ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿ ಸುಮಾರು ಮೂರು ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ

ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿನ ಸುಮಾರು ಎಂಟು ದೇಶಗಳಲ್ಲಿ ಬರಗಾಲ ತೀವ್ರವಾಗಿದ್ದು, ಇಲ್ಲಿನ ಸರಿ ಸುಮಾರು ಮೂರು ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಅವಶ್ಯಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಕೂಡಲೇ ಹಣಕಾಸನ್ನು ಒದಗಿಸಬೇಕೆಂದು ವಿಶ್ವಸಂಸ್ಥೆಯ ಮಕ್ಕಳ ಆಯೋಗವಾದ ಯೂನಿಸೆಫ್ ವರದಿ ಮಾಡಿದೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿನ ಸುಮಾರು ಎಂಟು ದೇಶಗಳಲ್ಲಿ ಬರಗಾಲ ತೀವ್ರವಾಗಿದ್ದು, ಇಲ್ಲಿನ ಸರಿ ಸುಮಾರು ಮೂರು ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಅವಶ್ಯಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಕೂಡಲೇ ಹಣಕಾಸನ್ನು ಒದಗಿಸಬೇಕೆಂದು ವಿಶ್ವಸಂಸ್ಥೆಯ ಮಕ್ಕಳ ಆಯೋಗವಾದ ಯೂನಿಸೆಫ್ ವರದಿ ಮಾಡಿದೆ.

ಬಹುತೇಕ ಈ ದೇಶದ ಜನರು ಬಡವರು ಹಾಗೂ ಅಶಿಕ್ಷಿತರಾಗಿರುವ ಕಾರಣ ಇಲ್ಲಿ ಕುಡಿಯುವ ನೀರು ಸೇರಿದಂತೆ ನೈರ್ಮಲ್ಯ ಸಮಸ್ಯೆಗಳೂ ಸಹ ತಲೆದೋರಿವೆ. ಮಕ್ಕಳು ಹಸಿವಿನ ಕಾರಣ ತೀವ್ರ ಸ್ವರೂಪದ ಅಪೌಷ್ಟಿಕತೆಯನ್ನು ಅನುಭವಿಸುತ್ತಿದ್ದಾರೆ.

ಹವಾಮಾನ ವೈಪರೀತ್ಯ ಸೇರಿದಂತೆ ವಿವಿಧ ಕಾರಣಗಳಿಂದ ಈ ಬರಗಾಲವು ಉಂಟಾಗಿದ್ದು, ವಿಶ್ವಸಂಸ್ಥೆಯ ಮಕ್ಕಳ ಆಯೋಗವಾದ ಯೂನಿಸೆಫ್ ನಿಧಿಯು ಇತರೆ ದೇಶಗಳಿಂದ ನಿಧಿ ಹಾಗೂ ಹಣಕಾಸಿನ ನೆರವಿಗೆ ಮನವಿಯನ್ನು ಮಾಡುತ್ತಲೇ ಇದೆ.

27 July 2024, 17:26