ಹುಡುಕಿ

ವಿಶ್ವ ಅಜ್ಜ-ಅಜ್ಜಿಯರ ದಿನದಂದು ಭಾಗವಹಿಸುವವರಿಗೆ ಸಾಮಾನ್ಯ ಪಾಪ ಪರಿಹಾರ ಕ್ರಮ ಘೋಷಿಸಿದ ವ್ಯಾಟಿಕನ್

ವ್ಯಾಟಿಕನ್ನಿನ ಪ್ರೇಷಿತ ಪಾಪ ಪರಿಹಾರ ಪೀಠವು (ಅಪೊಸ್ತೋಲಿಕ್ ಪೆನಿಟೆನ್ಷಿಯರಿ) ವಿಶ್ವ ಅಜ್ಜ ಅಜ್ಜಿಯರ ದಿನದಂದು ಭಾಗವಹಿಸುವ ಎಲ್ಲರಿಗೂ ಸಾಮಾನ್ಯ ಪಾಪ ಪರಿಹಾರ ಕ್ರಮ (ಪ್ಲೇನರಿ ಇಂಡಲ್ಜೆನ್ಸ್) ಅನ್ನು ಘೋಷಿಸಿದೆ.

ವರದಿ: ವ್ಯಾಟಿಕನ್ ನ್ಯೂಸ್

ವ್ಯಾಟಿಕನ್ನಿನ ಪ್ರೇಷಿತ ಪಾಪ ಪರಿಹಾರ ಪೀಠವು (ಅಪೊಸ್ತೋಲಿಕ್ ಪೆನಿಟೆನ್ಷಿಯರಿ) ವಿಶ್ವ ಅಜ್ಜ ಅಜ್ಜಿಯರ ದಿನದಂದು ಭಾಗವಹಿಸುವ ಎಲ್ಲರಿಗೂ ಸಾಮಾನ್ಯ ಪಾಪ ಪರಿಹಾರ ಕ್ರಮ (ಪ್ಲೇನರಿ ಇಂಡಲ್ಜೆನ್ಸ್) ಅನ್ನು ಘೋಷಿಸಿದೆ.   

ಭಕ್ತಾಧಿಗಳಲ್ಲಿ ಈ ಕುರಿತು ಭಕ್ತಿ ಹಾಗೂ ಜಾಗೃತಿಯನ್ನು ಮೂಡಿಸಲು ವ್ಯಾಟಿಕನ್ನಿನ ಪಾಪ ಪರಿಹಾರ ಪೀಠವು ವಿಶ್ವ ಅಜ್ಜ-ಅಜ್ಜಿಯರು ಹಾಗೂ ಹಿರಿಯರ ದಿನಾಚರಣೆಯಂದು ಭಾಗವಹಿಸುವ ಎಲ್ಲಾ ಭಕ್ತಾಧಿಗಳಿಗೂ ಸಾಮಾನ್ಯ ಪಾಪ ಪರಿಹಾರ ಕ್ರಮ (ಪ್ಲೇನರಿ ಇಂಡಲ್ಜೆನ್ಸ್) ಅನ್ನು ಘೋಷಿಸಿದೆ.   

೨೦೨೧ ರಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಸಂತರುಗಳಾದ ಜೋಕಿಮ್ ಮತ್ತು ಅನ್ನಾ ಅವರ ಸ್ಮರಣಾರ್ಥ ವಿಶ್ವದಲ್ಲಿನ ಎಲ್ಲಾ ಅಜ್ಜ-ಅಜ್ಜಿಯರು ಹಾಗೂ ಹಿರಿಯರ ಕುರಿತು ಕಾಳಜಿಯನ್ನು ವ್ಯಕ್ತಪಡಿಸುವ ಸಲುವಾಗಿ ಈ ದಿನಾಚರಣೆಯನ್ನು ಸ್ಥಾಪಸಿದ್ದರು. ಈ ವರ್ಷಷಈ ದಿನಾಚರಣೆಯನ್ನು "ನನ್ನ ವೃದ್ಧಾಪ್ಯದಲ್ಲಿ ನನ್ನನ್ನು ತಳ್ಳಿಬಿಡಬೇಡ" ಎಂಬ ಶೀರ್ಷಿಕೆಯೊಂದಿಗೆ ಆಚರಿಸಲಾಗುತ್ತದೆ.   

18 July 2024, 18:27