ಫಿಲಿಪ್ಪೈನ್ಸ್ ದೇಶಕ್ಕೆ ಐದು ದಿನಗಳ ಭೇಟಿಯನ್ನು ಆರಂಭಿಸಿದ ಮಹಾಧರ್ಮಾಧ್ಯಕ್ಷ ಗ್ಯಾಲಗರ್

ವ್ಯಾಟಿಕನ್ ಪೀಠದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾಗಿರುವ ಮಹಾಧರ್ಮಾಧ್ಯಕ್ಷ ಪೌಲ್ ರಿಚರ್ಡ್ ಗ್ಯಾಲಗರ್ ಅವರು ಫಿಲಿಪ್ಪೈನ್ಸ್ ದೇಶಕ್ಕೆ ತಮ್ಮ ಐದು ದಿನಗಳ ಭೇಟಿಯನ್ನು ಅರಂಭಿಸಿದ್ದಾರೆ. ಇಲ್ಲಿ ಅವರು ಹಲವು ಕಾರ್ಯಕ್ರಮಗಳು ಸೇರಿದಂತೆ "ವಿಶ್ವಗುರು ದಿನ" ಅಥವಾ "ಪೋಪ್ಸ್ ಡೇ" ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ವ್ಯಾಟಿಕನ್ ಮಾಧ್ಯಮ ಕಚೇರಿಯ ಪ್ರಕಾರ, ಮಹಾಧರ್ಮಾಧ್ಯಕ್ಷ ಪೌಲ್ ರಿಚರ್ಡ್ ಗ್ಯಾಲಗರ್ ಅವರು ಫಿಲಿಪ್ಪೈನ್ಸ್ ದೇಶದಲ್ಲಿ ಹಲವು ಧಾರ್ಮಿಕ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ವಿವಿಧ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

ಅಂತಿಮವಾಗಿ, ಕೊನೆಯ ದಿನದಂದು ಅವರು ಮನಿಲಾದಲ್ಲಿ ಫಾರಿನ್ ಸರ್ವಿಸ್ ಇನ್ಸ್ಟಿಟ್ಯೂಟ್'ನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ವ್ಯಾಟಿಕನ್ ನಗರಕ್ಕೆ ಹಿಂತಿರುಗಲಿದ್ದಾರೆ.

01 July 2024, 17:25