ಹುಡುಕಿ

ಪೋಪ್: ಸೃಷ್ಟಿಯೆಡೆಗಿನ ಕಾಳಜಿಯು ನೈತಿಕ ಮತ್ತು ದೈವಶಾಸ್ತ್ರೀಯ ಸಮಸ್ಯೆಯಾಗಿದೆ

ಸೃಷ್ಟಿಯೆಡೆಗಿನ ಕಾಳಜಿಗೆ ವಿಶ್ವ ಪ್ರಾರ್ಥನೆ ದಿನದ ಅಂಗವಾಗಿ ತಮ್ಮ ಸಂದೇಶವನ್ನು ಬಿಡುಗಡೆ ಮಾಡಿರುವ ಪೋಪ್ ಫ್ರಾನ್ಸಿಸ್ ಅವರು, ಹೇಗೆ ಯುದ್ಧ ಸೇರಿದಂತೆ ಇನ್ನಿತರ ಮಾನವ ನಿರ್ಮಿತ ಸಮಸ್ಯೆಗಳನ್ನು ದೇವರ ಸೃಷ್ಟಿಯನ್ನು ಹಾಳುಮಾಡುತ್ತಿವೆ ಎಂಬುದರ ಕುರಿತು ಮಾತನಾಡಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಿಲೀನೋ ಲುಬೋವ್, ಅಜಯ್ ಕುಮಾರ್

ಮಾನವೀಯತೆಯು ಮಾಡುತ್ತಿರುವ ಸೃಷ್ಟಿಯ ದೌರ್ಜನ್ಯ ಎಂಬುದನ್ನು ತಡೆಗಟ್ಟಲು ನಿಜವಾದ ಪರಿವರ್ತನೆಯ ಅಗತ್ಯವಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. 

ಸೆಪ್ಟೆಂಬರ್ ೧ ರಂದು ಸೃಷ್ಟಿಯೆಡೆಗಿನ ಕಾಳಜಿಯ ಪ್ರಾರ್ಥನೆಯ ದಿನವನ್ನು ಆಚರಿಸಲಾಗುತ್ತದೆ. ಇದಕ್ಕಾಗಿ ಇಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. 

ಮುಂದುವರೆದು ಮಾತನಾಡಿರುವ ಅವರು "ದೇವರ ಸೃಷ್ಟಿಯೊಂದಿಗೆ ಭರವಸೆಯನ್ನು ಇಡುತ್ತಾ, ಅದರ ಜೊತೆಗೆ ನಾವು ಸಹಯೋಗದೊಂದಿಗೆ ಜೀವಿಸಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

ಸೃಷ್ಟಿಯನ್ನು ಹೇಗೆ ನಾವು ರಕ್ಷಿಸಬೇಕು ಎಂಬ ಕುರಿತು ವಿವೇಚನೆಯನ್ನು ಬಳಸುತ್ತಾ, ಅದಕ್ಕೆ ಬೇಕಾದ ಕ್ರಮಗಳನ್ನು ನಾವು ವಹಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಎಲ್ಲರಿಗೂ ಕರೆ ನೀಡಿದ್ದಾರೆ. 

27 June 2024, 16:25