ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಹೊಸ ವೇದಿಕೆಗಾಗಿ ಕರೆ ನೀಡಿದ ಜಾಗತಿಕ ಸಮಾವೇಷ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
ರೋಮ್ ನಗರದಲ್ಲಿ ಬುಧವಾರ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಸಮಗ್ರ ಮಾನವ ಅಭಿವೃದ್ಧಿ ಕುರಿತಂತೆ ಸಮಾವೇಷವು ನಡೆಯುತ್ತಿದೆ. ಈ ಸಮಾವೇಶದಲ್ಲಿ ವ್ಯಾಟಿಕನ್ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್, ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಸೇರಿದಂತೆ ಹಲವಾರು ವಿಶ್ವಸಂಸ್ಥೆಯ ಅಧಿಕಾರಿಗಳು ಭಾಗವಹಿಸಿದ್ದಾರೆ.
ಈ ಸಮಾವೇಷವನ್ನು ಪವಿತ್ರ ಪೀಠಕ್ಕೆ ಸೋವರ್ರೈನ್ ಆರ್ಡರ್ ಆಫ್ ಮಾಲ್ಟಾ, ಉರ್ಬಾನಿಯಾ ವಿಶ್ವವಿದ್ಯಾನಿಲಯ, ಫ್ರೀಡಂ ಆ್ಯಂಡ್ ಪ್ರೊಸ್ಪೇರಿಟಿ ಸೆಂಟರ್ ಅಡ್ವೈಸರಿ ಕೌನ್ಸಿಲ್ ಆಫ್ ದಿ ಅಟ್ಲಾಂಟಿಕ್ ಕೌನ್ಸಿಲ್ ಇನ್ ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ವಿವಿಧ ಪ್ರಾಧಿಕಾರಗಳು ಈ ಸಮಾವೇಷವನ್ನು ಜಂಟಿಯಾಗಿ ಆಯೋಜಿಸಿವೆ.
ಈ ಸಮಾವೇಷದಲ್ಲಿ ಜಗತ್ತಿನಲ್ಲಿ ಆಗುತ್ತಿರುವ ವ್ಯಕ್ತಿಗಳ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯ ಕುರಿತು ಹಾಗೂ ಒಟ್ಟಾರೆಯಾಗಿ ಮಾನವ ಸಮಗ್ರ ಅಭಿವೃದ್ಧಿಯ ಕುರಿತು ಚರ್ಚೆ ಹಾಗೂ ಸಂವಾದಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಪ್ರಾಧಿಕಾರಗಳ ಸದಸ್ಯರು ಇಲ್ಲಿ ಮಾತನಾಡಿ, ವಿಷಯದ ಕುರಿತು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಎಲ್ಲಾ ರಾಜ್ಯಗಳು ಹಾಗೂ ದೇಶಗಳು ಧಾರ್ಮಿಕ ಸ್ವಾತಂತ್ರ್ಯದ ವಿಷಯದಲ್ಲಿ ತಟಸ್ಥ ನೀತಿಯನ್ನು ಅನುಸರಿಸಬೇಕು ಹಾಗೂ ಎಲ್ಲರ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸಬೇಕು. ಏಕೆಂದರೆ ಮತ್ತೊಬ್ಬರ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವುದು ಮಾನವ ಅಭಿವೃದ್ಧಿಗೆ ಪೂರಕವಾಗಿದೆ ಎಂಬ ಅಭಿಪ್ರಾಯವನ್ನು ಒಗ್ಗಟ್ಟಿನಿಂದ ಪ್ರತಿಪಾದಿಸಿದ್ದಾರೆ.