ಹುಡುಕಿ

ಇಸ್ರೇಲ್ ವಾಯು ದಾಳಿಗೆ 141 ಜನ ಬಲಿಯಾಗಿದ್ದಾರೆ ಎಂದು ಹೇಳಿದ ಹಮಾಸ್

ಗಾಜ ಪಟ್ಟಿಯಲ್ಲಿರುವ ಹಮಾಸ್ ಆರೋಗ್ಯ ಸಚಿವಾಲಯವು ಇಸ್ರೇಲ್ ವಾಯು ದಾಳಿಯಿಂದ ಈವರೆಗೂ ಸುಮಾರು 141 ಜನ ಬಲಿಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವರದಿ: ನೇತನ್ ಮೊರ್ಲೆ, ಅಜಯ್ ಕುಮಾರ್

ಕಳೆದ ಹಲವು ದಿನಗಳಿಂದ ಇಸ್ರೇಲ್ ನಡೆಸಿದ ವಾಯು ದಾಳಿಯ ಪರಿಣಾಮ ಸುಮಾರು ನಾವು 141 ಜನರು ಬಲಿಯಾಗಿದ್ದಾರೆ ಎಂದು ಗಾಜಾಪ್ರದೇಶದಲ್ಲಿರುವ ಹಣ ಆರೋಗ್ಯ ಸಚಿವಾಲಯವು ಪ್ರಕಟಿಸಿದೆ.

ಶನಿವಾರ ಯೂನಸ್ ನಗರದ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಗೆ ಪರಿಣಾಮ ಸುಮಾರು 90 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಪ್ರದೇಶದಲ್ಲಿ ಸುಮಾರು ಲಕ್ಷಕ್ಕೂ ಹೆಚ್ಚು ಜನರು ಆಶ್ರಯವನ್ನು ಪಡೆಯುತ್ತಿದ್ದಾರೆ ಎಂದು ವಿಶ್ವ ಸಂಸ್ಥೆಯ ಏಜೆನ್ಸಿ ವರದಿ ಮಾಡಿದೆ. ಮುಂದುವರೆದು ಇದಕ್ಕೆ ಹತ್ತಿರವಿರುವ ಪ್ರದೇಶವನ್ನು ಇಸ್ರೇಲ್ ನಾಗರಿಕರಿಗೆ ಸುರಕ್ಷಿತವಾದ ಪ್ರದೇಶ ಎಂದು ಘೋಷಿಸಿದೆ. ಈ ನಡುವೆ ಪರೋಕ್ಷ ಕದನ ವಿರಾಮವನ್ನು ಘೋಷಿಸಲು ಹಮಾಸ್ ನಿರಾಕರಿಸಿದೆ ಎಂಬ ಅಂಶಗಳನ್ನು ಅದು ಅಲ್ಲಗಳಿದಿದೆ.

ಈ ಯುದ್ಧದ ಕುರಿತು ಮಾತನಾಡಿರುವ ಇಸ್ರೇಲ್ ಪ್ರಧಾನಮಂತ್ರಿ ಬೆನ್ಜಮೀನ್ ನೇತನ್ಯಹೂ ಅವರು ಇಸ್ರೇಲ್ ಉದ್ದೇಶಗಳು ನೆರವೇರುವ ತನಕ ಯುದ್ಧ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

15 July 2024, 19:05