ಹುಡುಕಿ

ಕೆನಡಾ ಕಾರ್ಡಿನಲ್ ಲಾಕ್ರೋಯ್ ಅವರ ವರ್ತನೆಯಲ್ಲಿ ದೋಷವಿಲ್ಲ ಎಂದ ತನಿಖೆ

ಕೆನಡಾದ ಕೆಬೆಕ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಜೆರಾಲ್ಡ್ ಲಾಕ್ರೊಯ್ ಅವರ ವಿರುದ್ಧ ದುರ್ವರ್ತನೆಯ ಕುರಿತು ಅಪರಿಚಿತ ಆರೋಪವನ್ನು ಕ್ಯಾನೊನಿಕಲ್ ತನಿಖೆಗೆ ವಹಿಸಲಾಗಿತ್ತು. ತನಿಖೆಯ ನಂತರ ಅವರ ವರ್ತನೆಯಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಎಂದು ತನಿಖಾ ತಂಡವು ಹೇಳಿದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ವರದಿ ಮಾಡಿದೆ.

ವರದಿ: ವ್ಯಾಟಿಕನ್ ನ್ಯೂಸ್

ಕೆನಡಾದ ಕೆಬೆಕ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಜೆರಾಲ್ಡ್ ಲಾಕ್ರೊಯ್ ಅವರ ವಿರುದ್ಧ ಮಾಡಲಾದ ಅನಾಮಿಕ ಆರೋಪಗಳನ್ನು ತನಿಖೆಗೆ ವಹಿಸಿದ ನಂತರ, ಇದರ ತನಿಖೆಯನ್ನು ಮಾಡಿದ ಪ್ರಾಥಮಿಕ ಕ್ಯಾನೊನಿಕಲ್ ತನಿಖಾ ತಂಡವು ಅವರ ವರ್ತನೆಯಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ ಎಂಬುದನ್ನು ವ್ಯಾಟಿಕನ್ನಿನ ಮಾಧ್ಯಮ ಕಚೇರಿಯು ವರದಿ ಮಾಡಿದೆ.

ಈ ವರದಿಯ ಪ್ರಕಾರ ಕಾರ್ಡಿನಲ್ ಲಾಕ್ರೊಯ್ ಅವರು ಯಾವುದೇ ರೀತಿಯ ದುರ್ವರ್ತನೆಯನ್ನು ಅಥವಾ ದೌರ್ಜನ್ಯವನ್ನು ಮಾಡಿರುವುದಿಲ್ಲ; ಆದುದರಿಂದ ಅವರ ವಿರುದ್ಧ ಮುಂದಿನ ತನಿಖಾ ಪ್ರಕ್ರಿಯೆಗಳ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ಫೆಬ್ರವರಿ ೮, ೨೦೨೪ ರಂದು ಕಾರ್ಡಿನಲ್ ಲಾಕ್ರೊಯ್ ಅವರ ಮೇಲಿನ ಆರೋಪವನ್ನು ತನಿಖೆ ಮಾಡಲು ಪೋಪ್ ಫ್ರಾನ್ಸಿಸ್ ಅವರು ಕೆನಡಾ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಆಂಡ್ರೆ ಡೆನಿಸ್ ಅವರನ್ನು ವಿನಂತಿಸಿಕೊಂಡಿದ್ದರು. ಮೇ ೬ ರಂದು ಈ ತನಿಖೆ ಪೂರ್ಣಗೊಂಡ ನಂತರ ಅದರ ವರದಿಯನ್ನು ನಂತರದ ದಿನಗಳಲ್ಲಿ ನ್ಯಾಯಾಧೀಶ ಡೆನಿಸ್ ಅವರು ಪೋಪ್ ಫ್ರಾನ್ಸಿಸ್ ಅವರಿಗೆ ನೀಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಕಾರ್ಡಿನಲ್ ಲಾಕ್ರೊಯ್ ಅವರ ಮೇಲೆ ಯಾವುದೇ ಮುಂದಿನ ತನಿಖೆಗಳನ್ನು ನಡೆಸುವ ಅಗತ್ಯವಿಲ್ಲ ಎಂದು ವ್ಯಾಟಿಕನ್ ನಿರ್ಧರಿಸಿದೆ.

ತಮ್ಮ ಈ ನೆರವಿಗಾಗಿ ಪೋಪ್ ಫ್ರಾನ್ಸಿಸ್ ನ್ಯಾಯಾಧೀಶ ಆಂಡ್ರೆ ಡೆನಿಸ್ ಅವರಿಗೆ ಹೃದಯಾಂತರಾಳದ ಧನ್ಯವಾದಗಳನ್ನು ತಿಳಿಸಿದ್ದಾರೆ.      

21 May 2024, 18:37