ಸಿನೋಡಲ್ ಪಯಣದ ಕುರಿತು ಜರ್ಮನ್ ಧರ್ಮಾಧ್ಯಕ್ಷರೊಡನೆ ವ್ಯಾಟಿಕನ್ ಸಂವಾದ
ವರದಿ: ವ್ಯಾಟಿಕನ್ ನ್ಯೂಸ್
ಪವಿತ್ರ ಪೀಠ ಹಾಗೂ ಜರ್ಮನ್ ಧರ್ಮಾಧ್ಯಕ್ಷೀಯ ಮಂಡಳಿಯು ಶುಕ್ರವಾರ ಮಾತುಕತೆಗಳು ಮುಗಿದ ನಂತರ, ಜರ್ಮನಿಯಲ್ಲಿನ ಸಿನೋಡಲ್ ಹಾದಿಯ ಕುರಿತಂತೆ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿವೆ.
ಈ ಹೇಳಿಕೆಯ ಪ್ರಕಾರ, ರೋಮನ್ ಕೂರಿಯಾದ ಪ್ರತಿನಿಧಿಗಳು ಹಲವು ಜರ್ಮನ್ ಧರ್ಮಾಧ್ಯಕ್ಷರನ್ನು ಭೇಟಿ ಮಾಡಿ "ನವೆಂಬರ್ 2022 ರಲ್ಲಿ ಜರ್ಮನ್ ಧರ್ಮಾಧ್ಯಕ್ಷರ ಅದ್ ಲಿಮಿನಾ ಭೇಟಿಯಂದು ಆರಂಭಗೊಂಡ ಸಂವಾದವನ್ನು ಮುಂದುವರೆಸುವುದರ" ಕುರಿತು ಚರ್ಚಿಸಿದರು.
ಜುಲೈ 26, 2023 ರ ಸಭೆಯ ಹಾದಿಯಲ್ಲಿ ನಡೆದ ಈ ಭೇಟಿ, "ಸಕಾರಾತ್ಮಕ ಹಾಗೂ ರಚನಾತ್ಮಕ ವಾತಾವರಣದಿಂದ" ಕೂಡಿತ್ತು.
"ಜರ್ಮನಿಯ ಕಥೋಲಿಕ ಧರ್ಮಸಭೆಯ ಸಿನೋಡಲ್ ಹಾದಿಯ ದಾಖಲೆಗಳಲ್ಲಿ ಉದ್ಭವಿಸಿರುವ ದೈಶಾಸ್ತ್ರದ ಕುರಿತ ಪ್ರಶ್ನೆಗಳನ್ನು ಉತ್ತರಿಸುವ ನಿಟ್ಟಿನಲ್ಲಿ" ಚರ್ಚೆಗಳು ನಿರತವಾಗಿದ್ದವು. "ನಿಯಮಿತ ವಿನಿಮಯ" ದ ಮೂಲಕ ತಮ್ಮ ಸಂವಾದವನ್ನು ಮುಂದುವರೆಸುವುದನ್ನು ಪ್ರತಿನಿಧಿಗಳು ಒಪ್ಪಿಕೊಂಡರು.
ಜಂಟಿ ಹೇಳಿಕೆಯ ಪ್ರಕಾರ "ಈ ಕಾರ್ಯವು ಜರ್ಮನಿಯ ಧರ್ಮಸಭೆಯಲ್ಲಿ ದ್ವಿತೀಯ ವ್ಯಾಟಿಕನ್ ಸಮ್ಮೇಳನದ ಆಶಯಗಳಂತೆ ಉತ್ತಮ ಮಾದರಿಯ ಸಿನೊಡಲ್ ಪ್ರಕ್ರಿಯೆಯನ್ನು ನಿರ್ಮಿಸಲು ನೆರವಾಗುತ್ತದೆ ಎಂದು ಜರ್ಮನ್ ಧರ್ಮಾಧ್ಯಕ್ಷರು ಹೇಳಿದ್ದಾರೆ. ತದ ನಂತರ ಇದನ್ನು ಪವಿತ್ರ ಪೀಠದ ಅನುಮೋದನೆಗಾಗಿ ಕಳುಹಿಸಲಾಗುವುದು" ಎಂದೂ ಸಹ ಹೇಳಿದ್ದಾರೆ.
ಮುಂದಿನ ಸಂವಾದ ಆಗಸ್ಟ್ 2024 ರಲ್ಲಿ ನಡೆಯಲಿದೆ.
ರೋಮನ್ ಕೂರಿಯಾ ಪ್ರತಿನಿಧಿಗಳು: ಕಾರ್ಡಿನಲ್ ವಿಕ್ಟರ್ ಫರ್ನಾಂಡೆಜ್, ಕಾರ್ಡಿನಲ್ ಕರ್ಟ್ ಕೋಚ್, ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್, ಕಾರ್ಡಿನಲ್ ರಾಬರ್ಟ್ ಎಫ್. ಪ್ರೆವೊಸ್ಟ್, ಕಾರ್ಡಿನಲ್ ಆರ್ಥರ್ ರೋಚ್ ಹಾಗೂ ಆರ್ಚ್'ಬಿಷಪ್ ಫಿಲಿಪ್ಪೋ ಇಯಾನ್ನೋನೆ.
ಜರ್ಮನ್ ಧರ್ಮಾಧ್ಯಕ್ಷರ ಮಂಡಳಿಯ ಪ್ರತಿನಿಧಿಗಳು: ಧರ್ಮಾಧ್ಯಕ್ಷರುಗಳಾದ ಜಿಯೋರ್ಜ್ ಬಾಟ್ಸಿಂಗ್, ಸ್ಟೆಫಾನ್ ಅಕೆರ್ಮಾನ್, ಮೈಕಲ್ ಗೆರ್ಬರ್, ಪೀಟರ್ ಕೋಲ್ಗ್ರಾಫ್, ಬೆರ್ಟ್ರಾಮ್ ಮೆಯರ್, ಹಾಗೂ ಫ್ರಾಂಝ್-ಜೋಸೆಫ್-ಒವರ್ಬೆಕ್.