ಚೀನಾದಲ್ಲಿ ಧರ್ಮಸಭೆ ಎಂಬ ವಿಷಯದ ಕುರಿತು ಸಮಾವೇಶ ಏರ್ಪಡಿಸಲಿರುವ ಪೊಂಟಿಫಿಕಲ್ ಅರ್ಬನ್ ವಿಶ್ವವಿದ್ಯಾನಿಲಯ

ಶಾಂಘಾಯ್ನಲ್ಲಿ ಚೀನಾದ ಮೊದಲ ಕೌನ್ಸಿಲ್ ನಡೆದ ಸ್ಮರಣಾರ್ಥವಾಗಿ ಪೊಂಟಿಫಿಕಲ್ ಅರ್ಬನ್ ವಿಶ್ವವಿದ್ಯಾನಿಲಯವು ಚೀನಾದಲ್ಲಿ ಧರ್ಮಸಭೆಯ ಪಾತ್ರದ ಕುರಿತು ಚರ್ಚಿಸುವಂತಹ ಸಮಾವೇಶವನ್ನು ಏರ್ಪಡಿಸಿದೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

1924 ರಲ್ಲಿ ನಡೆದ ಚೀನಾದ ಮೊದಲ ಕೌನ್ಸಿಲ್ ಸ್ಮರಣಾರ್ಥವಾಗಿ ಪೊಂಟಿಫಿಕಲ್ ಅರ್ಬನ್ ವಿಶ್ವವಿದ್ಯಾನಿಲಯವು ಮೇ 21 ರಂದು ಚೀನಾದಲ್ಲಿ ಧರ್ಮಸಭೆಯ ಪಾತ್ರ ಎಂಬ ಕುರಿತ ಶೀರ್ಷಿಕೆಯ ಮೇಲೆ ಸಮಾವೇಶವನ್ನು ಹಮ್ಮಿಕೊಂಡಿದೆ.

ಈ ಕೌನ್ಸಿಲ್ ನಡೆದ ನಂತರ ಚೀನಾ ದೇಶದಲ್ಲಿ ನಡೆದ ಸ್ಥಳೀಯ ಸಂಸ್ಕೃತೀಕರಣದ ಪ್ರಕ್ರಿಯೆಗೆ ಬುನಾದಿಯನ್ನು ಹಾಕಿದರ ಕುರಿತು ಹಾಗೂ ಜಾಗತೀಕರಣದ ಹಿನ್ನೆಲೆಯಲ್ಲಿ ಧರ್ಮಸಭೆಯ ಪ್ರೇಷಿತ ಪಾತ್ರದ ಕುರಿತು ಸಮಾಲೋಚನೆಗಳು ಈ ಸಮಾವೇಶದಲ್ಲಿ ನಡೆಯಲಿವೆ.

ಮೇ ೧೫ ರಿಂದ ಜೂನ್ ೧೨ ರವರೆಗೆ ೧೯೨೪ ರಲ್ಲಿ ಮೊದಲ ಬಾರಿಗೆ ಚೀನಾದಲ್ಲಿ ಕೌನ್ಸಿಲ್ ನಡೆಯಿತು. ಈ ಕೌನ್ಸಿಲ್ನಲ್ಲಿ ಚೀನಾದ ಎಲ್ಲಾ ಧರ್ಮಾಧ್ಯಕ್ಷರು ಭಾಗವಹಿಸಿ, ಅಂದಿನ ಮೊದಲ ಪ್ರೇಷಿತ ಪ್ರತಿನಿಧಿ ಮಹಾಧರ್ಮಾಧ್ಯಕ್ಷ ಸೆಲ್ಸೋ ಕೊಸ್ಟಾಂಟಿನಿ ಅವರ ಮಾರ್ಗದರ್ಶನದಲ್ಲಿ ಪೋಪ್ ಹದಿನೈದನೇ ಬೆನೆಡಿಕ್ಟ್ ಅವರ "ಕ್ರಿಸ್ತರು ಯಾವುದೇ ದೇಶಕ್ಕೆ ಅಪರಿಚಿತರಲ್ಲ" ಎಂಬ ದಾಖಲೆಯ ಕುರಿತು ಚರ್ಚೆಯನ್ನು ನಡೆಸಿ, ಕ್ರೈಸ್ತರಾಗುವುದೆಂದರೆ ತಮ್ಮ ದೇಶಕ್ಕೆ ಅಭಿಮಾನವನ್ನು ಅಥವಾ ನಿಷ್ಠೆಯನ್ನು ಬದಲಾಯಿಸುವುದಲ್ಲ ಎಂಬ ಕುರಿತು ಮಾತುಕತೆಗಳು ನಡೆದವು.

ಫಿದೆಸ್ ಏಜೆನ್ಸಿ ಮತ್ತು ಚೈನಾದಲ್ಲಿನ ಧರ್ಮಸಭೆ ಎಂಬ ವ್ಯಾಟಿಕನ್ ಪೀಠದ ಸಹಯೋಗದಲ್ಲಿ ಆಯೋಜಿಸಿರುವ ಈ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್, ಕಾರ್ಡಿನಲ್ ಲೂಯಿಸ್ ಅಂತೋನಿಯೋ ಟಾಗ್ಲೆ, ಹಾಗೂ ಶಾಂಘಾಯ್ ಧರ್ಮಾಧ್ಯಕ್ಷ ಜಿಯುಸೆಪ್ಪೆ ಶೆನ್ ಬಿನ್ ಅವರು ಭಾಗವಹಿಸಲಿದ್ದಾರೆ. 

ವಿಡಿಯೋ ಸಂದೇಶದ ಮೂಲಕ ಈ ಸಮಾವೇಶವನ್ನು ಪೋಪ್ ಫ್ರಾನ್ಸಿಸ್ ಅವರು ಉದ್ಘಾಟಿಸಲಿದ್ದಾರೆ.     

14 May 2024, 18:19