ಹುಡುಕಿ

2024.06.27 Membri dell'Assemblea Plenaria della Pontificia Commissione per ml'America Latina

ಪೋಪ್: ಲ್ಯಾಟಿನ್ ಅಮೇರಿಕಾ ಆಯೋಗವು ಸಂಧಾನ ಮತ್ತು ಸೋದರತ್ವವನ್ನು ಬೆಳೆಸಬೇಕು

ಪೊಂಟಿಫಿಕಲ್ ಲ್ಯಾಟಿನ್ ಅಮೇರಿಕನ್ ಆಯೋಗದ ಸದಸ್ಯರನ್ನು ಸ್ಥಳೀಯ ಚರ್ಚುಗಳನ್ನು ಉತ್ತೇಜಿಸುವಂತೆ ಪೋಪ್ ಫ್ರಾನ್ಸಿಸ್ ಕರೆ ನೀಡಿದ್ದಾರೆ. ಸಂಧಾನ ಹಾಗೂ ಸೋದರತ್ವದ ಮೂಲಕ ಸಂಬಂಧಗಳನ್ನು ಉತ್ತಮಪಡಿಸುವಂತೆ ಮನವಿ ಮಾಡಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ವ್ಯಾಟಿಕನ್ನಿನ ಪೊಂಟಿಫಿಕಲ್ ಲ್ಯಾಟಿನ್ ಅಮೇರಿಕಾ ಆಯೋಗವು ತನ್ನ ವಾರ್ಷಿಕ ಪೂರ್ವಭಾವಿ ಸಭೆಯನ್ನು ಆರಂಭಿಸಿರುವ ಹಿನ್ನೆಲೆಯಲ್ಲಿ ಈ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದ ವಿಶ್ವಗುರು ಪೋಪ್ ಫ್ರಾನ್ಸಿಸ್ ಅವರು ಲ್ಯಾಟಿನ್ ಅಮೇರಿಕಾ ದೇಶಗಳಲ್ಲಿ ಸ್ಥಳೀಯ ಚರ್ಚುಗಳ ಅಭಿವೃದ್ಧಿಗಾಗಿ ನೀವು ಉತ್ತೇಜನವನ್ನು ನೀಡಬೇಕು. ಲ್ಯಾಟಿನ್ ಅಮೇರಿಕಾ ಹಾಗೂ ಪವಿತ್ರ ಪೀಠದ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಶ್ರಮಿಸಬೇಕು ಎಂದು ಹೇಳಿದ್ದಾರೆ.

ತಮ್ಮ ಪ್ರದೇಶದಲ್ಲಿ ಹೇಗೆ ಮತ್ತಷ್ಟು ಹುರುಪು ಹಾಗೂ ಹುಮ್ಮಸ್ಸಿನಿಂದ ಶುಭಸಂದೇಶವನ್ನು ಸಾರಲು ಹೇಗೆ ನಾವು ವ್ಯಾಟಿಕನ್ನಿನ ಪವಿತ್ರ ಪೀಠದ ಇತರೆ ಪೀಠಗಳೊಂದಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಬಹುದು ಎಂಬ ಕುರಿತು ಸಂವಾದವನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಈ ಮಾತುಗಳನ್ನು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು "ಪೊಂಟಿಫಿಕಲ್ ಲ್ಯಾಟಿನ್ ಅಮೇರಿಕಾ ಆಯೋಗವು ಸಂಧಾನವನ್ನು ಹಾಗೂ ಸೋದರತ್ವವನ್ನು ಪೋಷಿಸಬೇಕು. ಈ ಮೂಲಕ ಸ್ಥಳೀಯ ಧರ್ಮಸಭೆಯು ಪವಿತ್ರ ಪೀಠದೊಂದಿಗೆ ಉತ್ತಮ ಸಂಬಂಧವನ್ನು ಹೊಂದುವಂತೆ ಮಾಡಬೇಕು ಎಂದು ಹೇಳಿದರು.      

27 June 2024, 15:39