ಹುಡುಕಿ

ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ತಪ್ಪೆಸಗಿದ ಪೇತ್ರನಿಗೆ ಪ್ರಭು ತಮ್ಮ ಸಾಮ್ರಾಜ್ಯದ ಉಸ್ತುವಾರಿಯನ್ನು ನೀಡಿದರು

ಸಂತರುಗಳಾದ ಪೇತ್ರ ಮತ್ತು ಪೌಲರ ಹಬ್ಬದ ದಿನ ವ್ಯಾಟಿಕನ್ ನಗರದಲ್ಲಿ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್, ಹೇಗೆ ಪ್ರಭು ಕ್ರಿಸ್ತರು ಹಲವು ಬಾರಿ ತಪ್ಪೆಸಗಿದ ಪೇತ್ರನಿಗೆ ತಮ್ಮ ಸಾಮ್ರಾಜ್ಯದ ಉಸ್ತುವಾರಿಯನ್ನು ನೀಡಿದರು ಎಂಬ ಕುರಿತು ಚಿಂತನೆಯನ್ನು ನಡೆಸಿದರು.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

"ಪೇತ್ರ ಎಲ್ಲದರಲ್ಲೂ  ಉತ್ತಮವಾಗಿದ್ದ ಎಂಬ ಕಾರಣಕ್ಕೆ ಆತನಿಗೆ ಪ್ರಭು ತಮ್ಮ ಸಾಮ್ರಾಜ್ಯದ ಉಸ್ತುವಾರಿಯನ್ನು ನೀಡಲಿಲ್ಲ; ಆತ ದೀನತೆಯನ್ನು ಹಾಗೂ ಪ್ರಾಮಾಣಿಕನಾಗಿದ್ದ ಕಾರಣಕ್ಕೆ, ಆತನ ವಿಶ್ವಾಸಕ್ಕೆ ತಂದೆ ದೇವರು ಆತನನ್ನು ಆರಿಸಿಕೊಂಡರು" ಎಂದು ಪೋಪ್ ಫ್ರಾನ್ಸಿಸ್ ಅವರು ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಸಂತ ಪೇತ್ರ ಹಾಗೂ ಸಂತ ಪೌಲರ ಹಬ್ಬದ ದಿನದಂದು ಹೇಳಿದರು.

"ಅದೇ ರೀತಿ, ನಾವೂ ಸಹ ನಮ್ಮ ಬದುಕಿನಲ್ಲಿ ಅನೇಕ ರೀತಿಯ ಸಮಸ್ಯೆಗಳಿಂದ ಹಾಗೂ ಉಪದ್ರವಗಳಿಂದ ಬಳಲುವ ಕಾರಣ, ನಮ್ಮ ಬಲಹೀನತೆಯಿಂದ ದೇವರಿಂದ ದೂರ ಸರಿಯುತ್ತೇವೆ. ಆದರೆ, ನಾವು ಧೃತಿಗೆಡದೆ ದೇವರಲ್ಲಿ ವಿಶ್ವಾಸವಿಟ್ಟು ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ದೇವರ ಕರುಣೆಯೇ ನಮ್ಮ ಭರವಸೆ " ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು "ಯೇಸುವಿನ ಸೇವಾಕಾರ್ಯ ಎಂಬುದು ಎಲ್ಲರಿಗೂ ದಕ್ಕಿರುವ ಕರೆ. ಕೇವಲ ಆರಿಸಿಕೊಂಡ ಕೆಲವರಿಗೆ ಮಾತ್ರವಲ್ಲ ಬದಲಿಗೆ ಎಲ್ಲರಿಗೂ ಸಿಕ್ಕಿರುವ ದೈವಕರೆ" ಎಂದು ಹೇಳಿದರು.  

 

29 June 2024, 14:48