ಪೋಪ್ ಫ್ರಾನ್ಸಿಸ್ ಪಾಂಟಿಫಿಕೇಟ್ ಕುರಿತು ಕಾರ್ಡಿನಲ್ ಪರೋಲಿನ್: ಸುಧಾರಣೆಗಳ ಮೇಲೆ ಯಾವುದೇ ಹಿಮ್ಮುಖವಿಲ್ಲ
ವ್ಯಾಟಿಕನ್ ನ್ಯೂಸ್ ಸಿಬ್ಬಂದಿ ವರದಿಗಾರರಿಂದ/ ಸ್ವಾಮಿ ಸಿರಿಲ್ ವಿಕ್ಟರ್
"ಪೋಪ್ ಫ್ರಾನ್ಸಿಸ್ ಅವರು ಕೈಗೊಂಡ ಸುಧಾರಣೆಗಳಿಗೆ ಏನಾಗುತ್ತದೆ?" ಎಂಬ ಪ್ರಶ್ನೆಗೆ ಉತ್ತರಿಸುತ್ತಾ. ಕಾರ್ಡಿನಲ್ ಪಿಯೆಟ್ರೋ ಪರೋಲಿನ್ ಪ್ರಾರ್ಥನೆ ಮತ್ತು ತಾಳ್ಮೆಯ ಅಗತ್ಯವನ್ನು ಒತ್ತಾಯಿಸಿ, ವಿವೇಚನೆಯು ತನ್ನದೇ ಆದ ವೇಗದಲ್ಲಿ "ಹೇಗೆ ಮುಂದುವರೆಯಬೇಕು ಮತ್ತು ಯಾವುದನ್ನು ಸಾಂಸ್ಥಿಕಗೊಳಿಸಬೇಕು". ಹಾಗಿದ್ದರೂ, ಕೆಲವು ಜನರು ಹಿಮ್ಮುಖದ ಬಗ್ಗೆ ಚಿಂತಿಸಬಹುದಾದರೂ ಅಥವಾ ನಿರೀಕ್ಷೆಯಲ್ಲಿದ್ದರೂ, ಇದು ಪವಿತ್ರಾತ್ಮರ ಕಾರ್ಯವಾಗಿರುವುದರಿಂದ ಇದರಲ್ಲಿ ಯಾವುದೇ ಹಿಮ್ಮುಖವಿರುವುದಿಲ್ಲ ಎಂದು ಪವಿತ್ರ ನಾಡಿನ ಕಾರ್ಯದರ್ಶಿಗಳು ಮಾತನಾಡಿದರು
ವ್ಯಾಟಿಕಾನಿಸ್ಟಾ ಇಗ್ನಾಜಿಯೊ ಇಂಗ್ರಾವೊರವರ "ಧರ್ಮಸಭೆಯನ್ನು ಬಾಧಿಸುತ್ತಿರುವ ಐದು ಪ್ರಶ್ನೆಗಳು" ಎಂಬ ಶೀರ್ಷಿಕೆಯ ಹೊಸ ಪುಸ್ತಕದ ಪ್ರಸ್ತುತಿಯಲ್ಲಿ ಕಾರ್ಡಿನಲ್ ಪ್ಯಾರೊಲಿನ್ ಮಾತನಾಡುತ್ತಿದ್ದರು. ಬಹುಮುಖಿ ಮತ್ತು ವಿಶಾಲ ವ್ಯಾಪ್ತಿಯ ಸಂಪುಟವು ಪೋಪ್ ಫ್ರಾನ್ಸಿಸ್ ಅವರ ಪ್ರೇಷಿತ ಅವಧಿಯನ್ನು ಮತ್ತು ಈ ಸಮಯದಲ್ಲಿ ಘೋಷಿಸಲಾದ ಧಾರ್ಮಿಕ ಬೋಧನೆಗಳನ್ನು ಒಳಗೊಂಡಂತೆ ವಿವಿಧ ರೀತಿಯ ಪ್ರಸ್ತುತ ಸುದ್ದಿ ಮತ್ತು ಘಟನೆಗಳನ್ನು ಒಳಗೊಂಡಿದೆ.
ಧರ್ಮಸಭೆಯ ನಿರಂತರ ಸುಧಾರಣೆ
ಇಂಗ್ರಾವೋ ತನ್ನ ಪೀಠಿಕೆಯಲ್ಲಿ ಮಾತನಾಡುತ್ತಾ, "ಬದಲಾಯಿಸಲಾಗದ ಪ್ರಕ್ರಿಯೆಗಳು" ಪಾಲನ ಪ್ರತಿಕ್ರಿಯೆ" ಮತ್ತು "ನೈತಿಕ ಮತ್ತು ನೈತಿಕ ಪ್ರತಿಕ್ರಿಯೆ" ಗಳೊಂದಿಗೆ ಹೊಂದಾಣಿಕೆಯಾಗಬೇಕು. ಈ ಭಾವನೆಯನ್ನು ಪ್ರತಿದ್ವನಿಸುತ್ತಾ ಕಾರ್ಡಿನಲ್ ಪೆರೋಲಿನ್ ಲತಿನ್ ಭಾಷೆಯ ನುಡಿಯಾದ ಏಕ್ಲೇಸಿಯ ಸೆಂಪರ್ ರಿಫಾರ್ಮ್ಯಾಂಡಾ, ಧರ್ಮಸಭೆಯು ಯಾವಾಗಲೂ ಸುಧಾರಣೆಯ ಅಗತ್ಯವನ್ನು ಪಡೆದಿದೆ ಎಂದು ಒತ್ತಿ ಹೇಳಿದರು ಇದನ್ನು ವಿವರಿಸುತ್ತಾ ಧರ್ಮಸಭೆಯನ್ನು ಯಾವಾಗಲೂ ಅದರ ಸರಿಯಾದ ರೂಪಕ್ಕೆ ತರಬೇಕು ದ್ವಿತೀಯ ವ್ಯಾಟಿಕನ್ ಮಹಾಸಭೆಯ ಬೋಧನೆ ಯಾದ ಪಾಪಿಗಳನ್ನು ತನ್ನ ಎದೆಗೆ ಅಪ್ಪಿಕೊಂಡಿರುವ ಧರ್ಮಸಭೆಯು ಸದಾ ತನ್ನನ್ನೇ ಶುದ್ಧೀಕರಿಸುತ್ತಾ ಪ್ರಾಯಶ್ಚಿತ್ತದ ಮತ್ತು ನವೀಕರಣದ ಹಾದಿಯಲ್ಲಿ ನಡೆಯಬೇಕಾಗಿದೆ
ಸಮಸ್ಯೆಗಳು ಅವಕಾಶಗಳಾಗಿ ಪರಿಣಮಿಸುತ್ತವೆ
ಕಾರ್ಡಿನಲ್ ಪರೋಲಿನ್ ಪುಸ್ತಕದ ಶೀರ್ಷಿಕೆಯ ಬಗ್ಗೆ ಚಿಂತಿಸುತ್ತ ವಿಶೇಷವಾಗಿ "ಬಾಧಿಸುತ್ತಿರುವ" ಈ ಕ್ರಿಯಾಪದವನ್ನು ಕುರಿತು ಇದು ಓದುಗರಿಗೆ ಪ್ರಜ್ಞೆಯಿಂದಲೂ ಮತ್ತು ಪ್ರಾಯೋಗಿಕ ತಿಳುವಳಿಕೆಯಿಂದ ಓದಲು ಆಹ್ವಾನಿಸುತ್ತದೆ ಮತ್ತಾಯರ ಶುಭ ಸಂದೇಶದಲ್ಲಿ ನಮಗೆ ಕಾಣಿಸಿರುವ ಗಲೀಲೆಯಯ ಸಮುದ್ರದ ಘಟನೆಯಲ್ಲಿ ಶಿಷ್ಯರ ಸಮುದ್ರದ ಮೇಲಿನ ಪ್ರಯಾಣವು ಪ್ರತಿಯೊಂದು ತಿರುವಿನಲ್ಲಿ ಅನೇಕ ಸಮಸ್ಯೆಗಳನ್ನು ಅಪಾಯಗಳನ್ನು ಒಳಗೊಂಡಿದ್ದು ಆದರೆ ಅವುಗಳೇ ಅವಕಾಶಗಳಾಗಿ ಮಾರ್ಪಾಡಾಗುವುದರ ಮೂಲಕ ಇದು ದೇವರ ಕಣ್ಣೋಟದಲ್ಲಿ ನಮ್ಮನ್ನು ಪ್ರೌಢರನ್ನಾಗಿಸಿ ಪ್ರಗತಿಪರರನ್ನಾಗಿ ಮಾಡುತ್ತದೆ.
ಕಾರ್ಡಿನಲ್ ಪ್ಯಾರೊಲಿನ್ ನಂತರ ಲೇಖಕರು ಕೇಳಿದ ಹಲವಾರು ಇತರ ಪ್ರಶ್ನೆಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿದರು
ಮತ್ತು ಧರ್ಮಸಭೆಯಲ್ಲಿ ಯುವ ಜನರ, ಮಹಿಳೆಯರ ಪಾತ್ರ, ಪೆಂಟೆಕೋಸ್ಟಲ್ ಚರ್ಚುಗಳ ಏರಿಕೆ ಮತ್ತು ಸಿನೊಡಲಿಟಿಯ ಮೇಲಿನ ಸಿನೊಡ್ ಸೇರಿದಂತೆ ವಿಷಯಗಳನ್ನು ಕುರಿತು ಮಾತನಾಡಿದರು.