ಹುಡುಕಿ

ಉಕ್ರೇನ್ ದೇಶದಲ್ಲಿ ಬಲಿಪೂಜೆಯನ್ನರ್ಪಿಸಿದ ಕಾರ್ಡಿನಲ್ ಪರೋಲಿನ್ ಉಕ್ರೇನ್ ದೇಶದಲ್ಲಿ ಬಲಿಪೂಜೆಯನ್ನರ್ಪಿಸಿದ ಕಾರ್ಡಿನಲ್ ಪರೋಲಿನ್ 

ಬಲಿಪೂಜೆಯಲ್ಲಿ ಶಾಂತಿಯ ಅಧ್ಬುತವನ್ನು ನೆನೆದ ಕಾರ್ಡಿನಲ್ ಪರೋಲಿನ್

ವ್ಯಾಟಿಕನ್ ನಗರದ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಪೋಪ್ ಫ್ರಾನ್ಸಿಸ್ ಅವರ ವಿಶೇಷ ಪ್ರತಿನಿಧಿಯಾಗಿ ಉಕ್ರೇನ್ ದೇಶಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಬಲಿಪೂಜೆಯನ್ನು ನೀಡುವ ವೇಳೆ ಶಾಂತಿಯ ಅಧ್ಬುತವನ್ನು ನೆನಪಿಸಿಕೊಂಡಿದ್ದಾರೆ.

ವರದಿ: ಅಂಟೋನೆಲ್ಲಾ ಪಲೇರ್ಮೋ, ಅಜಯ್ ಕುಮಾರ್

ವ್ಯಾಟಿಕನ್ ನಗರದ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಪೋಪ್ ಫ್ರಾನ್ಸಿಸ್ ಅವರ ವಿಶೇಷ ಪ್ರತಿನಿಧಿಯಾಗಿ ಉಕ್ರೇನ್ ದೇಶಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಬಲಿಪೂಜೆಯನ್ನು ನೀಡುವ ವೇಳೆ ಶಾಂತಿಯ ಅಧ್ಬುತವನ್ನು ನೆನಪಿಸಿಕೊಂಡಿದ್ದಾರೆ. 

ಈ ವೇಳೆ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಅಪಾರ ಸಾವು ನೋವುಗಳ ಸನ್ನಿವೇಷವನ್ನು ನೆನಪಿಸಿಕೊಂಡು ಮಾತನಾಡಿದ ಅವರು "ಯಾವುದೇ ಸಂದರ್ಭದಲ್ಲಿ ವಿಚಲಿತರಾಗಬೇಡಿ. ದೇವರು ನಿಮ್ಮೊಂದಿಗೆ ಇದ್ದಾರೆ. ಕೆಡುಕು ಸದ್ಯಕ್ಕೆ ದೊಡ್ಡ ಮಟ್ಟಿಗೆ ಯಶಸ್ವಿಯಾಗಿದೆ ಎಂದು ಎನಿಸಿದರೂ ಸಹ ಭರವಸೆಯಿಂದಿರಿ, ವಿಶ್ವಾಸದಿಂದಿರಿ" ಎಂದು ಕಾರ್ಡಿನಲ್ ಪರೋಲಿನ್ ಅವರು ಬಲಿಪೂಜೆಯಲ್ಲಿ ನೆರೆದಿದ್ದ ಜನತೆಗೆ ಹೇಳಿದರು.

"ದೇವರಿಗೆ ಯಾವುದೂ ಅಸಾಧ್ಯವಲ್ಲ. ಅವರು ಎಲ್ಲರನ್ನೂ ಪೊರೆಯುತ್ತಾರೆ." ಎಂದು ಹೇಳಿದ ಕಾರ್ಡಿನಲ್ ಪರೋಲಿನ್ ಅವರು ನಮ್ಮೆಲ್ಲರ ಹೃದಯಗಳನ್ನು ದೇವರು ಪರಿವರ್ತಿಸಲಿ ಹಾಗೂ ಆ ಮೂಲಕ ನಮಗೆ ಶಾಂತಿಯನ್ನು ದಯಪಾಲಿಸಲಿ" ಎಂದು ಪ್ರಾರ್ಥಿಸಿದರು.

ಮುಂದುವರೆದು ಮಾತನಾಡಿದ ಅವರು "ಪೋಪ್ ಫ್ರಾನ್ಸಿಸರು ಉಕ್ರೇನ್ ದೇಶ ಸೇರಿದಂತೆ ಯುದ್ಧದಿಂದ ಸದಾ ನಲುಗುತ್ತಿರುವ ದೇಶದಗಳ ಎಲ್ಲಾ ಸಹೋದರ-ಸಹೋದರಿಯರನ್ನು ದಿನನಿತ್ಯ ತಮ್ಮ ಪ್ರಾರ್ಥನೆಗಳಲ್ಲಿ ನೆನಪಿಸಿಕೊಳ್ಳುತ್ತಾರೆ ಮಾತ್ರವಲ್ಲದೆ, ಆಧ್ಯಾತ್ಮಿಕವಾಗಿ ಅವರೊಂದಿಗೆ ಐಕ್ಯತೆಯನ್ನು ಸಾಧಿಸುತ್ತಾರೆ" ಎಂದು ಹೇಳಿದರು.  

21 July 2024, 16:14