ಗಾಝಾದಲ್ಲಿ ಮುಂದುವರೆದ ಯುದ್ಧ; ಇಸ್ರೇಲ್ ಕ್ಷಿಪಣಿ ದಾಳಿ
ಕದನವಿರಾಮ ಘೋಷಿಸಲು ಪ್ರಯತ್ನಗಳು ನಡೆಯುತ್ತಿರುವ ಬೆನ್ನಲ್ಲಿಯೇ, ಇಸ್ರೇಲ್ ಸೇನೆಯು ಗಾಝಾದ ರಾಫಾ ಪ್ರದೇಶದ ಮೇಲೆ ತನ್ನ ವಾಯುದಾಳಿಯನ್ನು ಮುಂದುವರೆಸಿದೆ.
ವರದಿ: ನೇಥನ್ ಮೋರ್ಲೆ, ಅಜಯ್ ಕುಮಾರ್
ಗಾಝಾ ಹಾಗೂ ಈಜಿಪ್ಟ್ ದೇಶದ ಗಡಿಯ ಬಳಿ ಇಸ್ರೇಲ್ ಸೇನೆ ಹಾಗೂ ಹಮಾಸ್ ಗುಂಪಿನ ನಡುವೆ ಯುದ್ಧ ತೀವ್ರವಾದ ಸ್ವರೂಪವನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಗಾಝಾದ ರಾಫಾ ಪ್ರದೇಶದ ಮೇಲೆ ಭೂ ಆಕ್ರಮಣ ಸೇರಿದಂತೆ ವಾಯು ದಾಳಿಯನ್ನು ನಡೆಸಿದೆ ಎಂದು ರಾಫಾ ಪ್ರದೇಶದ ವಾಸಿಗಳು ಹೇಳಿದ್ದಾರೆ.
ಇದಕ್ಕೂ ಮುಂಚಿತವಾಗಿ ಗಾಝಾದ ಶಾಲೆಯ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಸುಮಾರು ೩೫ ಜನರು ಹತ್ಯೆಯಾಗಿದ್ದರು. ಈ ಹಿನ್ನೆಲೆಯಲ್ಲಿ ತನ್ನ ವಾಯುದಾಳಿಯಲ್ಲಿ ಪಾರದರ್ಶಕವಾಗಿರ ಬೇಕೆಂದು ಅಮೇರಿಕಾ ಇಸ್ರೇಲ್ ದೇಶಕ್ಕೆ ಸಲಹೆ ನೀಡಿದೆ.
ಇಸ್ರೇಲ್ ಸೇನೆಯ ಪ್ರಕಾರ ಅದು ನಿರ್ದಿಷ್ಟವಾಗಿ ಹಮಾಸ್ ನೆಲೆಯ ಮೇಲೆ ದಾಳಿ ಮಾಡಿದ್ದು, ಸುಮಾರು ಇಪ್ಪತ್ತರಿಂದ ಮೂವತ್ತು ಹಮಾಸ್ ಉಗ್ರರನ್ನು ಹತ್ಯೆ ಮಾಡಿದೆ.
ಹಮಾಸ್ ನಡೆಸುತ್ತಿರುವ ಆರೋಗ್ಯ-ಸಂಸ್ಥೆಗಳ ಪ್ರಕಾರ ಯುದ್ಧ ಆರಂಭವಾದಾಗಿನಿಂದ ಈವರೆಗೆ ಇಸ್ರೇಲ್ ದಾಳಿಯಲ್ಲಿ ೩೬,೭೩೧ ಜನರು ಸಾವನ್ನಪ್ಪಿದ್ದಾರೆ.
26 June 2024, 19:13