St. Josephine Bakhita St. Josephine Bakhita 

ಮಾನವ ಕಳ್ಳ ಸಾಗಣೆಯ ಕುರಿತು ಜಾಗೃತಿ ಮೂಡಿಸಲು ರೋಮ್ ನಗರಕ್ಕೆ ಆಗಮಿಸಲಿರುವ ಯುವಕ ಯುವತಿಯರು

ಫೆಬ್ರವರಿ 8 ಗುರುವಾರದಂದು ಧರ್ಮಸಭೆಯು ಹತ್ತನೇ ವಿಶ್ವ ಪ್ರಾರ್ಥನೆ ಹಾಗೂ ಮಾನವ ಕಳ್ಳಸಾಗಣೆಯ ವಿರುದ್ಧದ ಜಾಗೃತಿ ದಿನವನ್ನು ಆಚರಿಸಲು ಹೊಸ್ತಿಲಲ್ಲಿರುವಾಗ, ಪ್ರಪಂಚದ ಮೂಲೆ ಮೂಲೆಗಳಿಂದ ಬಂದಿರುವ 50 ಜನ ಯುವಕ ಯುವತಿಯರು ರೋಮ್ ನಗರದಲ್ಲಿ ಈ ಕುರಿತ ತರಭೇತಿಯನ್ನು ಪಡೆಯಲು ಆಗಮಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಸುಡಾನಿನಲ್ಲಿ ಜೀವಿಸಿ, ತದನಂತರ ಮಾನವ ಕಳ್ಳಸಾಗಣೆಯ ಬಲಿಪಶುವಾಗಿ ಸಂತರೆಂದು ಘೋಷಿಸಲ್ಪಟ್ಟ ಸಂತ ಬಕಿತ ಅವರ ಹಬ್ಬದ ದಿನದಂದು 2015 ರಲ್ಲಿ ಪೋಪ್ ಫ್ರಾನ್ಸಿಸ್ ಈ ದಿನವನ್ನು ಪ್ರಾರ್ಥನೆಯ ಹಾಗೂ ಮಾನವ ಕಳ್ಳ ಸಾಗಣೆಯ ವಿರುದ್ಧ ಜಾಗೃತಿಯನ್ನು ಮೂಡಿಸುವ ದಿನವೆಂದು ಘೋಷಿಸಿದರು.

ಆ ದಿನ ವಿಶ್ವದಾದ್ಯಂತ ಧರ್ಮ ಕೇಂದ್ರಗಳು, ವಿಶ್ವಾಸಿಗಳ ಗುಂಪುಗಳು, ಧಾರ್ಮಿಕ ಸಮುದಾಯಗಳು ಒಗ್ಗೂಡಿ “ಘನತೆಯಲ್ಲಿ ಪಯಣಿಸುವುದು; ಆಲಿಸಿ, ಕನವರಿಸಿ, ಕ್ರಿಯಾಶೀಲರಾಗಿ” ಎಂಬ ಶೀರ್ಷಿಕೆಯ ಮೇಲೆ ಚಿಂತನೆಯನ್ನು ಕೈಗೊಂಡು, ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

09 February 2024, 13:00