ಹುಡುಕಿ

ಆರ್ಚ್'ಬಿಷಪ್ ಗ್ಯಾಲಘರ್: ಶಾಂತಿಯನ್ನು ಉತ್ತೇಜಿಸುವುದು ನಿಜವಾದ ರಕ್ಷಣಾತ್ಮಕ ಕ್ರಮ

ಫಿಲಿಪ್ಪೈನ್ ದೇಶಕ್ಕೆ ಐದು ದಿನಗಳ ತಮ್ಮ ಭೇಟಿಯ ಕೊನೆಯ ದಿನದಂದು ಮಾತನಾಡಿದ ಮಹಾಧರ್ಮಾಧ್ಯಕ್ಚ ಗ್ಯಾಲಗರ್ ಅವರು ಫಿಲಿಪ್ಪೈನ್ ರಾಜ ತಾಂತ್ರಿಕ ಅಧಿಕಾರಿಗಳಿಗೆ ಹೇಗೆ ವ್ಯಾಟಿಕನ್ ಪೀಠವು ಪೋಪ್ ಫ್ರಾನ್ಸಿಸ್ ಅವರ ಮಾರ್ಗದರ್ಶನದೊಂದಿಗೆ ಶಾಂತಿಯನ್ನು ಉತ್ತೇಜಿಸುವಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದರ ಕುರಿತು ಮಾತನಾಡಿದ್ದಾರೆ.

ವರದಿ: ಇಸಾಬೆಲ್ಲಾ ಪೀರೋ, ಅಜಯ್ ಕುಮಾರ್

ಫಿಲಿಪ್ಪೈನ್ ದೇಶಕ್ಕೆ ಐದು ದಿನಗಳ ತಮ್ಮ ಭೇಟಿಯ ಕೊನೆಯ ದಿನದಂದು ಮಾತನಾಡಿದ ಮಹಾಧರ್ಮಾಧ್ಯಕ್ಚ ಗ್ಯಾಲಗರ್ ಅವರು ಫಿಲಿಪ್ಪೈನ್ ರಾಜ ತಾಂತ್ರಿಕ ಅಧಿಕಾರಿಗಳಿಗೆ ಹೇಗೆ ವ್ಯಾಟಿಕನ್ ಪೀಠವು ಪೋಪ್ ಫ್ರಾನ್ಸಿಸ್ ಅವರ ಮಾರ್ಗದರ್ಶನದೊಂದಿಗೆ ಶಾಂತಿಯನ್ನು ಉತ್ತೇಜಿಸುವಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದರ ಕುರಿತು ಮಾತನಾಡಿದ್ದಾರೆ.  

ಪ್ರಸ್ತುತ ಜಗತ್ತಿನಲ್ಲಿ ಶಸ್ತ್ರಾಸ್ತ್ರ, ಪರಮಾಣು ಬಾಂಬ್, ಮೂರನೇ ವಿಶ್ವಯುದ್ಧ ಹಾಗೂ ಮುಂತಾದ ಹಿಂಸಾತ್ಮಕ ಅಂಶಗಳ ಕುರಿತು ಚರ್ಚೆ ನಡೆಯುತ್ತಿದೆ. ದೇಶ‌ಗಳನ್ನು ಮುನ್ನಡೆಸುವುದು ಅಥವಾ ಸಂಸ್ಥೆಗಳನ್ನು ಕಟ್ಟುವುದು ಎಂದರೆ ಯುದ್ಧ ಅಥವಾ ಹಿಂಸೆ ಅಲ್ಲ ಬದಲಿಗೆ ಶಾಂತಿಯನ್ನು ಉತ್ತೇಜಿಸುತ್ತಾ, ಪರಸ್ಪರ ಸಹಯೋಗ ಹಾಗೂ ಅರ್ಥೈಸುವಿಕೆಯಲ್ಲಿ ಮುನ್ನಡೆಯುವುದು ಎಂದರ್ಥ ಎಂದು ವ್ಯಾಟಿಕನ್ ರಾಜ್ಯ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾಗಿರುವ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರು ಫಿಲಿಪ್ಪೈನ್ಸ್'ನಲ್ಲಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರು ಹೇಗೆ ವ್ಯಾಟಿಕನ್ ನಗರವು, ಪೋಪ್ ಫ್ರಾನ್ಸಿಸ್ ಅವರ ಮಾರ್ಗದರ್ಶನದಲ್ಲಿ ವಿಶ್ವದಲ್ಲಿ ವಿಶೇಷವಾಗಿ ಯುದ್ಧನಿರತ ದೇಶಗಳಲ್ಲಿ ಶಾಂತಿಯನ್ನು ಸ್ಥಾಪಿಸುವ ಕುರಿತು ರಾಜತಾಂತ್ರಿಕ ಪ್ರಯತ್ನಗಳೂ ಸೇರಿದಂತೆ ಭೌತಿಕ ಉಪಕ್ರಮಗಳನ್ನು ತೆಗೆದುಕೊಂಡಿದೆ ಎಂಬುದರ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕಳೆದ ಐದು ದಿನಗಳ ಕಾಲ ತಮ್ಮ ಫಿಲಿಪ್ಪೈನ್ ದೇಶದ ಭೇಟಿಯಲ್ಲಿ ಅವರು ದೇಶದ ಅಧ್ಯಕ್ಷರೂ ಸೇರಿದಂತೆ ಸರ್ಕಾರಿ ಅಧಿಕಾರಿಗಳು, ಧಾರ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಸಂವಾದವನ್ನು ನಡೆಸಿದ್ದರು.      

06 July 2024, 17:19