗ್ಲೀಷ್, ರಷ್ಯನ್, ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಪ್ರಾರ್ಥನೆಗಳು ಪರಸ್ಪರ ವಿನಿಮಯಗೊಂಡವು. ಇದೇ ವೇಳೆ ಸಂತ ಇಪ್ಪತ್ಮೂರನೇ ಜಾನರ ಧರ್ಮಕೇಂದ್ರದ ಗಾನವ್ರಂದದವರು ಸಂಗೀತವನ್ನು ಈ ಕಾರ್ಯಕ್ರಮಕ್ಕೆ ನೀಡಿದ್ದರು ಎಂದು ಪವಿತ್ರ ಪೀಠದ ಪತ್ರಿಕಾ ಪ್ರಕಟನೆಯು ನಮೂದಿಸಿದೆ.
“ವಿಶ್ವ ಶಾಂತಿಗೆ ಸಾರ್ವತ್ರಿಕ ಪರಿಶ್ರಮದ ಭಾಗವಾಗಿ ನೆರೆದಿದ್ದ ಅಂತರ್-ಧರ್ಮೀಯ ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ಆಲಿವ್ ಮರದ ಚಿಗುರಿನ ರೆಂಬೆಯನ್ನು ನೀಡಲಾಯಿತು.
ಫ್ರೀಡ್ಬರ್ಗಿನ ಲೌಸೇನ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಚಾರ್ಲ್ಸ್ ಮೊರೆರೊಡ್, ಓ.ಪಿ., ಅವರು ಅಂತಿಮ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ, ಸಭಿಕರೆಲ್ಲರೂ ಮುಂದಿನ ಕಾರ್ಯಕ್ರಮಕ್ಕೆ ಧರ್ಮಕೇಂದ್ರದ ಸಭಾಂಗಣಕ್ಕೆ ತೆರಳಿದರು.