"ಕರುಣೆಯ ತ್ರಿತ್ವ ಬುಗ್ಗೆ" ಯ ಸಂದೇಶಗಳಿಗೆ ಹಸಿರು ನಿಶಾನೆ ತೋರಿದ ವ್ಯಾಟಿಕನ್ ವಿಶ್ವಾಸ ಪೀಠ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
ವ್ಯಾಟಿಕನ್ನಿನ ವಿಶ್ವಾಸ ಪೀಠವು ಉತ್ತರ ಇಟಲಿಯ ಕೋಮೋ ಮಹಾಧರ್ಮಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಕ್ಕಿಯೋ ಆಧ್ಯಾತ್ಮಿಕ ತಾಣದಲ್ಲಿ ಉಂಟಾಗುತ್ತಿರುವ "ಕರುಣೆಯ ತ್ರಿತ್ವ ಬುಗ್ಗೆ" (ದೈವಿಕ ಕರುಣೆಯ ಯೇಸುಕ್ರಿಸ್ತರ ಚಿತ್ರದಿಂದ ಹೊಮ್ಮುತ್ತಿರುವ ಶ್ವೇತ ಹಾಗೂ ಕೆಂಪು ಬಣ್ಣದ ಹೊನಲುಗಳಂತೆ) ಸಂದೇಶಗಳನ್ನು ಹಾಗೂ ಭಕ್ತಿ ಆಚರಣೆಯನ್ನು ಅನುಮೋದಿಸಿ, ಆ ಧರ್ಮಕ್ಷೇತ್ರದ ಕಾರ್ಡಿನಲ್ ಬಿಷಪ್ಪರಿಗೆ ಪತ್ರವನ್ನು ಕಳುಹಿಸಿದೆ.
2000 ನೇ ಇಸವಿಯಲ್ಲಿ ಜಿಯಾಕೊಮೋ ಎಂಬ ಸಂಗೀತ ಶಿಕ್ಷಕರೊಬ್ಬರಿಗೆ ಜೀವಂತ ಪರಮ ತ್ರಿತ್ವದ ಕುರಿತು ದರ್ಶನಗಳು ಕಾಣಿಸಿಕೊಂಡ ನಂತರ ಆಕೆ ಯಾರಿಗೂ ಹೇಳುವುದಿಲ್ಲ. ಐದು ವರ್ಷಗಳು ಈ ದರ್ಶನಗಳು ಕಾಣಿಸಿಕೊಳ್ಳುತ್ತಿದ್ದ ಪರಿಣಾಮ ಆಕೆ ಇದನ್ನು ಇತರರಿಗೆ ತಿಳಿಸಿ, ಅಲ್ಲಿ ಆರಾಧನೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸುವುದನ್ನು ಆರಂಭಿಸಿದಳು.
ಈ ಕುರಿತು ಹಲವು ವರ್ಷಗಳ ಕಾಲ ತನಿಖೆ ಹಾಗೂ ವಿಚಾರಣೆಗಳು ನಡೆದು ಇದೀಗ ವ್ಯಾಟಿಕನ್ನಿನ ವಿಶ್ವಾಸ ಪೀಠವು ಈ ಭಕ್ತಿ ಆಚರಣೆಯೆಡೆಗೆ ಅನುಮೋದನೆಯನ್ನು ಸೂಚಿಸಿ, ಅಲ್ಲಿನ ಕಾರ್ಡಿನಲ್ ಅವರಿಗೆ ಪತ್ರ ಬರೆದಿದೆ. ಆ ಮೂಲಕ ಇದಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ.