ಹುಡುಕಿ

2024.02.05 Zayed Award for Human Fraternity 2024

ಸೋದರತೆ ಹಾಗೂ ಭ್ರಾತೃತ್ವದ ಕುರಿತ ಜಾಗತಿಕ ಕಾರ್ಯಕ್ರಮ #ಮನುಷ್ಯರಾಗಿರಿ

ಮೇ 10-11 ರಂದು ನಡೆಯಲಿರುವ #ಮನುಷ್ಯರಾಗಿರಿ ಕಾರ್ಯಕ್ರಮದಲ್ಲಿ ಸುಮಾರು ಮುವತ್ತು ಜನರು ನೊಬೆಲ್ ಪ್ರಶಸ್ತಿ ಪುರಸ್ಕೃತರು ಒಟ್ಟಾಗಿ ಬಂದು "ಶಾಂತಿಯ ದುಂಡುಮೇಜಿನ ಸಭೆ"ಯಲ್ಲಿ ಭಾಗವಹಿಸಲಿದ್ದಾರೆ.

ವರದಿ: ಅಲೆಸಾಂದ್ರೊ ದೆ ಕರೋಲಿಸ್, ಅಜಯ್ ಕುಮಾರ್

ಮೇ 10-11 ರಂದು ಇಟಲಿಯ ರೋಮ್ ನಗರದಲ್ಲಿ #ಮನುಷ್ಯರಾಗಿರಿ ಎಂಬ ಶೀರ್ಷಿಕೆಯನ್ನು ಹೊಂದಿರುವ ವಿಶ್ವ ಭ್ರಾತೃತ್ವ ಸಭೆಯು ನಡೆಯುತ್ತಿದ್ದು, ಇದರ ಉದ್ದೇಶ ವಿಶ್ವದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಮತ್ತೆ ಮರುಸ್ಥಾಪಿಸಲು ಹಾದಿಗಳನ್ನು ಕಂಡುಕೊಳ್ಳುವ ದಿಶೆಯಲ್ಲಿ ಕಾರ್ಯನಿರ್ವಹಿಸುವಂತದ್ದಾಗಿದೆ. 

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿರುವ ಮುವತ್ತು ಪುರಸ್ಕೃತರು ಭಾಗವಹಿಸಲಿದ್ದು, ಇಲ್ಲಿನ "ಶಾಂತಿಯ ದುಂಡುಮೇಜಿನ ಸಭೆ"ಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಮಕ್ಕಳ ಕುರಿತ ಒಂದು ಅಧಿವೇಶನವೂ ಸಹ ಇದು, ತದನಂತರ ಎಲ್ಲರೂ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಲಿದ್ದಾರೆ. 

ಈ ಕಾರ್ಯಕ್ರಮವನ್ನು ಫ್ರಾತೆಲ್ಲಿ ತುತ್ತಿ ಪ್ರತಿಷ್ಟಾನವು ಆಯೋಜಿಸಿದ್ದು, ಈ ಕಾರ್ಯಕ್ರಮವು ವ್ಯಾಟಿಕನ್ ಹಾಗೂ ರೋಮ್ ನಗರದ ವಿವಿಧ ಭಾಗಗಳಲ್ಲಿ ನಡೆಯಲಿದೆ. ಸಾರ್ವಜನಿಕರಿಗೆ ಈ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದ್ದು, ಹಲವು ಅಧಿವೇಶನಗಳನ್ನು ನೇರಪ್ರಸಾರ ಸಹ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ವಿವಿಧ ಅಧಿವೇಶನಗಳಿದ್ದು, ವಿವಿಧ ಸಂಪನ್ಮೂಲ ವ್ಯಕ್ತಿಗಳು ಹಲವು ವಿಷಯಗಳ ಕುರಿತು ಉಪನ್ಯಾಸವನ್ನು ನೀಡಿ, ಸಂವಾದವನ್ನು ಹಮ್ಮಿಕೊಳ್ಳಲಿದ್ದಾರೆ.

ವಿಜ್ಞಾನಿಗಳು, ವೈದ್ಯರು, ಕಾರ್ಮಿಕರು, ಅರ್ಥಶಾಸ್ತ್ರಜ್ಞರು, ವ್ಯವಸ್ಥಾಪಕರು ಹಾಗೂ ವಿವಿಧ ವೃತ್ತಿಪರರೊಂದಿಗೆ ಮುವತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತರು ಸಂವಾದವನ್ನು ನಡೆಸಲಿದ್ದಾರೆ. 

ಮಕ್ಕಳ ದುಂಡು ಮೇಜಿನ ಸಭೆಯೂ ಸಹ ಇರಲಿದ್ದು, ಮಕ್ಕಳು ಈ ಜಗತ್ತಿನ ಭವಿಷ್ಯವಾದ ಕಾರಣ, ಅವರ ಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಭಾಗವಹಿಸಲಿದ್ದಾರೆ. ವ್ಯಾಟಿಕನ್ನಿನ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೊಲಿನ್ ಅವರು ಉದ್ಘಾಟನಾ ಭಾಷಣವನ್ನು ಮಾಡಲಿದ್ದು, ಈ ಕಾರ್ಯಕ್ರಮವನ್ನು ವ್ಯಾಟಿಕನ್ ನೇರ ಪ್ರಸಾರ ಮಾಡಲಿದೆ. 

ಎರಡು ದಿನದ ಈ ಕಾರ್ಯಕ್ರಮವು ಸಂಗೀತ ಸಂಜೆಯೊಂದಿಗೆ ಮುಕ್ತಾಯವಾಗಲಿದೆ. 

09 May 2024, 16:53