ಹುಡುಕಿ

ಕಾರ್ಡಿನಲ್ ಪರೋಲಿನ್: ರಷ್ಯಾದಲ್ಲಿನ ನ್ಯಾಟೋ ಶಸ್ತ್ರಾಸ್ತ್ರಗಳು ಮತ್ತಷ್ಟು ಹೆಚ್ಚಿನ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತವೆ

ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ರಷ್ಯಾ ಹಾಗೂ ಉಕ್ರೇನ್ ನಡುವೆ ಹೆಚ್ಚುತ್ತಿರುವ ಸಂಘರ್ಷದ ಕುರಿತು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ರಷ್ಯಾದಲ್ಲಿ ಸಿಲುಕಿಕೊಂಡಿರುವ ಉಕ್ರೇನ್ ಮಕ್ಕಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಪವಿತ್ರ ಪೀಠವು ಕಾರ್ಯನಿರ್ವಹಿಸುತ್ತಿದೆ ಹಾಗೂ ಎಲ್ಲಾ ರೀತಿಯ ಮಾನವೀಯ ನೆರವನ್ನು ನೀಡುತ್ತಿದೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ನ್ಯಾಟೊ-ಪ್ರಾಯೋಜಿತ ಆಯುಧಗಳನ್ನು ಉಕ್ರೇನ್, ರಷ್ಯಾ ಗಡಿಯಲ್ಲಿ ಬಳಸುತ್ತಿರುವುದು ಹೆಚ್ಚಿನ ಸಂಘರ್ಷಕ್ಕೆ ಎಡೆ ಮಾಡಲಿದೆ ಎಂದು ಹೇಳಿದ್ದಾರೆ.

ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ರಷ್ಯಾ ಹಾಗೂ ಉಕ್ರೇನ್ ನಡುವೆ ಹೆಚ್ಚುತ್ತಿರುವ ಸಂಘರ್ಷದ ಕುರಿತು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ರಷ್ಯಾದಲ್ಲಿ ಸಿಲುಕಿಕೊಂಡಿರುವ ಉಕ್ರೇನ್ ಮಕ್ಕಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಪವಿತ್ರ ಪೀಠವು ಕಾರ್ಯನಿರ್ವಹಿಸುತ್ತಿದೆ ಹಾಗೂ ಎಲ್ಲಾ ರೀತಿಯ ಮಾನವೀಯ ನೆರವನ್ನು ನೀಡುತ್ತಿದೆ.

"ಪವಿತ್ರ ಪೀಠವು ಈ ವಿದ್ಯಾಮಾನವನ್ನು ಕಳವಳಕಾರಿಯಾಗಿ ನೋಡುತ್ತಿದೆ. ಈ ಸಂಘರ್ಷವು ಹೆಚ್ಚಾಗಿ ಮತ್ತಷ್ಟು ಹೆಚ್ಚಿನ ಸಾವು ನೋವು ಹಾಗೂ ವಿನಾಶಕ್ಕೆ ದಾರಿ ಮಾಡಿಕೊಡಬಾರದು ಎಂದು ನಿಟ್ಟಿನಲ್ಲಿ ತನ್ನ ಕೈಲಾದಷ್ಟು ಮಾಡುತ್ತಿದೆ" ಎಂದು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಹೇಳಿದ್ದಾರೆ.

31 May 2024, 16:48