ಜೋಹಾನ್ಸ್'ಬರ್ಗ್ ಆರ್ಚ್'ಬಿಷಪ್: ಪ್ರತಿಯೊಂದು ಮಗುವಿಗೂ ತಾನು ಯಾರು ಎಂದು ತಿಳಿದುಕೊಳ್ಳುವ ಹಕ್ಕಿದೆ
ವರದಿ: ಸಿಸ್ಟರ್ ಖಟ್ಲೆಹೋ ಕಾಂಗ್, ಎಸ್.ಎನ್.ಜೆ.ಎಂ., ಅಜಯ್ ಕುಮಾರ್
ದಕ್ಷಿಣ ಆಫ್ರಿಕಾ ಪ್ರಾಂತ್ಯದಲ್ಲಿ ಬಹುತೇಕ ಮಕ್ಕಳು ಜನನ ಪ್ರಮಾಣ ಪತ್ರ ಸೇರಿದಂತೆ ಯಾವುದೇ ರೀತಿಯ ಕಾನೂನಾತ್ಮಕ ದಾಖಲೆಗಳು ಇಲ್ಲದ ಕಾರಣ ಒಂದು ರೀತಿಯ ಸರ್ಕಾರರಹಿತ ವಾತಾವರಣವನ್ನು ಹಾಗೂ ರಾಷ್ಟ್ರೀಯತೆ ಇಲ್ಲದ ಭಾವವನ್ನು ಅನುಭವಿಸುತ್ತಿದ್ದಾರೆ.
ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ ದಕ್ಷಿಣ ಆಫ್ರಿಕಾ ಭಾಗದಲ್ಲೇ ಸುಮಾರು ೧೯ ಮಿಲಿಯನ್ ಮಕ್ಕಳು ಜನನ ಪ್ರಮಾಣ ಪತ್ರವಿಲ್ಲದೆ ಇದ್ದಾರೆ. ಇದು ಅವರು ಯಾವುದೇ ರೀತಿಯ ಕಾನೂನಾತ್ಮಕ ಗುರುತನ್ನು ಹೊಂದಿರುವುದಿಲ್ಲ. ಯಾವುದೇ ಕಾರ್ಯಕ್ಕೆ ಕಾನೂನಾತ್ಮಕ ದಾಖಲೆಗಳು ಅವಶ್ಯಕವಾದ ಕಾರಣ, ದಾಖಲೆಗಳ ಕೊರತೆಯ ಕಾರಣ ಅವರಿಗೆ ಯಾವ ರೀತಿಯ ಕಾನೂನಾತ್ಮಕ ನೆರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಮಕ್ಕಳು ಹಾಗೂ ಇನ್ನಿತರ ಜನರು ದಾಖಲಾತಿ ರಹಿತವಾಗಿರುವುದು ಅವರಿಗೆ ನಾನಾ ಸಮಸ್ಯೆಗಳನ್ನುಂಟು ಮಾಡುತ್ತಿದೆ. ಇದರಿಂದ ಮಕ್ಕಳು ದೇಶದ ನಾಗರೀಕರಾಗಲೂ ಸಹ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿಯ ದಾಖಲೆ ಇಲ್ಲದಿರುವಿಕೆ ಇವರ ಭವಿಷ್ಯಕ್ಕೆ ಮುಳುವಾಗಬಹುದು ಎಂದು ಅಲ್ಲಿನ ಮಹಾಧರ್ಮಾಧ್ಯಕ್ಷರಾದ ಬುಟಿ ಅವರು ಅಭಿಪ್ರಾಯ ಪಟ್ಟಿದ್ದಾರೆ. ಈ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಶೀಘ್ರವೇ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದ್ದಾರೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಪ್ರಾಧಿಕಾರಗಳಿಗೆ ಮನವಿಯ್ನನ್ನು ಮಾಡಿದ್ದಾರೆ.