ಹುಡುಕಿ

FILES-ISRAEL-PALESTINIAN-CONFLICT-100 DAYS FILES-ISRAEL-PALESTINIAN-CONFLICT-100 DAYS  (AFP or licensors)

ಮಧ್ಯಪ್ರಾಚ್ಯದಲ್ಲಿ ಮಾತುಕತೆ ಮತ್ತು ಶಾಂತಿಗಾಗಿ ಸರ್ವರೀತಿಯ ಪ್ರಯತ್ನಕ್ಕೆ ವಿಶ್ವಗುರುಗಳ ಮನವಿ

ಭಾನುವಾರದ ರೆಜಿನಾ ಚೇಲಿಯ ಅಂತ್ಯದಲ್ಲಿ, ವಿಶ್ವಗುರು ಫ್ರಾನ್ಸಿಸ್ ಅವರು ಗಾಜಾದಲ್ಲಿ ಬಳಲುತ್ತಿರುವವರಿಗೆ ಸಹಾಯ ಮಾಡುವಂತೆ ಹಾಗೆಯೇ ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರದ ಸುರುಳಿಯನ್ನು ನಿಲ್ಲಿಸಲು ಎಲ್ಲಾ ರಾಷ್ಟ್ರಗಳು ಮಾತುಕತೆ ಮತ್ತು ಶಾಂತಿಯ ಪ್ರಯತ್ನಗಳಿಗೆ ಒಲವು ತೋರುವಂತೆ ಹೃತ್ಪೂರ್ವಕ ಮನವಿಯನ್ನು ಮಾಡಿದರು.

ವ್ಯಾಟಿಕನ್ ನ್ಯೂಸ್ / ಸೌಮ್ಯ

ವಿಶ್ವಗುರು ಫ್ರಾನ್ಸಿಸ್ ರವರು ಭಾನುವಾರದಂದು ರೆಜಿನಾ ಚೇಲಿಯಲಿ ನಂತರ ಮಧ್ಯಪ್ರಾಚ್ಯದಲ್ಲಿ "ಹಿಂಸಾಚಾರದ ಸುರುಳಿ" ಯನ್ನು ಉತ್ತೇಜಿಸುವ ಯಾವುದೇ ಕ್ರಮಗಳನ್ನು ನಿಲ್ಲಿಸುವಂತೆ ಮನವಿ ಮಾಡಿದರು ಇಲ್ಲವಾದಲ್ಲಿ ಅದು ಮಧ್ಯಪ್ರಾಚ್ಯವನ್ನು ವಿಪರೀತವಾದ ಯುದ್ಧದಲ್ಲಿ ಮುಳುಗಿಸುವ ಅಪಾಯ ಎದುರಾಗಬಹುದು. ಇರಾನ್ನ ಹಸ್ತಕ್ಷೇಪದ ನಂತರ ಇಸ್ರೇಲ್ನಲ್ಲಿ ಹದಗೆಟ್ಟ ಪರಿಸ್ಥಿತಿಯ ಬಗ್ಗೆ ಇತ್ತೀಚಿನ ಗಂಟೆಗಳಲ್ಲಿ ಬರುವ ಸುದ್ದಿಯನ್ನು "ಪ್ರಾರ್ಥನೆ, ಕಾಳಜಿ ಮತ್ತು ದುಃಖದಿಂದ" ಅನುಸರಿಸುತ್ತಿದ್ದೇನೆ ಎಂದು ವಿಶ್ವಗುರುಗಳು ಹೇಳಿದರು. ಯಾರೂ ಇತರರ ಅಸ್ತಿತ್ವಕ್ಕೆ ಬೆದರಿಕೆ ಹಾಕಬಾರದು ಮತ್ತು ಎಲ್ಲಾ ರಾಷ್ಟ್ರಗಳು "ಶಾಂತಿಯ ಹಾದಿಯನ್ನು ತೆಗೆದುಕೊಳ್ಳಬೇಕು" ಎಂದು ಅವರು ಒತ್ತಿ ಹೇಳಿದರು. ಇಸ್ರಾಯೇಲರು ಮತ್ತು ಪ್ಯಾಲೆಸ್ಟೀನಿಯರನ್ನು ಎರಡು ಅಕ್ಕ ಪಕ್ಕದ ರಾಜ್ಯಗಳಾಗಿ ಭದ್ರತೆಯಲ್ಲಿ ವಾಸಿಸಲು ಸಹಾಯ ಮಾಡಬೇಕು ಎಂದು ಹೇಳುತ್ತಾ "ಇದು ಈ ಎರಡು ನೆರೆ ರಾಜ್ಯಗಳ ನ್ಯಾಯಯುತ ಕಾನೂನುಬದ್ಧ ಬಯಕೆ, ಮತ್ತು ಅವರ ಹಕ್ಕು' ಎಂದು ಸೇರಿಸಿದರು.

ಮಾನವೀಯ ದುರಂತ

ವಿಶ್ವಗುರುಗಳು ಗಾಜಾದಲ್ಲಿ ಕದನ ವಿರಾಮಕ್ಕಾಗಿ ತಮ್ಮ ಮನವಿಯನ್ನು ನವೀಕರಿಸುತ್ತಾ ಸಂಧಾನದ ಮಾರ್ಗವನ್ನು ಧೃಡವಾಗಿ ಅನುಸರಿಸಬೇಕು ಎಂದು ಹೇಳಿದರು. ಗಾಜಾದಲ್ಲಿನ ಜನರ ನೋವನ್ನು ನೆನಪಿಸಿಕೊಳ್ಳುತ್ತಾ, " ಇದು ಮಾನವೀಯ ದುರಂತ" ಅವರ ನೋವನ್ನು ನಿವಾರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಅವರು ಕರೆ ನೀಡಿದರು. ಹಾಗೆಯೇ "ತಿಂಗಳ ಹಿಂದೆ ಅಪಹರಿಸಿದ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ!" ಪ್ರಾರ್ಥಿಸಿದರು

ಯುದ್ಧದಲ್ಲಿ ಮಕ್ಕಳಿಗೆ ಸಹಾಯ

ಪ್ರಪಂಚದಾದ್ಯAತದ ಯುದ್ಧಗಳಿಂದ ಬಳಲುತ್ತಿರುವ ಅನೇಕ ಮಕ್ಕಳಿಗಾಗಿ ವಿಶ್ವಗುರುಗಳು ತಮ್ಮ ಪ್ರಾರ್ಥನೆಗಳನ್ನು ನವೀಕರಿಸಿದರು. ನಿರ್ದಿಷ್ಟವಾಗಿ ಉಕ್ರೇನ್, ಪ್ಯಾಲೆಸ್ಟೈನ್, ಇಸ್ರೇಲ್, ಮ್ಯಾನ್ಮಾರ್ ಅನ್ನು ಉಲ್ಲೇಖಿಸುತ್ತಾ ಅವರಿಗಾಗಿ ಮತ್ತು ನಮ್ಮ ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಎಲ್ಲರೂ ಪ್ರಾರ್ಥಿಸುವಂತೆ ಕರೆ ನೀಡಿದರು.

ಯುದ್ಧದಿಂದಾಗಿ ಮಕ್ಕಳು ಹೊರುವ ಹೊರೆಯ ಬಗ್ಗೆ ಮಾತನಾಡುತ್ತಾ, ಮೇ ೨೫-೨೬ ರಿಂದ ಧರ್ಮಸಭೆ ಮೊದಲ ವಿಶ್ವ ಮಕ್ಕಳ ದಿನವನ್ನು ಆಚರಿಸುತ್ತದೆ ಎಂದು ವಿಶ್ವಗುರುಗಳು ಹೇಳಿದರು. ಸಂತ ಪೇತ್ರರ ಚೌಕದಲ್ಲಿ ಎಲ್ಲಾ ಮಕ್ಕಳಿಗೆ ಮತ್ತು ಪ್ರಪಂಚದಾದ್ಯAತ ವೀಕ್ಷಿಸುತ್ತಿರುವವರಿಗೆ ಶುಭಾಶಯ ಕೋರಿದ ಅವರು, ಈ ದಿನದ ಪ್ರಚಾರಕ್ಕಾಗಿ ಅವರೆಲ್ಲರ ಪ್ರಯತ್ನಗಳಿಗಾಗಿ ಧನ್ಯವಾದಗಳನ್ನು ಅರ್ಪಿಸುತ್ತಾ, ಉತ್ತಮ ಜಗತ್ತು, ಶಾಂತಿಯ ಪ್ರಪಂಚಕ್ಕಾಗಿ ಆ ಮಕ್ಕಳ ಸಂತೋಷ ಮತ್ತು ಬಯಕೆಯನ್ನು ಹಂಚಿಕೊಳ್ಳಲು ತಾನು ಅವರಿಗಾಗಿ ಕಾಯುತ್ತಿರುತ್ತೇನೆ ಎಂದು ಅವರು ಹೇಳಿದರು.

22 April 2024, 14:03