ಹುಡುಕಿ

ಲಂಡನ್ ಹೈಕೋರ್ಟ್'ನಲ್ಲಿ ಆಸ್ತಿ ವ್ಯಾಜ್ಯದ ಕುರಿತು ಸಾಕ್ಷಿ ಹೇಳಲಿರುವ ವ್ಯಾಟಿಕನ್ ಅಧಿಕಾರಿ

ವ್ಯಾಟಿಕನ್ ರಾಜ್ಯ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಆರ್ಚ್'ಬಿಷಪ್ ಎಡ್ಗರ್ ಪೆನಾ ಪರ್ರಾ ಅವರು ವ್ಯಾಟಿಕನ್ ನಗರವು ಚೆಲ್ಸಿಯಾ ನಗರದಲ್ಲಿ ಖರೀದಿಸಿರುವ ಆಸ್ತಿಯ ಕುರಿತಂತೆ ವ್ಯಾಜ್ಯದ ವಿಚಾರವೊಂದರಲ್ಲಿ ಲಂಡನ್ ಹೈ ಕೋರ್ಟಿನಲ್ಲಿ ಸಾಕ್ಷಿ ನುಡಿಯಲಿದ್ದಾರೆ ಎಂದು ವರದಿಯಾಗಿದೆ.

ವರದಿ: ಸಾಲ್ವತೋರೆ ಸೆರ್ನೂಜಿಯೋ - ಲಂಡನ್, ಅಜಯ್ ಕುಮಾರ್

ವ್ಯಾಟಿಕನ್ ರಾಜ್ಯ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಆರ್ಚ್'ಬಿಷಪ್ ಎಡ್ಗರ್ ಪೆನಾ ಪರ್ರಾ ಅವರು ವ್ಯಾಟಿಕನ್ ನಗರವು ಚೆಲ್ಸಿಯಾ ನಗರದಲ್ಲಿ ಖರೀದಿಸಿರುವ ಆಸ್ತಿಯ ಕುರಿತಂತೆ ವ್ಯಾಜ್ಯದ ವಿಚಾರವೊಂದರಲ್ಲಿ ಲಂಡನ್ ಹೈ ಕೋರ್ಟಿನಲ್ಲಿ ಸಾಕ್ಷಿ ನುಡಿಯಲಿದ್ದಾರೆ ಎಂದು ವರದಿಯಾಗಿದೆ.

ಜೂನ್ ೨೪ ರಿಂದ ಈ ಕುರಿತು ವಿಚಾರಣೆಗಳು ನಡೆದು ಸೊಲೇನ್ ಅವೆನ್ಯೂ ಆಸ್ತಿಯ ಕುರಿತಂತೆ ಮೋಸ ಹಾಗೂ ವಂಚನೆ ಎಸಗಿದ ಎಂಟು ಜನರನ್ನು ವ್ಯಾಟಿಕನ್ ನ್ಯಾಯಾಲಯವು ಶಿಕ್ಷೆಗೆ ಒಳಪಡಿಸಿದೆ. ಸದರಿ ಆಸ್ತಿಯ ಕುರಿತಂತೆ ಲಂಡನ್ನಿನ ವ್ಯಕ್ತಿಯೊಬ್ಬರು ಸಿವಿಲ್ ದಾವೆಯನ್ನು ಹೂಡಿದ್ದರು. ಈ ಕುರಿತು ವ್ಯಾಟಿಕನ್ ನ್ಯಾಯಾಲಯವು ವಿಚಾರಣೆ ನಡೆಸಿ ಶಿಕ್ಷೆ ನೀಡಿದೆ ಮಾತ್ರವಲ್ಲದೆ, ಸ್ವಿಟ್ಝರ್'ಲ್ಯಾಂಡ್ ಸಂಸ್ಥೆಯೂ ಸಹ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಪ್ರಸ್ತುತ ಈ ವಿಚಾರಗಳು ಲಂಡನ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದ್ದು, ವ್ಯಾಟಿಕನ್ ಹೆಚ್ಚುವರಿ ರಾಜ್ಯ ಕಾರ್ಯದರ್ಶಿಯಾಗಿರುವ ಆರ್ಚ್'ಬಿಷಪ್ ಎಡ್ಗರ್ ಪೆನಾ ಪರ್ರಾ ಅವರು ಈ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿಯಲಿದ್ದಾರೆ.

03 July 2024, 18:22