ಪವಿತ್ರ ಪೀಠದ ವಿದೇಶಾಂಗ ನೀತಿ ಎಂದಿಗೂ ಶಾಂತಿಯನ್ನು ಉತ್ತೇಜಿಸುತ್ತದೆ: ಆರ್ಚ್'ಬಿಷಪ್ ಗ್ಯಾಲಘರ್
ವರದಿ: ಟಿಜಿಯಾನಾ ಕಂಪೀಸಿ, ಅಜಯ್ ಕುಮಾರ್
ವಿಶ್ವಸಂಸ್ಥೆಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ವ್ಯಾಟಿಕನ್ನಿನ ವಿದೇಶಾಂಗ ವ್ಯವಹಾರಗಳ ಪೀಠದ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಅವರು ವ್ಯಾಟಿಕನ್ ಪೀಠವು ಎಂದಿಗೂ ತನ್ನ ವಿದೇಶಾಂಗ ನೀತಿಯಲ್ಲಿ ಶಾಂತಿಯನ್ನೇ ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತುತ ಜಗತ್ತಿನಲ್ಲಿ ಉದ್ಭವಿಸುತ್ತಿರುವ ಎಲ್ಲಾ ರೀತಿಯ ಸಂಘರ್ಷಗಳಿಗೆ ಶಾಂತಿ ಅಥವಾ ಶಾಂತಿಯ ಉತ್ತೇಜನ ಎಂಬುದು ಪರಿಹಾರವಾಗಿದ್ದು, ಎಲ್ಲರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅವರು ಒತ್ತಾಯಿಸಿದರು. ಇದೇ ವೇಳೆ ಎಂದಿಗೂ ಸಹ, ಯಾವುದೇ ಸಂದರ್ಭಧಲ್ಲಿ ವ್ಯಾಟಿಕನ್ ಪೀಠವು ಹಾಗೂ ಕ್ರೈಸ್ತ ಧರ್ಮಸಭೆ ಎಂಬುದು ಶಾಂತಿಯ ಪರವಾಗಿಯೇ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ಅಕ್ವೀಲಿಯ ನಗರದ ಕುರಿತು ಮಾತನಾಡಿ, ಅದರ ವಿಶೇಷತೆಗಳ ಕುರಿತು ಮುಕ್ತ ಕಂಠದಿಂದ ಶ್ಲಾಘಿಸಿದರು. ಪದೇ ಪದೇ ಶಾಂತಿಯ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಅವರು ಪೋಪ್ ಫ್ರಾನ್ಸಿಸ್ ಅವರ ಶಾಂತಿ ಮನವಿಗಳನ್ನು ಪುನರುಚ್ಛರಿಸಿದರು.