ಹುಡುಕಿ

2023.11.08 Khutpani Jubilee India 2023.11.08 Khutpani Jubilee India 

ಕ್ರೈಸ್ತ ಜೂಬಿಲಿ ಆಚರಣೆಯ ಮೂಲ

ಕ್ರೈಸ್ತ ಜೂಬಿಲಿ ಆಚರಣೆಯು ಜಾರಿಗೆ ಬಂದಿದ್ದು ಎಂಟನೇ ಬೋನಿಫಾಸ್ ರವರು 1300ನೇ ವರ್ಷವನ್ನು ಪವಿತ್ರ ವರ್ಷವೆಂದು ಘೋಷಿಸುವುದರ ಮೂಲಕ ಎನ್ನುವುದನ್ನು ನಾವು ತಿಳಿಯುತ್ತೇವೆ

ಅಂದ್ರೇಯ ಟೋರ್ನಿಯೆಲ್ಲಿ & ಫ್ರಾನ್ಸಿಸ್ಕೊ ಮೆರ್ಲೊ/ ಸ್ವಾಮಿ ವಿನಯ್ ಕುಮಾರ್

ವಿಶ್ವಗುರು ಎಂಟನೇ ಬೋನಿಫಾಸ್ ರವರು  ಪ್ರಪ್ರಥಮವಾಗಿ 1300ನೇ ವರ್ಷವನ್ನು ಪವಿತ್ರ ವರ್ಷವೆಂದು ಘೋಷಿಸಿದರು. ಕ್ರೈಸ್ತ ಜೂಬಿಲಿ ಆಚರಣೆಯು ಹಿಬ್ರೂ ಸಂಪ್ರದಾಯದ ಆಧ್ಯಾತ್ಮಿಕತೆಯ ಮರು ವಿವರಣೆಯನ್ನು ನೀಡುವುದಾಗಿದೆ. ಬೈಬಲ್ ಜೂಬಿಲಿ ಆಚರಣೆಯು ಜೀತದ ಆಳುಗಳನ್ನು ಬಿಡುಗಡೆಗೊಳಿಸುವುದಾಗಿದ್ದರೆ, ಕ್ರೈಸ್ತ ಜೂಬಿಲಿ ಆಚರಣೆಯು ಪಾಪದಿಂದ ಬಿಡುಗಡೆ ಹಾಗೂ  ಶುದ್ಧೀಕರಣ ಸ್ಥಳದಲ್ಲಿ  ಪಾಪದಿಂದ ಅನುಭವಿಸಬೇಕಾದ ನೋವಿನಿಂದ ಬಿಡುಗಡೆಯನ್ನು ಪಡೆಯುವುದಾಗಿದೆ.

ಹೊಸ ಶತಮಾನ ಆಗಮನದ ಮುನ್ಸೂಚನೆಯ ವಾತಾವರಣ ಆಗ ರೋಮ್ ನಗರದಲ್ಲಿತ್ತು.  ರೋಮ್ ನಗರವು ಯಾತ್ರಿಗಳಿಂದ ತುಂಬಿತ್ತು. ಹೊರಗಡೆಯಿಂದ ಬರುವ ಯಾತ್ರಿಗಳು ಸಂತ ಪೇತ್ರ ಹಾಗೂ ಪೌಲರ ಮಹಾ ದೇವಾಲಯವನ್ನು 15 ಸಾರಿ ಭೇಟಿ ಮಾಡಬೇಕಿತ್ತು, ಇದರಿಂದಾಗಿ ಅವರು ಪುಣ್ಯಫಲಗಳನ್ನು ಪಡೆಯಲಿದ್ದರು. 

ಈ ಐತಿಹಾಸಿಕ ಘಟನೆಯನ್ನು ಹೆಸರಾಂತ ಯಾತ್ರಿ ದಾಂಟೆ ಅಲಿಘೀಯೇರಿ ಯವರು ಸ್ಪಷ್ಟವಾಗಿ ತೋರಿಸಿ ಕೊಡುತ್ತಾರೆ.

27 April 2024, 03:51