ಪೋಪ್: ಎಲ್ಲರೂ ತಮಗೆ ಇಷ್ಟ ಬಂದ ಧರ್ಮ ಅಥವಾ ವಿಶ್ವಾಸವನ್ನು ಆಚರಿಸಲು ಸ್ವತಂತ್ರರಾಗಿದ್ದಾರೆ
ವರದಿ: ಡೆಬೋರಾ ಕ್ಯಾಸ್ಟಲಿನೊ ಲುಬೋವ್, ಅಜಯ್ ಕುಮಾರ್
"ಪ್ರಸ್ತುತ ಜಗತ್ತಿನಲ್ಲಿ ವಿವಿಧ ಧರ್ಮಗಳ ವಿಶ್ವಾಸವನ್ನು ಮಾತ್ರವಲ್ಲ, ಬದ್ಧತೆಯಿಂದ ವಿಶ್ವಶಾಂತಿಗಾಗಿ ಸದಾ ಹಂಬಲಿಸುವ ಹಾಗೂ ಆ ನಿಟ್ಟಿನಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಅವಶ್ಯಕತೆ ಇದೆ" ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.
ಇಟಲಿ ದೇಶದ ಬೊಲೊಗ್ನ ನಗರದಿಂದ ಆಗಮಿಸಿದ ಮಸೀದಿ ಸಮಿತಿ ಸದಸ್ಯರನ್ನು ಭೇಟಿ ಮಾಡಿದ ವಿಶ್ವಗುರು ಫ್ರಾನ್ಸಿಸ್, ಕ್ರೈಸ್ತರು ಹಾಗೂ ಮುಸ್ಲಿಮರ ನಡುವಿನ ಸ್ನೇಹ ಸಂಬಂಧವನ್ನು ಶ್ಲಾಘಿಸಿದರು ಹಾಗೂ ಎಲ್ಲಾ ಧರ್ಮಗಳನ್ನು ಗೌರವಿಸಬೇಕು ಎಂಬ ಸಂದೇಶವನ್ನು ನೀಡಿದರು.
ಯೇಸುಕ್ರಿಸ್ತರು ಹೇಳಿದಂತೆ ಎಲ್ಲರನ್ನೂ ಸಹೋದರ ಸಹೋದರಿಯರಂತೆ ನಾವು ಸ್ವಾಗತಿಸಬೇಕು ಎಂದು ಹೇಳಿದ ವಿಶ್ವಗುರು ಫ್ರಾನ್ಸಿಸ್, ನಾವು ಎಲ್ಲರನ್ನೂ ಸ್ವಾಗತಿಸುವ ಹಾಗೂ ಒಳಗೊಳ್ಳುವ ಕರೆಯನ್ನು ಹೊಂದಿದ್ದೇವೆ ಎಂದು ಅವರು ಪುನರುಚ್ಚರಿಸಿದರು.
"ನಾವು ದೇವರ ಇಚ್ಛೆಯನ್ನು ಗೌರವಿಸುವ ಜನರಾದರೆ, ಕ್ರೈಸ್ತರು ಹಾಗೂ ಮುಸ್ಲಿಮರಾಗಿ ನಾವು ಪರಸ್ಪರ ಅನ್ಯೋನ್ಯವಾಗಿ ಬಾಳುತ್ತೇವೆ." ಎಂದು ಹೇಳಿದರು.