ಕಾರ್ಡಿನಲ್ ಕಾಂಟಲಮೆಸ್ಸಾ ಕಾರ್ಡಿನಲ್ ಕಾಂಟಲಮೆಸ್ಸಾ 

ತಪಸ್ಸುಕಾಲದ ಎರಡನೇ ಪ್ರಬೋಧನೆಯನ್ನು ನೀಡಿದ ಕಾರ್ಡಿನಲ್ ಕಾಂಟಲಮೆಸ್ಸ

ವಿಶ್ವಗುರುಗಳ ಪ್ರಬೋಧಕರಾಗಿರುವ ಕಾರ್ಡಿನಲ್ ರನೇರೋ ಕಾಂಟಲಮೆಸ್ಸ ಅವರು 2024 ರ ತಪಸ್ಸುಕಾಲದಲ್ಲಿ ರೋಮನ್ ಪರಿಷತ್ತಿಗೆ (ರೋಮನ್ ಕೂರಿಯಾ) ಎರಡನೇ ಬಾರಿಗೆ ಪ್ರಬೋಧನೆಯನ್ನು ನೀಡಿದ್ದಾರೆ. ತಮ್ಮ ಈ ಪ್ರಬೋಧನೆಯಲ್ಲಿ ಅವರು ಜಗದ ಜ್ಯೋತಿ ಕ್ರಿಸ್ತರ ಕುರಿತು ಮಾತನಾಡಿದ್ದಾರೆ.

ವಿಶ್ವಗುರುಗಳ ಪ್ರಬೋಧಕರಾಗಿರುವ ಕಾರ್ಡಿನಲ್ ರನೇರೋ ಕಾಂಟಲಮೆಸ್ಸ, ಓಎಫ್ಎಂ ಕಪುಚಿನ್, ಅವರು 2024 ರ ತಪಸ್ಸುಕಾಲದಲ್ಲಿ  ಎರಡನೆಯ ಬಾರಿಗೆ  ಶುಕ್ರವಾರ ಬೆಳಗ್ಗೆ "ಜಗದ ಜ್ಯೋತಿ  ಯೇಸುಕ್ರಿಸ್ತರು" ಎಂಬ ಕುರಿತು  ರೋಮನ್ ಕೂರಿಯಾಕ್ಕೆ  ಪ್ರಬೋಧನೆಯನ್ನು ನೀಡಿದರು.

"ಇಂದು ನಮೆಲ್ಲರಿಗೂ ಯೇಸುಕ್ರಿಸ್ತರು ಜಗದ ಜ್ಯೋತಿಯಾಗಿದ್ದಾರೆ ಎಂಬುದು ವಿಶ್ವಾಸದ ಹಾಗೂ ಘೋಷಿಸಲ್ಪಟ್ಟಿರುವ ಸತ್ಯವಾಗಿ ಪರಿಣಮಿಸಿದೆ" ಎಂದು ಕಾರ್ಡಿನಲ್ ಕಾಂಟಲಮೆಸ್ಸ ಹೇಳಿದರು.

ಮುಂದುವರೆದು ಮಾತನಾಡಿದ ಅವರು "ಮೊದಲು ಹೀಗಿರಲಿಲ್ಲ. ಅದೊಂದು ಸಜೀವ ಅನುಭವವಾಗಿತ್ತು. ನಾವು ಪ್ರಜ್ಞೆ ತಪ್ಪಿ ಬಿದ್ದು, ನಮಗೆ ಎಚ್ಚರ ಬಂದಾಗ ನಾವು ನೋಡುವ ಬೆಳಕಿನಂತೆ ಅದು ಗೋಚರವಾಗುತ್ತಿತ್ತು." ಎಂದು   ಪ್ರಭು ಕ್ರಿಸ್ತರ ಜ್ಯೋತಿಯ ಕುರಿತು ವಿವರಿಸಿದರು.

ಯೇಸು ಕ್ರಿಸ್ತರು ಈ ಜಗದ ಬೆಳಕು ಎಂಬುದನ್ನು ನಾವು ಹೇಗೆ ಅರ್ಥಮಾಡಿಕೊಂಡಿದ್ದೇವೆ ಎಂಬುದರ ಕುರಿತು ಪ್ರಶ್ನಿಸಿದ ಅವರು, ಆ ಕುರಿತು ಗಂಭೀರವಾಗಿ ಚಿಂತನೆಯನ್ನು ಮಾಡಬೇಕಿದೆ ಎಂದು ಹೇಳಿದರು. ಈ ಜಗತ್ತಿನಲ್ಲಿ ಲೌಕಿಕ ಬದುಕನ್ನು ಬಿಟ್ಟು, ಆಧ್ಯಾತ್ಮದೆಡೆಗೆ ಸಾಗುವ ನಿಟ್ಟಿನಲ್ಲಿ ನಾವು ತಪಸ್ಸುಕಾಲದಲ್ಲಿ ಪ್ರಯತ್ನಿಸಬೇಕಿದೆ. 

05 March 2024, 13:45