ಹುಡುಕಿ

ದೌರ್ಜನ್ಯಕ್ಕೀಡಾದ ಜರ್ಮನ್ ಗುರುಗಳನ್ನು ಭೇಟಿ ಮಾಡಿ ಸಂತೈಸಿದ ವಿಶ್ವಗುರು ಫ್ರಾನ್ಸಿಸ್

ಈ ವಾರ ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ ಹಾಗೂ ದೌರ್ಜನ್ಯಕೀಡಾದ ಹಲವು ಜರ್ಮನ್ ಗುರುಗಳ ನಡುವೆ ಖಾಸಗಿ ಮಾತುಕತೆ ನಡೆಯಿತು. ಈ ಸಂದರ್ಭದಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರನ್ನು ಸಂತೈಸಿ ಸಮಾಧಾನ ಪಡಿಸಿದರು.

ವರದಿ: ಮಾರಿಯೋ ಗಾಲ್ಗಾನೋ, ಸಾಲ್ವತೋರ್ ಚರ್ನ್ಯೂಜಿಯೋ, ಅಜಯ್ ಕುಮಾರ್

ವಿಶ್ವಗುರು ಫ್ರಾನ್ಸಿಸ್ ಅವರು ಜರ್ಮನಿ ದೇಶದ ವಿವಿಧ ಧರ್ಮ ಕ್ಷೇತ್ರಗಳ ಹಲವು ಗುರುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಗುರುಗಳು ತಮ್ಮ ಜೀವನದಲ್ಲಿ ಧರ್ಮಸಭೆಯಿಂದ ಹಾಗೂ ಧರ್ಮಸಭೆಯ ಗುರುಗಳಿಂದ ದೌರ್ಜನ್ಯಕ್ಕೆ ಒಳಗಾದ ಗುರುಗಳಾಗಿದ್ದು, ಅವರು ವಿಶ್ವಗುರು ಫ್ರಾನ್ಸಿಸ್ ಅವರನ್ನು ಭೇಟಿ ಮಾಡುತ್ತಾರೆ ತಮ್ಮ ಕರಾಳಘಟನೆಯನ್ನು ಅವರೊಂದಿಗೆ ಹಂಚಿಕೊಂಡರು.

ಅವರನ್ನು ಸಂತೈಸುತ್ತ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಕೆಲವೊಮ್ಮೆ ಈ ರೀತಿ ಆಗುತ್ತದೆ. ಇದು ಧರ್ಮಸಭೆಯ ಮತ್ತೊಂದು ಮುಖ. ಇದನ್ನು ಬದಲಾಯಿಸಲು ಅನೇಕ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ನೀವೆಲ್ಲರೂ ನಿಮ್ಮೆಲ್ಲ ನೋವುಗಳನ್ನು ಕ್ರಿಸ್ತನಿಗೆ ಅರ್ಪಿಸಿರಿ ಎಂದು ಹೇಳುವ ಮೂಲಕ ದೌರ್ಜನ್ಯಕ್ಕೆ ಒಳಗಾದ ಗುರುಗಳನ್ನು ಅವರು ಸಮಾಧಾನ ಪಡಿಸಿದರು.

26 June 2024, 19:07