ಕ್ರೊಯೆಶಾ ಭೇಟಿ ಹಿನ್ನೆಲೆ, ಆ ದೇಶದ ಪ್ರಜಾತಾಂತ್ರಿಕ ಪಯಣವನ್ನು ಶ್ಲಾಘಿಸಿದ ಆರ್ಚ್'ಬಿಷಪ್ ಗ್ಯಾಲಘರ್
ವರದಿ: ತಿಜಿಯಾನ ಕಂಪೋಸಿ, ಅಜಯ್ ಕುಮಾರ್
ಕ್ರೊಯೇಷ ದೇಶಕ್ಕೆ ವ್ಯಾಟಿಕನ್ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರು ಭೇಟಿ ನೀಡುತ್ತಿರುವ ಹಿನ್ನೆಲೆ, ಅವರು ಆ ದೇಶದಲ್ಲಿನ ಶಾಂತಿ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಯ ವರದಾನಕ್ಕಾಗಿ ಎಲ್ಲರೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಕರೆ ನೀಡಿದ್ದಾರೆ.
ಇಟಲಿ ದೇಶದ ರಾಷ್ಟ್ರೀಯ ದಿನಾಚರಣೆಯಂದು ಬಲಿಪೂಜೆಯನ್ನು ಅರ್ಪಿಸುತ್ತಾ ಅವರು ಮಾತನಾಡಿದರು.
ತಮ್ಮ ಪ್ರಭೋಧನೆಯಲ್ಲಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರು ಯೇಸುವನ್ನು ಹಿಂಬಾಲಿಸುವುದರ ಕುರಿತು ಮಾತನಾಡಿ, ಹೀಗೆ ಯೇಸುವನ್ನು ನಾವು ಹಿಂಬಾಲಿಸಲು ಆರಂಭಿಸುವಾಗ, ಕಷ್ಟ ಕಾರ್ಪಣ್ಯಗಳು, ಹಿಂಸೆ, ನೋವು ಬಾಧೆಗಳು ಹಾಗೂ ಇನ್ನಿತರ ಸಂಕಷ್ಟಗಳು ಬರುತ್ತವೆ. ಇವೆಲ್ಲವನ್ನೂ ನಾವು ದೈರ್ಯದಿಂದ ಮೆಟ್ಟಿ ನಿಂತು ಮುಂದುವರೆಯಬೇಕೆಂದು ಆರ್ಚ್'ಬಿಷಪ್ ಗ್ಯಾಲಗರ್ ಅವರು ಹೇಳಿದರು.
ಮುಂದುವರೆದು ಪವಿತ್ರ ಪೀಠ ಹಾಗೂ ಕ್ರೊಯೇಷ್ಯ ದೇಶದ ಸಂಬಂಧದ ಕುರಿತು ಮಾತನಾಡಿದ ಅವರು, ಇತಿಹಾದುದ್ದಕ್ಕೂ ಯಾವುದೇ ಸಂದರ್ಭಧಲ್ಲಿ ವ್ಯಾಟಿಕನ್ ಹಾಗೂ ಕ್ರೊಯೆಷ್ಯಾ ನಡುವಿನ ಸಂಬಂಧ ಸೌಹಾರ್ಧಯುತವಾಗಿದೆ ಎಂದು ನುಡಿದರು.