ಬಂಡೆಗಲ್ಲಿನ ಮೇಲೆ ದರ್ಶನವಿತ್ತ ಮಾತೆ ಮರಿಯಮ್ಮನವರ ಕುರಿತ ಭಕ್ತಿ ಆಚರಣೆಯನ್ನು ಅನುಮೋದಿಸಿದ ವಿಶ್ವಾಸ ಪೀಠ
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ನಿನ ವಿಶ್ವಾಸ ಪೀಠವು ಇಟಲಿಯ ಕಲಾಬ್ರಿಯದಲ್ಲಿ ಕೊಸಿಮೋ ಫ್ರಾಗೋಮಿನಿ ಎಂಬುವವರಿಗೆ ಮಾತೆ ಮರಿಯಮ್ಮನವರು ಬಂಡೆಗಲ್ಲಿನ ಮೇಲೆ ದರ್ಶನವಿತ್ತ ಹಿನ್ನೆಲೆ, ಬಂಡೆಗಲ್ಲಿನ ಮಾತೆ ಮರಿಯಮ್ಮನವರ ಪುಣ್ಯಕ್ಷೇತ್ರಕ್ಕೆ ಭಕ್ತಾಧಿಗಳ ಜನ ಸಾಗರ ಹರಿದು ಬರುತ್ತಿದೆ. ಇದನ್ನು ಕೂಲಂಕುಷವಾಗಿ ಪರಿಶೀಲಿಸಿ, ವಿಶ್ವಾಸ ಪೀಠವು ಈ ಆಚರಣೆಗೆ ಅನುಮೋದನೆಯನ್ನು ನೀಡಿದೆ.
ಮೊಟ್ಟ ಮೊದಲ ಬಾರಿಗೆ ೧೯೬೮ ರಲ್ಲಿ ಇಲ್ಲಿನ ಹದಿನೆಂಟು ವರ್ಷದ ಕೊಸಿಮೋ ಫ್ರಾಗೋಮಿನಿ ಎಂಬ ರೈತ ಯುವಕನಿಗೆ ಮಾತೆ ಮರಿಯಮ್ಮನವರು ದರ್ಶನವಿತ್ತರು ಎಂಬುದು ಸುದ್ದಿಯಾಗಿತ್ತು. ಅಲ್ಲಿಂದ ಈವರೆಗೂ ಇದನ್ನು ಕೂಲಂಕುಷವಾಗಿ ಪರಿಶೀಲಿಸಿರುವ ವ್ಯಾಟಿಕನ್ನಿನ ವಿಶ್ವಾಸ ಪೀಠವು, ಇದಕ್ಕೆ ಅನುಮೋದನೆ ಹಾಗೂ ಅನುಮತಿಯನ್ನು ನೀಡಿದೆ.
ಕಲಾಬ್ರಿಯಾದ ಸ್ಥಳೀಯ ಧರ್ಮಾಧ್ಯಕ್ಷರಿಗೆ ಪತ್ರ ಬರೆದಿರುವ ಪೀಠವು ಈ ಭಕ್ತಿ ಆಚರಣೆಗೆ ತಮ್ಮ ಸಹಮತವನ್ನು ಹಾಗೂ ಅಧಿಕೃತ ಮುದ್ರೆಯನ್ನು ಒತ್ತಿದೆ. ಆ ಮೂಲಕ ಈವರೆಗೂ ಇಲ್ಲಿಗೆ ಬರುತ್ತಿದ್ದ ಸಾವಿರಾರು ಭಕ್ತಾಧಿಗಳ ಮುಖದಲ್ಲಿ ಮಂದಹಾಸ ಮೂಡಿದೆ ಎಂತಲೇ ಹೇಳಬಹುದಾಗಿದೆ.