ಪೀಟರ್ಸ್ ಪೆನ್ಸ್: ಪೋಪ್ ಫ್ರಾನ್ಸಿಸ್ ಅವರ ಸೇವಾಕಾರ್ಯದಲ್ಲಿ ನೆರವಾಗುತ್ತಿರುವ ಯೋಜನೆ

ಪೋಪ್ ಫ್ರಾನ್ಸಿಸ್ ಅವರು ಇದೇ ಜೂನ್ ತಿಂಗಳನ ೩೦ನೇ ತಾರೀಖು ತಮ್ಮ ವಾರ್ಷಿಕ ಮನವಿಯನ್ನು ಮಾಡುತ್ತಿದ್ದು, ಪ್ರಪಂಚದಾದ್ಯಂತ ಕಥೋಲಿಕರು ತಮ್ಮ ಕೈಲಾದಷ್ಟು ಹಣಕಾಸಿನ ನೆರವನ್ನು ನೀಡಬಹುದಾಗಿದೆ. ಈ ನೆರವು ಪೀಟರ್ಸ್ ಪೆನ್ಸ್ ನಿಧಿಗೆ ಸೇರಲಿದ್ದು, ಅದನ್ನು ಪೇತ್ರರ ಉತ್ತರಾಧಿಕಾರಿಯಾಗಿರುವ ಪೋಪ್ ಫ್ರಾನ್ಸಿಸ್ ಅವರು ಬಡವರ, ನಿರ್ಗತಿಕರ ವಿಶೇಷವಾಗಿ ಯಾತನೆಯನ್ನು ಅನುಭವಿಸುತ್ತಿರುವವರಿಗೆ ಬಳಸಲಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪ್ರಪಂಚದಾದ್ಯಂತ ಎಲ್ಲಾ ಧರ್ಮಕೇಂದ್ರಗಳು ಹಾಗೂ ಸಮುದಾಯಗಳಿಗೆ ಈ ದಾನದ ಮನವಿಯು ಸೇರಲಿದ್ದು, ಇಲ್ಲಿಂದ ಬರುವ ಹಣಕಾಸನ್ನು ಪೋಪ್ ಫ್ರಾನ್ಸಿಸರು ಜಗತ್ತಿನಲ್ಲಿ ಹಿಂಸೆ, ನೋವು, ಭಾದೆಯಿಂದ ಪೀಡಿತರಾಗಿರುವವರಿಗೆ ಇದರ ಮೂಲಕ ನೆರವನ್ನು ನೀಡಲಿದ್ದಾರೆ. 

ಹೀಗೆ, ಈ ರೀತಿಯ ನೆರವು ಹಾಗೂ ದಾನ ಧರ್ಮದ ಮೂಲಕ ಪೋಪ್ ಫ್ರಾನ್ಸಿಸ್ ಅವರು ಸಂತ ಪೇತ್ರರ ಉತ್ತರಾಧಿಕಾರಿಯಾಗಿ ತಮ್ಮ ಧ್ವನಿಯನ್ನು ಜಗತ್ತಿನ ಮೂಲೆ ಮೂಲೆಗಳಲ್ಲಿ ಪಸರಿಸಲಿದ್ದಾರೆ. ಪೀಟರ್ಸ್ ಪೆನ್ಸ್ ನಿಧಿಗೆ ನೀಡುವ ದಾನವು ಎಷ್ಟೇ ಚಿಕ್ಕದಾದರೂ ಅದನ್ನು ಕೃತಜ್ಞತೆಯಿಂದ ಪಡೆದುಕೊಂಡು, ಉದಾತ್ತ ಕಾರ್ಯಗಳಿಗಾಗಿ ಬಳಸಿಕೊಳ್ಳಲಾಗುತ್ತದೆ.   

25 June 2024, 18:32