ವ್ಯಾಟಿಕನ್‌ನಲ್ಲಿ ಕಾರ್ಡಿನಲ್‌ಗಳ ಪರಿಷತ್ತಿನ ಸಭೆಗಳು ಏಪ್ರಿಲ್ ನಲ್ಲಿ ಆರಂಭ

ಏಪ್ರಿಲ್ 15 ರಂದು ವಿಶ್ವಗುರು ಫ್ರಾನ್ಸಿಸ್ ಅವರ ಉಪಸ್ಥಿತಿಯಲ್ಲಿ C9 - ಕಾರ್ಡಿನಲ್‌ಗಳ ಪರಿಷತ್ತಿನ ಕಾರ್ಯಕಾರಿಣಿ ಸಭೆಯು ಪ್ರಾರಂಭವಾಯಿತು.

ವ್ಯಾಟಿಕನ್ ನ್ಯೂಸ್ / ಸ್ವಾಮಿ ವಿನಯ್ ಕುಮಾರ್

C9 ಎಂದು ಕರೆಯಲ್ಪಡುವ ಕಾರ್ಡಿನಲ್ ಗಳ ಪರಿಷತ್ತಿನ ಅಧಿವೇಶನದ ಮೊದಲ ಸಭೆಯನ್ನು ವಿಶ್ವಗುರು ಫ್ರಾನ್ಸಿಸ್ ಅವರ ಉಪಸ್ಥಿತಿಯಲ್ಲಿ ನಡೆಸಿತು ಎಂದು ಹೋಲಿ ಸೀ ಪ್ರೆಸ್ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಫೆಬ್ರವರಿ ಸಭೆಗಳು

ಫೆಬ್ರವರಿ 5 ರಿಂದ 7, 2024 ರವರೆಗೆ ಕೊನೆಯ ಅಧಿವೇಶನವು  ನಡೆಯಿತು. ಧರ್ಮಸಭೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತು ಮೂವರು ಮಹಿಳೆಯರು ಭಾಗವಹಿಸಿ ಮಾತನಾಡಿದರು. ಆ ಮೂವರು ಯಾರೆಂದರೆ, ರೋಮ್ ನಗರದ ಪಾಂಟಿಫಿಕಲ್ ಫ್ಯಾಕಲ್ಟಿ ಆಫ್ ಎಜುಕೇಶನಲ್ ಸೈನ್ಸಸ್ ಆಕ್ಸಿಲಿಯಮ್ನಲ್ಲಿ  ಕ್ರಿಸ್ಟೋಲಜಿ ಮತ್ತು ಮರಿಯಾಲಜಿಯಲ್ಲಿ ಉಪನ್ಯಾಸಕಿಯಾಗಿರುವ ಸಲೆಸಿಯನ್ ಸಿಸ್ಟರ್ ಲಿಂಡಾ ಪೋಚರ್; ವೆರೋನಾ ಧರ್ಮಪ್ರಾಂತ್ಯದ ಆರ್ಡೊ ವರ್ಜಿನಮ್ ನ ಸದಸ್ಯೆ , ಶಿಕ್ಷಕಿ, ಮತ್ತು ಆಧ್ಯಾತ್ಮಿಕ ಕೋರ್ಸ್ಗಳು ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಉಸ್ತುವಾರಿ ಹೊಂದಿರುವ ಗಿಯುಲಿವಾ ಡಿ ಬೆರಾರ್ಡಿನೊ;  ಚರ್ಚ್ ಆಫ್ ಇಂಗ್ಲೆoಡ್ ನ  ಧರ್ಮಾಧ್ಯಕ್ಷ ಮತ್ತು ಆಂಗ್ಲಿಕನ್ ಕಮ್ಯುನಿಯನ್ನ ಡೆಪ್ಯುಟಿ ಸೆಕ್ರೆಟರಿ ಜನರಲ್ ಆಗಿರುವ ಜೋ ಬೈಲಿ ವೆಲ್ಸ್. ಫೆಬ್ರವರಿಯಲ್ಲಿ ವಿಶ್ವಗುರು ಮತ್ತು ಸಮಿತಿಯ ಕಾರ್ಯದರ್ಶಿಯನ್ನೊಳಗೊಂಡ ಕಾರ್ಡಿನಲ್ಗಳ ಸಭೆಗಳಲ್ಲಿ ಧರ್ಮಸಭೆಯಲ್ಲಿ ನಡೆಯುತ್ತಿರುವ ಸಿನೋಡ್‌ನ ಕಾರ್ಯಗಳು ಮತ್ತು ಧರ್ಮಪ್ರಚಾರದ ವಿಷಯದ ಮೇಲೆ, ಸುವಾರ್ತಾ ಪ್ರಸಾರದ ಪ್ರಕ್ರಿಯೆ ಸಮಿತಿಯ ಮುಖ್ಯ ಅಧಿಕಾರಿಯಾಗಿರುವ ಕಾರ್ಡಿನಲ್ ಲೂಯಿಸ್ ಆಂಟೋನಿಯೊ ಟ್ಯಾಗ್ಲೆ ಮತ್ತು ಆರ್ಚ್ ಬಷಪ್ ರಿನೊ ಫಿಸಿಚೆಲ್ಲಾ ನೀಡಿರುವ ಕೊಡುಗೆಗಳ ಬಗ್ಗೆ ಚರ್ಚಿಸಲಾಯಿತು

ನವ ನವೀನ C9

7 ಮಾರ್ಚ್ 2023 ರಂದು ವಿಶ್ವಗುರುಗಳು ಪರಿಷತ್ತನ್ನು ನವೀಕರಿಸಿದರು. ನವೀಕರಿಸಿದ ಈ ಸಮಿತಿಯಲ್ಲಿ;  ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ಸ್ ಪಿಯೆಟ್ರೋ ಪರೋಲಿನ್; ವ್ಯಾಟಿಕನ್ ಸಿಟಿ  ಸ್ಟೇಟ್ ಮತ್ತು ಗವರ್ನರೇಟ್ ಆಫ್ ವ್ಯಾಟಿಕನ್ ಸಿಟಿಯ ಪಾಂಟಿಫಿಕಲ್ ಆಯೋಗದ ಅಧ್ಯಕ್ಷ ಫೆರ್ನಾಂಡೋ ವರ್ಗೆಜ್ ಅಲ್ಜಗಾ; ಕಿನ್ಶಾಸಾದ ಧರ್ಮಾಧ್ಯಕ್ಷ ಫ್ರಿಡೋಲಿನ್ ಅಂಬೊಗೊ ಬೆಸುಂಗು,  ಮುಂಬೈ ಧರ್ಮಾಧ್ಯಕ್ಷ  ಓಸ್ವಾಲ್ಡ್ ಗ್ರೇಸಿಯಾಸ್; ಬೋಸ್ಟನ್ ಧರ್ಮಾಧ್ಯಕ್ಷ ಸೀನ್ ಪ್ಯಾಟ್ರಿಕ್ ಒ'ಮ್ಯಾಲಿ; ಬಾರ್ಸಿಲೋನಾದ ಧರ್ಮಾಧ್ಯಕ್ಷ  ಜುವಾನ್ ಜೋಸ್ ಒಮೆಲ್ಲಾ ; ಕ್ವಿಬೆಕ್ ಧರ್ಮಾಧ್ಯಕ್ಷ ಜೆರಾಲ್ಡ್ ಲ್ಯಾಕ್ರೊಯಿಕ್ಸ್; ಲಕ್ಸೆಂಬರ್ಗ್ ಧರ್ಮಾಧ್ಯಕ್ಷ ಜೀನ್-ಕ್ಲೌಡ್ ಹೋಲೆರಿಚ್; ಸಾವೊ ಸಾಲ್ವಡಾರ್ ಡಾ ಬಹಿಯಾದ ಧರ್ಮಾಧ್ಯಕ್ಷ ಸೆರ್ಗಿಯೋ ಡಾ ರೋಚ; ಈ ಸಮಿತಿಯ ಕಾರ್ಯದರ್ಶಿ ಕ್ರೆಸಿಮಾದ ಧರ್ಮಾಧ್ಯಕ್ಷ ಮೊನ್ಸಿನೊರ್ ಮಾರ್ಕೊ ಮೆಲ್ಲಿನೊ. ಈ ಹೊಸ C9 ಸಮಿತಿಯ ಮೊದಲ ಸಭೆಯನ್ನು ಕಳೆದ ವರ್ಷ ಏಪ್ರಿಲ್ 24 ರಂದು ನಡೆಸಲಾಯಿತು.

ಕಾರ್ಡಿನಲ್ ಗಳ ಪರಿಷತ್ತಿನ ಸ್ಥಾಪನೆ 

ವಿಶ್ವಗುರು ಫ್ರಾನ್ಸಿಸ್ ಅವರು ಧರ್ಮಸಭೆಯ ಆಡಳಿತದಲ್ಲಿ ಅವರಿಗೆ ಸಹಾಯಕವಾಗಿರಲು ಮತ್ತು  ಕಥೋಲಿಕ ಧರ್ಮಸಭೆಯ ಕಾರ್ಯನಿರ್ವಾಹಕ ಸಾಧನವಾಗಿರುವ ರೋಮನ್ ಕ್ಯೂರಿಯಾದ ಪರಿಷ್ಕರಣೆಯ ಯೋಜನೆಯನ್ನು ಅಧ್ಯಯನ ಮಾಡುವ ಸಲುವಾಗಿ, 28 ಸೆಪ್ಟೆಂಬರ್ 2013 ರಂದು ಕೈ ಬರಹದಿಂದ ಕೂಡಿದ್ದ, ನಿಯಮಗಳು ಅಥವಾ ಒಪ್ಪಂದಗಳನ್ನು ಒಳಗೊಂಡ ಕಾನೂನು ಮತ್ತು  ಔಪಚಾರಿಕ ದಾಖಲೆಯನ್ನು ಅನಾವರಣಗೊಳಿಸಿ ಸಮಿತಿಯನ್ನು ಸ್ಥಾಪಿಸಿದರು. ಈ ಕಾರ್ಯವು 19 ಮಾರ್ಚ್ 2022 ರಂದು ಪ್ರಕಟವಾದ ಹೊಸ ಪ್ರೇಷಿತ ಸಂವಿಧಾನದ ಪ್ರೆಡಿಕಾತೆ ಇವಾಂಗೆೆಲಿಯಮ್ನೊAದಿಗೆ ಯಶಸ್ವಿಯಾಯಿತು. C9 ನ ಮೊದಲ ಸಭೆಯು 1 ಅಕ್ಟೋಬರ್ 2013 ರಂದು ನಡೆಯಿತು. 

22 April 2024, 13:45