ಕೃತಕ ಬುದ್ಧಿಮತ್ತೆಯ ಕುರಿತು ರೋಮ್ ನಗರವು ನೀಡಿದ್ದ ಕರೆಯನ್ನು ಬೆಂಬಲಿಸಿದ ವಿಶ್ವ ಧರ್ಮಗಳು

ಕೃತಕ ಬುದ್ಧಿಮತ್ತೆಯ ಕುರಿತು ರೋಮ್ ನಗರವು ಇತ್ತೀಚಿಗೆ ನೀಡಿದ ಕರೆಯನ್ನು ಮನ್ನಿಸಿರುವ ವಿಶ್ವದ ವಿವಿಧ ಪ್ರಧಾನ ಧರ್ಮಗಳು ಹಿರೋಶಿಮದಲ್ಲಿ ಭೇಟಿಯಾಗಿ ರೋಮ್ ನಗರವು ನೀಡಿದ ಈ ಕರೆಯನ್ನು ಬೆಂಬಲಿಸಿ ದಾಖಲೆಗೆ ಸಹಿ ಹಾಕಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಕೃತಕ ಬುದ್ಧಿಮತ್ತೆಯ ಕುರಿತು ರೋಮ್ ನಗರವು ಇತ್ತೀಚಿಗೆ ನೀಡಿದ ಕರೆಯನ್ನು ಮನ್ನಿಸಿರುವ ವಿಶ್ವದ ವಿವಿಧ ಪ್ರಧಾನ ಧರ್ಮಗಳು ಹಿರೋಶಿಮದಲ್ಲಿ ಭೇಟಿಯಾಗಿ, ರೋಮ್ ನಗರವು ನೀಡಿದ ಈ ಕರೆಯನ್ನು ಬೆಂಬಲಿಸಿ, ದಾಖಲೆಗೆ ಸಹಿ ಹಾಕಿದ್ದಾರೆ. ಇತ್ತೀಚಿಗೆ ವ್ಯಾಟಿಕನ್ ಪೀಠವು ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸುವ ಕುರಿತಂತೆ ನಾವು ಸೂಕ್ತ ನೈತಿಕ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಅಭಿಪ್ರಾಯ ಪಟ್ಟಿತ್ತು ಹಾಗೂ ಈ ಕುರಿತು ಒಂದು ದಾಖಲೆಯನ್ನು ಸಹ ಬಿಡುಗಡೆ ಮಾಡಿತ್ತು.

ಇದೀಗ ಈ ದಾಖಲೆಯನ್ನು ಕೂಲಂಕುಶವಾಗಿ ಪರಿಶೀಲಿಸಿ ವಿಶ್ವದ ವಿವಿಧ ಪ್ರಧಾನ ಧರ್ಮಗಳು ಕೃತಕ ಬುದ್ಧಿಮತ್ತೆಯನ್ನು ನೈತಿಕ ನೆಲೆಗಟ್ಟಿನಲ್ಲಿ ಉಪಯೋಗಿಸುವುದರ ಕುರಿತು ಹಾಗೂ ಅದನ್ನು ವಿಶ್ವದಲ್ಲಿ ಶಾಂತಿಯನ್ನು ಉತ್ತೇಜಿಸಲು ಬಳಸಿಕೊಳ್ಳುವುದರ ಕುರಿತು ತಮ್ಮ ಸಹಮತವನ್ನು ವ್ಯಕ್ತಪಡಿಸಿ, ಈ ದಾಖಲೆಗೆ ಜಪಾನಿನ ಹೀರೋಶಮಾದಲ್ಲಿ ಸಹಿ ಹಾಕಿದ್ದಾರೆ.

ಎರಡನೇ ಮಹಾಯುದ್ಧದಲ್ಲಿ ಹಿರೋಷಿಮಾದ ಮೇಲೆ ಅಣುಬಾಂಬನ್ನು ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಎಂದಿಗೂ ಸಹ ಯುದ್ಧ ಎಂಬುದು ಬೇಡ ಹಾಗೂ ವಿಶ್ವದಲ್ಲಿ ಸದಾ ಶಾಂತಿಯನ್ನು ನೆಲೆಸಬೇಕು ಎಂಬ ನಿಟ್ಟಿನಲ್ಲಿ ವಿವಿಧ ಧರ್ಮಗಳು ಈ ಪ್ರದೇಶದಲ್ಲಿ ಶಾಂತಿ ಸೌಹಾರ್ದ ಸಮಾವೇಶವನ್ನು ಏರ್ಪಡಿಸಿದ್ದವು. ಈ ಸಮಾವೇಶದಲ್ಲಿ ವ್ಯಾಟಿಕನ್ ಪೀಠವು ಫ್ರಾನ್ಸಿಸ್ ಅವರ ಮಾರ್ಗದರ್ಶನದಲ್ಲಿ ಕೃತಕ ಬುದ್ಧಿಮತ್ತೆಯನ್ನು ನೈತಿಕ ನೆಲೆಗಟ್ಟಿನಲ್ಲಿ ಉಪಯೋಗಿಸುವುದು ಹಾಗೂ ಅದಕ್ಕಾಗಿ ನೈತಿಕ ಮಾರ್ಗಸೂಚಿಗಳನ್ನು ರೂಪಿಸುವುದರ ಕುರಿತು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಈ ಅಭಿಪ್ರಾಯವನ್ನು ಪುರಸ್ಕರಿಸುವ ವಿಶ್ವದ ನಾನ ಧರ್ಮಗಳು ಇದಕ್ಕೆ ತಮ್ಮ ಸಹಮತವನ್ನು ವ್ಯಕ್ತಪಡಿಸಿವೆ ಹಾಗೂ ಈ ಮೂಲಕ ಕೃತಕ ಬುದ್ಧಿಮತ್ತೆ ಎಂಬ ತಂತ್ರಜ್ಞಾನವನ್ನು ವಿಶ್ವದಲ್ಲಿ ಶಾಂತಿಯನ್ನು ಉತ್ತೇಜಿಸಲು ಬಳಸಿಕೊಳ್ಳಬೇಕು ಎಂಬ  ನಿರ್ಧಾರಕ್ಕೆ ಬಂದಿವೆ.  

09 July 2024, 16:12