ಪವಿತ್ರ ಪೀಠ: ಜನನ ನಿಯಂತ್ರಣ ಸುಸ್ಥಿರ ಅಭಿವೃದ್ಧಿಗೆ ದಾರಿಯಲ್ಲ
ವರದಿ: ಲೀಸಾ ಝೇಂಗಾರಿನಿ, ಅಜಯ್ ಕುಮಾರ್
ಸೆಪ್ಟೆಂಬರ್ ತಿಂಗಳು 1994ರಲ್ಲಿ ಈಜಿಪ್ಟ್ ದೇಶದ ರಾಜಧಾನಿ ಕರು ನಗರದಲ್ಲಿ ವಿಶ್ವದಾದ್ಯಂತ ಸುಮಾರು 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಒಟ್ಟಾಗಿ ಸೇರಿ ಮಾನವ ಹಕ್ಕುಗಳ ಕುರಿತು ಹಾಗೂ ಬಡತನ ನಿರ್ಮೂಲನೆಯ ಕುರಿತು ಕೈಗೊಂಡ ನಿರ್ಧಾರಗಳ ಹಿನ್ನೆಲೆಯಲ್ಲಿ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಅನ್ನು ಆಯೋಜಿಸಲಾಗಿತ್ತು. ಇದು ಈ ವರ್ಷ ತನ್ನ 30ನೇ ದಿನಾಚರಣೆಯನ್ನು ಆಚರಿಸುತ್ತಿದೆ.
ಈ ಅಂತರಾಷ್ಟ್ರೀಯ ಅಧಿವೇಶನದ ಉದ್ದೇಶ ಬಡತನ ನಿರ್ಮೂಲನೆ, ಮಾನವ ಹಕ್ಕುಗಳ ಸ್ಥಾಪನೆ, ಮಹಿಳಾ ಸಬಲೀಕರಣ, ಲಿಂಗ ಸಮಾನತೆ, ಮಕ್ಕಳ ಮರಣದ ಸಂಖ್ಯೆಯನ್ನು ತಗ್ಗಿಸುವುದು ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುವುದು ಆಗಿತ್ತು.
ಈ ನಿರ್ಧಾರವನ್ನು ಕೈಗೊಂಡ ಮೂವತ್ತು ವರ್ಷಗಳ ನಂತರವೂ ಸಹ ವಿಶ್ವದಲ್ಲಿ ಇನ್ನೂ ಬಡತನ ಇದೆ ಲಿಂಗಸಮಾನತೆಗಾಗಿ ಹೋರಾಟಗಳು ನಡೆಯುತ್ತವೆ ಮಹಿಳಾ ಸಬಲೀಕರಣ ಎಂಬುದು ಇನ್ನು ತನ್ನ ಗುರಿಯನ್ನು ತಲುಪಿಲ್ಲ ಮಕ್ಕಳ ಮರಣದ ಸಂಖ್ಯೆ ದಿನೇ ದಿನ ಹೆಚ್ಚುತ್ತಿದೆ ಹಾಗೂ ಜಾಗತಿಕ ಮಾನಸಿಕ ಆರೋಗ್ಯ ಸೂಚ್ಯಂಕವು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕೆಳಗೆ ಹೋಗುತ್ತದೆ. ಈ ಎಲ್ಲವನ್ನು ಬಗೆಹರಿಸಲು ಸಂಪೂರ್ಣವಾಗಿ ಸಾಧ್ಯವಾಗಿಲ್ಲ ಏಕೆಂದರೆ ಸವಾಲುಗಳು ಹಾಗೂ ಸಂಕಷ್ಟಗಳು ನಿರಂತರವಾಗಿ ಎದುರಾಗುತ್ತಲೇ ಇವೆ ಎಂದು ವಿಶ್ವಸಂಸ್ಥೆಯ ವರದಿ ಅಭಿಪ್ರಾಯ ಪಟ್ಟಿದೆ.
ಈ ದಿನಾಚರಣೆಯ ಅಂಗವಾಗಿ ವಿಶ್ವಸಂಸ್ಥೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವ್ಯಾಟಿಕನ್ ಪ್ರತಿನಿಧಿ, ಜನಸಂಖ್ಯೆ ನಿಯಂತ್ರಣ ಅಥವಾ ಜನನ ನಿಯಂತ್ರಣ ಎಂಬುದು ಎಂದೆಂದಿಗಿಂತಲೂ ಪ್ರಸ್ತುತ ಇಕ್ಕಟ್ಟಿನ ವಸ್ತುವಾಗಿ ಪರಿಣಮಿಸಿದೆ. ಬದಲಾವಣೆ ಸುಸ್ಥಿರ ಅಭಿವೃದ್ಧಿ ಹಿನ್ನೆಲೆಯಲ್ಲಿ ಅತ್ಯಂತ ಕನಿಷ್ಠ ಪ್ರಾಮುಖ್ಯತೆಯ ವಸ್ತುವಾಗಬೇಕಿದ್ದ ಅಥವಾ ವಿಷಯವಾಗಬೇಕಿದ್ದ ಜನನ ನಿಯಂತ್ರಣವು ಈಗ ಸುಸ್ಥಿರ ಅಭಿವೃದ್ಧಿಯನ್ನು ಹಿಂದಕ್ಕೆ ಜನನ ನಿಯಂತ್ರಣ ಅಥವಾ ಜನಸಂಖ್ಯಾ ನಿಯಂತ್ರಣವೇ ಪ್ರಮುಖ ಎಂಬಂತೆ ಈ ಜಗತ್ತಿನಲ್ಲಿ ಗೋಚರಿಸುತ್ತಿದೆ. ಸುಸ್ಥಿರ ಅಭಿವೃದ್ಧಿ ಅಥವಾ ಇನ್ಯಾವುದೇ ರೀತಿಯ ಅಭಿವೃದ್ಧಿಗೆ ಜನನ ನಿಯಂತ್ರಣ ತಡೆಗೋಡೆಯಲ್ಲ ಅಥವಾ ಅದೊಂದೇ ದಾರಿಯಲ್ಲ ಎಂದು ಹೇಳಿದರು.