ಕೃತಕ ಬುದ್ಧಿಮತ್ತೆಯನ್ನು ಒರೆಗೆ ಹಚ್ಚಲಿರುವ ಯುರೋಪಿಯನ್ ಯೂನಿಯನ್ ಪತ್ರಕರ್ತ
ಸೈಪ್ರಸ್ ದೇಶದಲ್ಲಿ ನಡೆಯುತ್ತಿರುವ ಯುರೋಪಿಯನ್ ಬ್ರಾಡ್ಕಾಸ್ಟ್ ಯೂನಿಯನ್ ಪತ್ರಕರ್ತರ ಸಮಾವೇಷದಲ್ಲಿ ವ್ಯಾಟಿಕನ್ ರೇಡಿಯೋ ಸಹ ಭಾಗವಹಿಸಿದೆ. ಜಾಗತಿಕವಾಗಿ ಕೋಮು ಧೃವೀಕರಣ ಎಂಬುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅದರ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರದ ಕುರಿತು ಚರ್ಚೆ ಹಾಗೂ ಅವಲೋಕನ ನಡೆದಿದೆ.
ವರದಿ: ವ್ಯಾಟಿಕನ್ ನ್ಯೂಸ್

ವ್ಯಾಟಿಕನ್ ಸಂವಹನ ಪೀಠದ ಉಪ ನಿರ್ದೇಶಕರಾಗಿರುವ ಅಲೆಸ್ಸಾಂದ್ರೋ ಜಿಸೊಟ್ಟಿ ಅವರು ವ್ಯಾಟಿಕನ್ ರೇಡಿಯೋವನ್ನು ಈ ಸಮಾವೇಶದಲ್ಲಿ ಪ್ರತಿನಿಧಿಸಿದ್ದರು.
ಕೃತಕ ಬುದ್ಧಿಮತ್ತೆ ಎಂಬ ತಂತ್ರಜ್ಞಾನವನ್ನು ಹೇಗೆ ದಿನೇ ದಿನೇ ಕೋಮು ಧೃವೀಕರಣ ಹೆಚ್ಚುತ್ತಿರುವ ಜಗತ್ತಿನಲ್ಲಿ ಅದರ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬ ಕುರಿತು ವಿವಿಧ ಆಯಾಮಗಳಲ್ಲಿ ಚರ್ಚೆ ಹಾಗೂ ಸಂವಾದಗಳನ್ನು ಇಲ್ಲಿ ನಡೆಸಲಾಗಿದೆ. ವಿವಿಧ ಸಂಪನ್ಮೂಲ ವ್ಯಕ್ತಿಗಳು ಈ ವಿಷಯ ಸೇರಿದಂತೆ ಹಲವಾರು ವಿಷಯಗಳ ಕುರಿತು ಮಾತನಾಡಿದ್ದಾರೆ.
05 July 2024, 17:30